ರೈಲು ಹತ್ತಲು ಪರದಾಡುತ್ತಿದ್ದ ವಿಶೇಷ ಚೇತನ ವ್ಯಕ್ತಿಗೆ ಹೆಗಲು ನೀಡಿದ ಪೊಲೀಸ್ : ಹೃದಯ ಸ್ಪರ್ಶಿ ವಿಡಿಯೋ

ಉತ್ತರಪ್ರದೇಶದಲ್ಲಿ ಮಾನವೀಯತೆ ಮೆರೆದ ಪೊಲೀಸ್ ಅಧಿಕಾರಿಯ ವಿಡಿಯೋ ವೈರಲ್ ಆಗಿದೆ. ರೈಲು ಹತ್ತಲು ಕಷ್ಟಪಡುತ್ತಿದ್ದ ಅಂಗವಿಕಲ ವ್ಯಕ್ತಿಗೆ ಪೋಲಿಸ್ ಅಧಿಕಾರಿಯೊಬ್ಬರು ಸಹಾಯ ಮಾಡಿದ್ದಾರೆ. ಕರ್ತವ್ಯ ನಿರತರಾಗಿದ್ದ ಅಶ್ವನಿ ಕುಮಾರ್ ಎಂಬ ಪೊಲೀಸ್ ಅಧಿಕಾರಿ ವಿಶೇಷ ಚೇತನ ವ್ಯಕ್ತಿಯನ್ನು ಹೆಗಲ ಮೇಲೆ ಹಾಕಿಕೊಂಡು ರೈಲು ಹತ್ತಿಸಿದ್ದಾರೆ. ಈ ನಿಸ್ವಾರ್ಥ ಸೇವೆಗೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗಿದೆ.

ರೈಲು ಹತ್ತಲು ಪರದಾಡುತ್ತಿದ್ದ ವಿಶೇಷ ಚೇತನ ವ್ಯಕ್ತಿಗೆ ಹೆಗಲು ನೀಡಿದ ಪೊಲೀಸ್ : ಹೃದಯ ಸ್ಪರ್ಶಿ ವಿಡಿಯೋ
ವೈರಲ್​​ ವಿಡಿಯೋ

Updated on: Oct 31, 2025 | 6:03 PM

ಉತ್ತರಪ್ರದೇಶ, .31: ಪೊಲೀಸರ ನಿಸ್ವಾರ್ಥ ಸೇವೆಗೆ ಇದೊಂದು ವಿಡಿಯೋ ಸಾಕ್ಷಿ, ಉತ್ತರಪ್ರದೇಶದಲ್ಲಿ (UP police) ಮನುಷ್ಯತ್ವದ ಮೇಲೆ ಬೆಳಕು ಚೆಲ್ಲುವ ಘಟನೆಯೊಂದು ನಡೆದಿದೆ. ಯುಪಿಯ ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ಕರ್ತವ್ಯದ ವೇಳೆ ಅಂಗವಿಕಲ ವ್ಯಕ್ತಿಗೆ ರೈಲು ಹತ್ತಲು ಸಹಾಯ ಮಾಡಿದ್ದಾರೆ. ಜನ ದಟ್ಟಣೆ ಇದ್ದ ರೈಲು ಹತ್ತಲು ಪರದಾಡುತ್ತಿದ್ದ ವಿಶೇಷ ಚೇತನ ವ್ಯಕ್ತಿಗೆ ಪೊಲೀಸ್​​ ಅಧಿಕಾರಿ ಸಹಾಯ ಮಾಡಿದ್ದಾರೆ. ಇದೀಗ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ಆಗಿದೆ. ಪೊಲೀಸ್​​ ಅಧಿಕಾರಿಯ ಕೆಲಸಕ್ಕೆ ಎಲ್ಲ ಕಡೆಯಿಂದ ಪ್ರಶಂಸೆ ವ್ಯಕ್ತವಾಗಿದೆ. ಸ್ವಾರ್ಥ ಜಗತ್ತಿನಲ್ಲಿ ಇಂಥಹ ನಿಸ್ವಾರ್ಥ ಸೇವೆ ಧನ್ಯವಾದ ಹೇಳಲೇಬೇಕು ಎಂದು ನೆಟ್ಟಿಗರು ಹೇಳಿದ್ದಾರೆ.

ಈ ವೀಡಿಯೊದಲ್ಲಿ ಹೇಳಿರುವ ಪ್ರಕಾರ, ಪೊಲೀಸ್ ಅಧಿಕಾರಿ ಅಶ್ವನಿ ಕುಮಾರ್ ರೈಲ್ವೆ ನಿಲ್ದಾಣದಲ್ಲಿ ಕರ್ತವ್ಯದಲ್ಲಿದ್ದಾಗ, ವಿಶೇಷ ಚೇತನ ವ್ಯಕ್ತಿಯೊಬ್ಬರು ರೈಲ್ವೆ ನಿಲ್ದಾಣದ ಮೆಟ್ಟಿಲು ಇಳಿಯಲು ಕಷ್ಟ ಪಡುತ್ತಿದ್ದ ವೇಳೆ, ಪೊಲೀಸ್​​ ಅಧಿಕಾರಿಯೊಬ್ಬರು ವಿಶೇಷ ಚೇತನ ವ್ಯಕ್ತಿಯನ್ನು ವಿಚಾರಿಸಿ, ಹೆಗಲ ಮೇಲೆ ಹಾಕಿಕೊಂಡು ಅವರನ್ನು ರೈಲಿನ ಬಳಿ ಬಿಟ್ಟು ಬಂದಿದ್ದಾರೆ. ಇದೀಗ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಪ್ರಶಂಸೆಗೆ ಕಾರಣವಾಗಿದೆ. ವಿಡಿಯೋವನ್ನು ಅವರು ತಮ್ಮ ಇನ್ಸ್ಟಾಗ್ರಾಮ್​​​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಮೂರು ತಿಂಗಳಲ್ಲಿ 50 ಕೆಜಿ ತೂಕ ಇಳಿಸಿಕೊಂಡರೆ ಐಷಾರಾಮಿ ಪೋರ್ಷೆ ಕಾರು!

ವೈರಲ್ವಿಡಿಯೋ ಇಲ್ಲಿದೆ ನೋಡಿ:

ವಿಡಿಯೋದಲ್ಲಿ ಹೀಗೆ ಬರೆದುಕೊಂಡಿದ್ದಾರೆ. “ಹಣದಿಂದ ಮಾತ್ರವಲ್ಲ ಸಹಾಯ ಮಾಡುವುದು, ಕಾಳಜಿ ವಹಿಸುವ ಹೃದಯ ಬೇಕು, ಅದು ನಿಮ್ಮಲ್ಲಿ ಇದೆ. ಮಾನವೀಯತೆಗಿಂತ ದೊಡ್ಡದಲ್ಲಎಂದು ಬರೆದುಕೊಂಡಿದ್ದಾರೆ. ಬಳಕೆದಾರರು ಪೊಲೀಸರ ನಮ್ರತೆ ಮತ್ತು ಮಾನವೀಯತೆಯನ್ನು ಶ್ಲಾಘಿಸಿದ್ದು, ಇಂದಿನ ವೇಗದ ಜಗತ್ತಿನಲ್ಲಿ ಇಂಥಹ ದೃಶ್ಯಗಳು ಕಂಡು ಬರುವುದು ಅಪರೂಪ ಎಂದು ಹೇಳಿದ್ದಾರೆ. ಒಬ್ಬ ಬಳಕೆದಾರರು ಇದು ಶುದ್ಧ ಮಾನವೀಯತೆ, ನಿಮಗೆ ಒಳ್ಳೆಯದಾಗಲಿ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ಅಲ್ಲಿ ಅಷ್ಟು ಜನ ಇದ್ರು, ಯಾರು ಕೂಡ ಸಹಾಯಕ್ಕೆ ಬಂದಿಲ್ಲ, ಆದರೆ ನೀವು ದೇವರಂತೆ ಬಂದು ಸಹಾಯ ಮಾಡಿದನ್ನು ಯಾವತ್ತೂ ಮರೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ನಿಮ್ಮಂತಹ ಜನರಿಂದಾಗಿ ಮಾನವೀಯತೆ ಇನ್ನೂ ಜೀವಂತವಾಗಿದೆ ಎಂದು ಹೇಳಿದ್ದಾರೆ.

ವೈರಲ್ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ