
Cake : ಬಾಯಿ ಚಪ್ಪರಿಸಿ ತಿನ್ನುವ ಪಾನೀಪೂರಿ ಹೇಗೆ ತಯಾರಿಸುತ್ತಾರೆ ಮತ್ತು ಉಪ್ಪುಪ್ಪಾಗಿರುವ ಹಸಿರು ಬಟಾಣಿಯನ್ನು ಹೇಗೆ ತಯಾರಿಸುತ್ತಾರೆ ಎನ್ನುವ ವಿಡಿಯೋಗಳನ್ನು ಇತ್ತೀಚೆಗಷ್ಟೇ ನೋಡಿದಿರಿ. ಕೆಲವೆಡೆ ಕೇಕ್ಗಳನ್ನು ಹೇಗೆ ತಯಾರಿಸುತ್ತಾರೆ ಎನ್ನುವುದನ್ನೂ ಈಗ ವೈರಲ್ ಆಗಿರುವ ಈ ವಿಡಿಯೋದಲ್ಲಿ ನೋಡಬಹುದು. ಬಣ್ಣದ ಬಣ್ಣದ ಕ್ರೀಮ್ ಕೇಕ್ಗಳ ತಯಾರಿಕೆಯ ವಿಡಿಯೋ ನೋಡುತ್ತಿರುವ ನೆಟ್ಟಿಗರು ಹೌಹಾರಿದ್ದಾರೆ. ಜನ್ಮದಲ್ಲಿ ಕೇಕ್ ತಿನ್ನುವುದಿಲ್ಲ ಎನ್ನುತ್ತಿದ್ದಾರೆ. ಇನ್ನೂ ಕೆಲವರು, ಇಂಥ ಕೇಕ್ಗಳನ್ನು ತಿನ್ನುತ್ತಿರುವುದಕ್ಕೇ ನಮ್ಮಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿರುವುದು ಎಂದು ಹೇಳಿದ್ದಾರೆ. ಈ ವಿಡಿಯೋ ನೋಡಿದ ನೀವೇನು ಹೇಳುತ್ತೀರಿ?
@chiragbarjatyaa ಎನ್ನುವವರು ಈ ವಿಡಿಯೋ ಟ್ವೀಟ್ ಮಾಡಿದ್ದಾರೆ. ಕೇಕ್ ತಯಾರಿಸುವ ಕೋಣೆ ಹೇಗಿದೆ ಮತ್ತು ಅದಕ್ಕೆ ಬಳಸುವ ಪರಿಕರಗಳು ಹೇಗಿವೆ ಎನ್ನುವುದನ್ನು ಇಲ್ಲಿ ನೋಡಬಹುದಾಗಿದೆ. ಇಲ್ಲಿರುವ ಪೊರಕೆ ನೆಟ್ಟಿಗರ ವಿಶೇಷ ಗಮನ ಸೆಳೆದಿದೆ ಜೊತೆಗೆ ಕೇಕ್ ಹಿಟ್ಟನ್ನು ಸುರಿ ನ್ಯೂಸ್ ಪೇಪರ್ಗಳ ಮೇಲೆ ಸುರಿಯುವ ದೃಶ್ಯವೂ.
ಇದನ್ನೂ ಓದಿ : Viral Video: ಸ್ಪೈರಲ್ ಬನಾನಾ ಟ್ವಿಸ್ಟರ್ ಎಲ್ಲಿ ಸಿಗುತ್ತದೆ? ಹುಡುಕಾಟದಲ್ಲಿ ಬೆಂಗಳೂರಿಗರು
ಸುಮಾರು 1 ಲಕ್ಷ ಜನರು ಈ ವಿಡಿಯೋ ನೋಡಿದ್ದಾರೆ. ಕೆಲವರು ಶುಚಿತ್ವಕ್ಕೆ ಸಂಬಂಧಿಸಿ ಆತಂಕ ವ್ಯಕ್ತಪಡಿಸಿದ್ದಾರೆ. ಆದರೆ ಇನ್ನೂ ಕೆಲವರು ಇದರಲ್ಲಿ ಅಚ್ಚರಿಯಾಗುವಂಥದ್ದೇನಿಲ್ಲ, ಬಾಲ್ಯದಿಂದ ಇಂಥ ಕೇಕ್ಗಳಿಗಾಗಿ ನಾವು ವರ್ಷಗಟ್ಟಲೇ ಕಾಯ್ದಿದ್ದಿಲ್ಲವೆ? ನಾಲಗೆಯ ಮೇಲಿಟ್ಟಾಗ ಎಂದಾದರೂ ಇದನ್ನು ಹೇಗೆ ತಯಾರಿಸಿದರು ಎಂದೆಲ್ಲ ಯೋಚಿಸಿದ್ದೆದೆಯೇ? ಈಗಲೂ ಅಷ್ಟೇ, ಕೇಕ್ ತಿನ್ನುವಾಗ ಈಗ ವೈರಲ್ ಆಗಿರುವ ಈ ವಿಡಿಯೋ ಕೂಡ ಮರೆತುಹೋಗುತ್ತದೆ! ಎಂದಿದ್ದಾರೆ ಅನೇಕರು.
ಇದನ್ನೂ ಓದಿ : Viral Video: ದಪ್ಪನೆಯ ಮಹಿಳೆಯನ್ನು ಅವಮಾನಿಸಿದ ವಿಮಾನ ಪ್ರಯಾಣಿಕ; ಕ್ಲಾಸ್ ತೆಗೆದುಕೊಂಡ ನೆಟ್ಟಿಗರು
ಈಗ ನೀವೇನು ನಿರ್ಧಾರ ತೆಗೆದುಕೊಳ್ಳುತ್ತೀರಿ? ಬೇಕರಿಗಳಲ್ಲಿ ತಯಾರಾಗುವ ಇಂಥ ಕೇಕ್ಗಳಿಂದ ದೂರವಿರುತ್ತೀರೇ? ಅಥವಾ ಮನೆಯಲ್ಲಿಯೇ ಮಾಡಿ ತಿನ್ನುತ್ತೀರೇ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ