Vladimir Putin Horoscope: ಉಕ್ರೇನ್​ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಜ್ಯೋತಿಷಿ ಪ್ರಕಾಶ್​ ಅಮ್ಮಣ್ಣಾಯರಿಂದ ವ್ಲಾಡಿಮಿರ್ ಪುಟಿನ್ ಜಾತಕ ವಿಶ್ಲೇಷಣೆ

Vladimir Putin Horoscope: ಉಕ್ರೇನ್​ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಜ್ಯೋತಿಷಿ ಪ್ರಕಾಶ್​ ಅಮ್ಮಣ್ಣಾಯರಿಂದ ವ್ಲಾಡಿಮಿರ್ ಪುಟಿನ್ ಜಾತಕ ವಿಶ್ಲೇಷಣೆ
ವ್ಲಾಡಿಮಿರ್ ಪುಟಿನ್ (ಸಂಗ್ರಹ ಚಿತ್ರ)

ಉಕ್ರೇನ್​ ಸಂಘರ್ಷದ ಹಿನ್ನೆಲೆಯಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್ ಜನ್ಮ ಜಾತಕದ ವಿಶ್ಲೇಷಣೆ ಮಾಡಲಾಗಿದೆ. ಉಡುಪಿಯ ಕಾಪು ಮೂಲದ ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ ಈ ವಿಶ್ಲೇಷಣೆ ಮಾಡಿದ್ದಾರೆ.

TV9kannada Web Team

| Edited By: Srinivas Mata

Mar 07, 2022 | 7:04 PM

ವಿಶ್ವದಾದ್ಯಂತ ಬಹಳ ಚರ್ಚೆಯಲ್ಲಿ ಇರುವ ಈಗಿನ ಒಂದು ಹೆಸರೆಂದರೆ, ಅದು ವ್ಲಾಡಿಮಿರ್ ಪುಟಿನ್ (Vladimir Putin). ಈ ಹೆಸರು ಈಗಷ್ಟೇ ಅಲ್ಲ, ದಶಕಗಳಿಂದಲೂ ಚಾಲ್ತಿಯಲ್ಲಿದೆ. ಆದರೆ ಈಗ ಉಕ್ರೇನ್ ಜತೆಗೆ ಸಂಘರ್ಷದ ಕಾರಣಕ್ಕೆ ಇನ್ನಷ್ಟು ಜೋರಾಗಿಯೇ ಓಡಾಡುತ್ತಿದೆ. ಇಂಥ ಪುಟಿನ್​ ಜಾತಕದ ಬಗ್ಗೆ ಉಡುಪಿಯ ಕಾಪು ಮೂಲದ ಜ್ಯೋತಿಷಿ ಪ್ರಕಾಶ್​ ಅಮ್ಮಣ್ಣಾಯ ಅವರು ಜಾತಕವನ್ನು ಪರಾಂಬರಿಸಿ, ವಿಶ್ಲೇಷಣಾತ್ಮಕವಾಗಿ ವಿವರಿಸಿದ್ದಾರೆ. “ನನಗೆ ಲಭಿಸಿದ ಮಾಹಿತಿಯಂತೆ, ವ್ಲಾಡಿಮಿರ್​ ಪುಟಿನ್​​ದು ವೃಷಭ ರಾಶಿ. ಅಂದರೆ ಚಂದ್ರ ಉಚ್ಚ ಸ್ಥಿತಿಯಲ್ಲಿದ್ದು, ಜತೆಗೆ ಕನ್ಯಾ ರಾಶಿಯಲ್ಲಿ ಬುಧ ಉಚ್ಚ ಸ್ಥಿತಿಯಲ್ಲಿ ಇದ್ದಾನೆ. ಇನ್ನು ತುಲಾ ಲಗ್ನವಾಗಿದ್ದು, ಅಲ್ಲೇ ಶುಕ್ರ ಇರುವುದರಿಂದ ಮಾಲವ್ಯ ಯೋಗ ಇದೆ,” ಎಂದು ಟಿವಿ9ಕನ್ನಡ ಡಿಜಿಟಲ್​ಗೆ ವಿವರಣೆ ನೀಡಿದ್ದಾರೆ. ಆದರೆ ಯಾವಾಗ ಧನು ರಾಶಿಯಲ್ಲಿ ಶನಿ ಸಂಚಾರ ಮಾಡುತ್ತಿತ್ತೋ ಆ ವೇಳೆ ಪುಟಿನ್​ ಆರೋಗ್ಯ ಸ್ಥಿತಿ ಬಳ ಕೆಟ್ಟದಾಗಿತ್ತು. ಇನ್ನೇನು ಪುಟಿನ್ ಕಥೆ ಮುಗಿದೇ ಹೋಯಿತು ಎಂಬ ಸ್ಥಿತಿ ಇದ್ದ 2017-20ರ ಮಧ್ಯೆ ಅದ್ಯಾವ ಬಲವೋ ಚೇತರಿಸಿಕೊಂಡು, ಸುಧಾರಿಸಿಕೊಂಡಿದ್ದಾರೆ.

ಇನ್ನು ಮುಂದೆ ಇಂಥ ಆತಂಕಗಳು ಯಾವುದೂ ಪುಟಿನ್​ಗೆ ಇಲ್ಲ. ಅಂಶ ಬಲಿಷ್ಠ ಶನಿ ದಶೆಯು, 2022ರ ನಂತರ ಏಪ್ರಿಲ್​ನಲ್ಲಿ ರಾಶಿಯಿಂದ ಹನ್ನೊಂದನೇ ಮನೆಯಲ್ಲಿ ಇರಲಿರುವ ಗುರು ಗ್ರಹ, 2025ರ ಹೊತ್ತಿಗೆ ಜನ್ಮ ರಾಶಿಗೆ ಲಾಭ ಸ್ಥಾನವನ್ನು ಪ್ರವೇಶಿಸುವ ಶನಿ ಗ್ರಹ ಇವೆಲ್ಲ ಸೇರಿಕೊಂಡು, ಪುಟಿನ್​ರನ್ನು ಮಂಡಿಯೂರುವಂತೆ ಮಾಡುವುದು ಅಸಾಧ್ಯದ ಮಾತು. ಈತ ತನ್ನ ದೇಶದ ಇತಿಹಾಸದಲ್ಲಿ ಉಳಿದುಹೋಗುವಂಥ ಹೆಸರು ಸಂಪಾದಿಸಲಿದ್ದಾರೆ. ಆರೋಗ್ಯ, ಆಯುಷ್ಯ ಕೂಡ ಉತ್ತಮವಾಗಿರಲಿದೆ ಎಂದು ಅವರು ಹೇಳಿದ್ದಾರೆ.

ಈ ವ್ಯಕ್ತಿ ತನ್ನ ಬದುಕಿನ ಉದ್ದಕ್ಕೂ ಅಧಿಕಾರವನ್ನು ಅನುಭವಿಸುವುದಕ್ಕೆ ಶುಕ್ರನ ಅನುಗ್ರಹ ಇದೆ. ಲಗ್ನದಲ್ಲೇ ಶುಕ್ರ ಇರುವುದರಿಂದ ಲೋಲುಪನಾದ ವ್ಯಕ್ತಿ ಆಗಿದ್ದು, ಎಲ್ಲ ಬಗೆಯ ವಿಲಾಸವಾದ ಜೀವನದ ಕಡೆಗೆ ಆಕರ್ಷಣೆ ಇರುತ್ತದೆ. ಅದೇ ರೀತಿ ಸ್ತ್ರೀಯರಲ್ಲೂ ಅತಿಯಾದ ಆಸಕ್ತಿ ಇರುತ್ತದೆ ಮತ್ತು ಇವರಿಗೆ ಸ್ತ್ರೀಯರನ್ನು ಆಕರ್ಷಿಸುವ ಶಕ್ತಿಯೂ ಇರುತ್ತದೆ. ಒಮ್ಮೆ ಯಾವ್ಯಾವ ರಾಶಿಯಲ್ಲಿ ಯಾವ ಗ್ರಹಗಳಿವೆ ಎಂಬುದನ್ನು ತಿಳಿಸಿಬಿಡುತ್ತೇವೆ. ಮೇಷದಲ್ಲಿ ಗುರು, ವೃಷಭದಲ್ಲಿ ಚಂದ್ರ, ಕರ್ಕಾಟಕದಲ್ಲಿ ಕೇತು, ಕನ್ಯಾದಲ್ಲಿ ರವಿ, ಬುಧ ಹಾಗೂ ಶನಿ, ತುಲಾ ಲಗ್ನ ಆಗಿದ್ದು, ಅಲ್ಲೇ ಶುಕ್ರ ಇದೆ. ಧನುವಿನಲ್ಲಿ ಕುಜ ಮತ್ತು ಮಕರ ರಾಶಿಯಲ್ಲಿ ರಾಹು ಹಾಗೂ ಮಾಂದಿ ಇದೆ.

ಇನ್ನು ಉಕ್ರೇನ್ ಜತೆಗಿನ ಸಂಘರ್ಷದ ಬಗ್ಗೆ ಹೇಳುವುದಾದರೆ, ಇದು ಸದ್ಯಕ್ಕೆ ನಿಲ್ಲುವುದಿಲ್ಲ. ಇನ್ನೂ ಕೆಲ ಸಮಯ ಹಾಗೇ ಮುಂದುವರಿಯುತ್ತದೆ. ವ್ಲಾಡಿಮಿರ್​ ಪುಟಿನ್​ರನ್ನು ಯಾವುದೇ ಆರ್ಥಿಕ ದಿಗ್ಬಂಧನಗಳಾಗಲೀ, ನಿರ್ಬಂಧಗಳಾಗಲೀ ಕಟ್ಟಿ ಹಾಕುವುದು ಅಸಾಧ್ಯದ ಮಾತು. ಈ ಲೇಖನದ ಆರಂಭದಲ್ಲಿ ಹೇಳಿದಂತೆ, ಪುಟಿನ್​ ಪಾಲಿನ ಸವಾಲಿನ- ಕಷ್ಟದ ದಿನಗಳೆಲ್ಲ ಮುಗಿದು ಹೋಗಿವೆ. ಇನ್ನೇನಿದ್ದರೂ ಹೆಸರು ಮಿಂಚುವ ಕಾಲ ಇದು. ಉಚ್ಚ ಬುಧ ಎಂಥ ಬುದ್ಧಿವಂತಿಕೆ, ಶುಕ್ರ ಎಂಥ ಅಧಿಕಾರವನ್ನು ನೀಡಬಹುದು ಎಂಬುದಕ್ಕೆ ಈತ ಅತ್ಯುತ್ತಮ ಉದಾಹರಣೆ.

ಇದನ್ನೂ ಓದಿ: Uttar Pradesh 2022 Elections Prediction: ಕರ್ನಾಟಕದ ಖ್ಯಾತ ಜ್ಯೋತಿಷಿಯಿಂದ ಉತ್ತರಪ್ರದೇಶ ಚುನಾವಣೆ ಭವಿಷ್ಯ

Follow us on

Related Stories

Most Read Stories

Click on your DTH Provider to Add TV9 Kannada