ರಾಷ್ಟ್ರೀಯ ಏಕತಾ ದಿವಸ್ ಮೆರವಣಿಗೆಯಲ್ಲಿ ಮೋದಿಯ ಮೆಚ್ಚುಗೆ ಗಳಿಸಿದ ಭಾರತೀಯ ತಳಿಯ ನಾಯಿಗಳು
ಈ ವರ್ಷದ ಏಕತಾ ಪ್ರತಿಮೆಯಲ್ಲಿ ನಡೆದ ರಾಷ್ಟ್ರೀಯ ಏಕತಾ ದಿವಸ್ ಆಚರಣೆಯಲ್ಲಿ ಸ್ಥಳೀಯ ಭಾರತೀಯ ಶ್ವಾನ ತಳಿಗಳು ಗಮನ ಸೆಳೆದವು. ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150 ನೇ ಜನ್ಮ ದಿನಾಚರಣೆಯನ್ನು ಗುರುತಿಸಿ ಪ್ರಧಾನಿ ನರೇಂದ್ರ ಮೋದಿ, ಗುಜರಾತ್‌ನ ಏಕತಾ ನಗರದಲ್ಲಿ ನಡೆಯಲಿರುವ ರಾಷ್ಟ್ರೀಯ ಏಕತಾ ದಿನದ ಮೆರವಣಿಗೆಯಲ್ಲಿ ಭಾರತೀಯ ತಳಿಗಳು ಮಾತ್ರ ಬಿಎಸ್‌ಎಫ್ ಅನ್ನು ಪ್ರತಿನಿಧಿಸುತ್ತವೆ ಎಂದು ಘೋಷಿಸಿದರು. ಈ ನಾಯಿಗಳ ಯುದ್ಧತಂತ್ರ ಮತ್ತು ಕಾರ್ಯಾಚರಣೆಯ ಕೌಶಲ್ಯಗಳನ್ನು ಪ್ರದರ್ಶಿಸುವ ವಿಶೇಷ ಪ್ರದರ್ಶನದೊಂದಿಗೆ ಇದು ಸ್ವಾವಲಂಬಿ ಮತ್ತು ಹೆಮ್ಮೆಯ ಭಾರತದ ಕೆ 9 ಶಕ್ತಿಯ ಸಂಕೇತವಾಗಿದೆ.

ನವದೆಹಲಿ, ಅಕ್ಟೋಬರ್ 31: ಇಂದು ಸರ್ದಾರ್ ವಲ್ಲಭಭಾಯಿ ಪಟೇಲ್ (Sardar Vallabhbhai Patel) ಅವರ 150ನೇ ಜನ್ಮ ದಿನಾಚರಣೆ ಪ್ರಯುಕ್ತ ಗುಜರಾತ್‌ನ ಏಕತಾನಗರದಲ್ಲಿ ಆಯೋಜಿಸಲಾಗಿದ್ದ ಪರೇಡ್ನಲ್ಲಿ ಹಲವು ವಿಶೇಷತೆಗಳಿತ್ತು. ಅದರಲ್ಲಿ ಭಾರತೀಯ ತಳಿಯ ಶ್ವಾನಗಳ ಪ್ರದರ್ಶನವೂ ಒಂದು. ಈ ವಿಷಯದಲ್ಲೂ ಮೇಡ್ ಇನ್ ಇಂಡಿಯಾ ಸಂಕಲ್ಪಕ್ಕೆ ಮೋದಿ ಸರ್ಕಾರ ಬದ್ಧವಾಗಿದೆ. ಸಾಮಾನ್ಯವಾಗಿ ಪೊಲೀಸ್ ಇಲಾಖೆಯಲ್ಲಿ, ಮಿಲಿಟರಿಯಲ್ಲಿ ವಿದೇಶಿ ತಳಿಗಳ ನಾಯಿಗಳಿಗೆ ಟ್ರೈನಿಂಗ್ ಕೊಟ್ಟು ಬಳಸಲಾಗುತ್ತದೆ. ಆದರೆ, ಪ್ರಧಾನಿ ನರೇಂದ್ರ ಮೋದಿ ನಮ್ಮ ಭಾರತೀಯ ಸ್ಥಳೀಯ ಜಾತಿಯ ನಾಯಿಗಳಿಗೆ ತರಬೇತಿ ನೀಡಿ ಸೇನೆಯಲ್ಲಿ ಬಳಸಿಕೊಳ್ಳಲು ಸೂಚನೆ ನೀಡಿದ್ದರು. ಅದರಂತೆ ಭಾರತೀಯ ತಳಿಗಳಾದ ಮುಧೋಳ ಮತ್ತು ರಾಂಪುರ ಹೌಂಡ್ ತಳಿಯ ನಾಯಿಗಳಿಗೆ ತರಬೇತಿ ನೀಡಿ ಸೇನೆಯಲ್ಲಿ ಸೇರಿಸಿಕೊಳ್ಳಲಾಗಿದೆ.
ಇಂದು ಏಕತಾ ನಗರದಲ್ಲಿ ನಡೆದ ಮುಧೋಳ ಮತ್ತು ರಾಂಪುರ ಹೌಂಡ್ ತಳಿಯ ನಾಯಿಗಳ ಕಸರತ್ತು ಮತ್ತು ಪ್ರದರ್ಶನ ಪ್ರಧಾನಿ ನರೇಂದ್ರ ಮೋದಿಯವರ ಮೆಚ್ಚುಗೆಗೆ ಪಾತ್ರವಾಗಿದೆ. ಪ್ರಧಾನಿ ಮೋದಿ ಅವರು 2018ರಲ್ಲಿ ಬಿಎಸ್‌ಎಫ್ ರಾಷ್ಟ್ರೀಯ ಶ್ವಾನ ತರಬೇತಿ ಕೇಂದ್ರಕ್ಕೆ ಭೇಟಿ ನೀಡಿದ ನಂತರ ಅವರ ಸೂಚನೆಯಂತೆ ರಾಂಪುರ ಹೌಂಡ್ ಮತ್ತು ಮುಧೋಳ ಶ್ವಾನ ತಳಿಗಳಿಗೆ ತರಬೇತಿ ನೀಡಿ ಗಡಿ ಮತ್ತು ನಕ್ಸಲ್ ವಿರೋಧಿ ಕಾರ್ಯಾಚರಣೆಗಳು ಸೇರಿದಂತೆ ಕಾರ್ಯತಂತ್ರದ ಪ್ರದೇಶಗಳಲ್ಲಿ ನಿಯೋಜಿಸಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




