Tamil Nadu : ನಮ್ಮ ದೇಶವು ಇಂದು 77ನೇ ಸ್ವಾತಂತ್ರ್ಯೋತ್ಸವದ (Independence Day) ಸಂಭ್ರಮದಲ್ಲಿದೆ. ಎಲ್ಲಿ ನೋಡಿದರೂ ತ್ರಿವರ್ಣ ಧ್ವಜಗಳು ರಾರಾಜಿಸುತ್ತಿವೆ. ಮನೆ, ಶಾಲೆ, ಕಾಲೇಜು, ಕಚೇರಿ, ಬೆಟ್ಟ ಗುಡ್ಡಗಳ ಮೇಲೂ! ಆದರೆ ನೀರಿನೊಳಗೆ ಧ್ವಜಾರೋಹಣ ಮಾಡಿದ್ದನ್ನು ನೋಡಿದ್ದೀರೇ? ಚೆನ್ನೈನ ರಾಮೇಶ್ವರಂನಲ್ಲಿ ಇಂಡಿಯನ್ ಕೋಸ್ಟ್ ಗಾರ್ಡ್ ನೀರಿನೊಳಗೆ ಧ್ವಜಾರೋಹಣ ಮಾಡಿದ ವಿಡಿಯೋ ಮಾಡಿದೆ. ಈ ವಿಡಿಯೋ ಇದೀಗ ವೈರಲ್ ಆಗಿದ್ದು ಅನೇಕ ನೆಟ್ಟಿಗರು ಅಚ್ಚರಿಯಿಂದ ನೋಡುತ್ತಿದ್ದಾರೆ, ಅಲ್ಲದೆ ಈ ಸಂಗತಿಯನ್ನು ಹೀಗೆ ಯಶಸ್ವಿಯಾಗಿ ಕಾರ್ಯಗತಗೊಳಿಸಿದ್ದರ ಬಗ್ಗೆ ಹೆಮ್ಮೆಯನ್ನೂ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ : Viral Brain Teaser: ಕೆಂಪು ಪಾಂಡಾಗಳ ನಡುವೆ ಮೂರು ನರಿಗಳು ಅಡಗಿವೆ, ಹುಡುಕುವಿರಾ?
ಈ ವಿಡಿಯೋ ಅನ್ನು ಎಎನ್ಐ ಸುದ್ದಿಸಂಸ್ಥೆಯು ಟ್ವೀಟ್ ಮಾಡಿದೆ. ಇಂಡಿಯನ್ ಕೋಸ್ಟ್ ಗಾರ್ಡ್ ಸಿಬ್ಬಂದಿಯು ನೀರಿನಾಳಕ್ಕಿಳಿದು ರಾಷ್ಟ್ರಧ್ವಜವನ್ನು ಹಾರಿಸಿ ಸೆಲ್ಯೂಟ್ ಹೊಡೆದು ಗೌರವ ತೋರುವುದನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ. 2 ಗಂಟೆಗಳ ಹಿಂದೆಯಷ್ಟೇ ಹಂಚಿಕೊಂಡ ಈ ವಿಡಿಯೋ ಅನ್ನು ಈತನಕ 93,000 ಜನರು ನೋಡುತ್ತಿದ್ದಾರೆ. ಈ ವಿಡಿಯೋ ಶರವೇಗದಲ್ಲಿ ಜನರನ್ನು ತಲುಪುತ್ತಿದೆ. ಸುಮಾರು 6,000 ಜನರು ಲೈಕ್ ಮಾಡಿದ್ದು, 800 ಜನರು ರೀಟ್ವೀಟ್ ಮಾಡಿದ್ದಾರೆ.
#WATCH | Underwater hoisting of national flag by Indian Coast Guard personnel near Rameshwaram, Tamil Nadu on Independence Day
(Video source: Indian Coast Guard) pic.twitter.com/SPGsU3HxDj
— ANI (@ANI) August 15, 2023
ನಿಜಕ್ಕೂ ಇದು ಅತ್ಯಂತ ಹೆಮ್ಮೆಯ ಕ್ಷಣ ಎಂದಿದ್ದಾರೆ ಕೆಲವರು. ಜೈಹಿಂದ್, ಭಾರತಮಾತಾಕೀ ಹೈ, ಇದು 2023ರ ಸಾಧನೆ ಮತ್ತು ನಮ್ಮ ಸೇನೆ ಮತ್ತು ದೇಶದ ಬಗ್ಗೆ ಹೆಮ್ಮೆ ಮೂಡಿಸುವ ಸಂಗತಿ ಅಂತೆಲ್ಲ ಪ್ರತಿಕ್ರಿಯಿಸಿದ್ದಾರೆ ಅನೇಕರು. ಹೀಗೆ ನೀರಿನಲ್ಲಿ ಧ್ವಜವನ್ನು ಹಾರಿಸಿದ ಮಾತ್ರಕ್ಕೆ ದೇಶದ ಸಮಸ್ಯೆಗಳು ಪರಿಹಾರವಾದಂತೆಯೇ? ಮಣಿಪುರ ಹೊತ್ತಿ ಉರಿಯುತ್ತಿದೆ, ಸಾವಿನ ಸಂಖ್ಯೆ 180ಕ್ಕೆ ಏರಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ ಒಬ್ಬರು.
By Indian Navy🇮🇳 pic.twitter.com/jXBbwe8jFm
— Dileep Kumar Singh (@Dileep_singh470) August 15, 2023
ಧ್ವಜವು ನೀರು ಮತ್ತು ಮಣ್ಣನ್ನು ತಾಕಬಾರದು ಎಂದು ಹೇಳಲಾಗಿದೆ ಎಂದಿದ್ದಾರೆ ಇನ್ನೊಬ್ಬರು. ನಾನು ಈ ಎರಡೂ ವಿಡಿಯೋಗಳನ್ನು ಮತ್ತೆ ಮತ್ತೆ ನೋಡುತ್ತಿದ್ದೇನೆ ದೇಶದ ಸೈನಿಕರ ಬಗ್ಗೆ ಮತ್ತು ದೇಶದ ಬಗ್ಗೆ ಅಭಿಮಾನ ಪ್ರೀತಿ ಮೂಡುತ್ತಿದೆ ಎಂದಿದ್ದಾರೆ ಮತ್ತೊಬ್ಬರು.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 1:27 pm, Tue, 15 August 23