AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸರ್ದಾರ್ ಪಟೇಲ್ ಮೇಲೆ ಮುಸ್ಲಿಂ ಲೀಗ್​ನಿಂದ ನಡೆದಿತ್ತು 2 ಮಾರಕ ದಾಳಿ; 86 ವರ್ಷದ ಹಿಂದಿನ ಕತೆ ಬಿಚ್ಚಿಟ್ಟ ಬಿಜೆಪಿ

ಇಂದು ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150ನೇ ಹುಟ್ಟುಹಬ್ಬ. ಗುಜರಾತಿನಲ್ಲಿ ನಿರ್ಮಾಣವಾಗಿರುವ ಏಕತಾ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ ಈ ಜನ್ಮ ಜಯಂತಿಯಲ್ಲಿ ಪಾಲ್ಗೊಂಡಿದ್ದಾರೆ. ದೇಶಾದ್ಯಂತ ಹಲವೆಡೆ ಸರ್ದಾರ್ ಪಟೇಲ್ ಅವರ ಜಯಂತಿಯನ್ನು ಆಚರಿಸಲಾಗಿದೆ. ಈ ನಡುವೆ 86 ವರ್ಷಗಳ ಹಿಂದೆ ಸರ್ದಾರ್ ಪಟೇಲ್ ಮೇಲೆ ನಡೆದಿದ್ದ ಮಾರಕ ದಾಳಿಯ ಬಗ್ಗೆ ಬಿಜೆಪಿ ಪ್ರಸ್ತಾಪಿಸಿದೆ. ಈ ವಿಷಯವನ್ನು ಕಾಂಗ್ರೆಸ್ ಮರೆಮಾಡಿತ್ತು ಎಂದು ಆರೋಪಿಸಿದೆ.

ಸರ್ದಾರ್ ಪಟೇಲ್ ಮೇಲೆ ಮುಸ್ಲಿಂ ಲೀಗ್​ನಿಂದ ನಡೆದಿತ್ತು 2 ಮಾರಕ ದಾಳಿ; 86 ವರ್ಷದ ಹಿಂದಿನ ಕತೆ ಬಿಚ್ಚಿಟ್ಟ ಬಿಜೆಪಿ
Sardar Vallabhbhai Patel
ಸುಷ್ಮಾ ಚಕ್ರೆ
|

Updated on: Oct 31, 2025 | 3:26 PM

Share

ನವದೆಹಲಿ, ಅಕ್ಟೋಬರ್ 31: ಇಂದು ಸರ್ದಾರ್ ವಲ್ಲಭಭಾಯಿ ಪಟೇಲ್ (Sardar Vallabhbhai Patel) ಅವರ 150ನೇ ಜನ್ಮ ಜಯಂತಿ. ಆಡಳಿತಾರೂಢ ಬಿಜೆಪಿ ಸರ್ದಾರ್ ಪಟೇಲ್ ಅವರ ಮೇಲೆ ಎರಡು ಮಾರಕ ದಾಳಿಗಳನ್ನು ಮಾಡಿತ್ತು. ಹೆಚ್ಚಿನ ವರ್ಷಗಳ ಕಾಲ ಭಾರತವನ್ನು ಆಳಿದ ಕಾಂಗ್ರೆಸ್ 86 ವರ್ಷಗಳ ಕಾಲ ಈ ವಿಷಯದ ಬಗ್ಗೆ ಮೌನವಾಗಿರುವುದು ಏಕೆ? ಎಂದು ಬಿಜೆಪಿ ಪ್ರಶ್ನಿಸಿದೆ. ಇಂದು ಇತಿಹಾಸಕಾರ ರಿಜ್ವಾನ್ ಕದ್ರಿ ಅದನ್ನು ಬಹಿರಂಗಪಡಿಸುವವರೆಗೂ ಕಾಂಗ್ರೆಸ್ ಈ ವಿಷಯವನ್ನು 86 ವರ್ಷಗಳ ಕಾಲ ಏಕೆ ಮರೆಮಾಡಿತ್ತು? ಎಂಬ ಪ್ರಶ್ನೆ ಎದ್ದಿದೆ.

ಭಾರತದ ಮೊದಲ ಗೃಹ ಸಚಿವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಮೇಲೆ ನಡೆದ ಎರಡು ಮಾರಕ ದಾಳಿಗಳನ್ನು ದಾಖಲಿಸುವ ಸಲುವಾಗಿ ಕೆವಾಡಿಯಾದಲ್ಲಿರುವ ಸರ್ದಾರ್ ಪಟೇಲ್ ಸ್ಮಾರಕದಲ್ಲಿ ಹೊಸ ಸಾಕ್ಷ್ಯಚಿತ್ರ ಫಲಕವನ್ನು ರಚಿಸಲಾಗಿದೆ ಎಂದು ಇತಿಹಾಸಕಾರ ರಿಜ್ವಾನ್ ಕದ್ರಿ ಇಂದು ಹೇಳಿಕೆ ನೀಡಿದ ನಂತರ ಬಿಜೆಪಿ ಈ ವಿಷಯವನ್ನು ಎತ್ತಿದೆ.

ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಬಗ್ಗೆ ಒಂದು ಮಹತ್ವದ ಐತಿಹಾಸಿಕ ವಿಷಯವನ್ನು ಬಹಿರಂಗ ಮಾಡಲಾಗಿದ್ದು, ಈ ವಿಷಯವನ್ನು ಈಗ ಏಕತೆಯ ಪ್ರತಿಮೆಯಲ್ಲಿ ಪ್ರದರ್ಶಿಸಲಾಗುತ್ತಿದೆ. ಈ ಹೊಸ ಸಾಕ್ಷ್ಯಚಿತ್ರ ಫಲಕವು ಅವರ ಮೇಲಿನ ಎರಡು ಮಾರಕ ದಾಳಿಗಳ ವಿಷಯವನ್ನು ಬಹಿರಂಗಪಡಿಸಿದೆ. ಇದು 86 ವರ್ಷಗಳಿಂದ ಮುಚ್ಚಿಡಲ್ಪಟ್ಟಿದ್ದ ಮಹತ್ವದ ವಿಷಯವನ್ನು ಬಹಿರಂಗಪಡಿಸುತ್ತದೆ.

ಇದನ್ನೂ ಓದಿ: Sardar Patel Birth Anniversary: ಸರ್ದಾರ್ ಪಟೇಲರ ಜಯಂತಿ, ಏಕತಾ ಪ್ರತಿಮೆ ಬಳಿ ಗಣರಾಜ್ಯೋತ್ಸವ ಮಾದರಿಯ ಪರೇಡ್

ಸರ್ದಾರ್ ಪಟೇಲ್ ಅವರ ಹತ್ಯೆಯ ಪ್ರಯತ್ನಗಳ ಹಿಂದೆ ಸ್ಥಳೀಯ ರಾಜಪ್ರಭುತ್ವ ರಾಜ್ಯಗಳು ಮತ್ತು ಮುಸ್ಲಿಂ ಲೀಗ್ ಆಯೋಜಿಸಿದ್ದ ರಾಜಕೀಯ ಪಿತೂರಿಯನ್ನು ಸಮಿತಿ ಬಹಿರಂಗಪಡಿಸುತ್ತದೆ ಎಂದು ರಿಜ್ವಾನ್ ಕದ್ರಿ ಹೇಳಿದ್ದಾರೆ. “ಇದು ಭಾರತೀಯ ಸ್ವಾತಂತ್ರ್ಯ ಯುಗದ ಪ್ರಕ್ಷುಬ್ಧ ರಾಜಕೀಯ ಭೂದೃಶ್ಯದ ಬಗ್ಗೆ ಈ ಹಿಂದೆ ತಿಳಿದಿಲ್ಲದ ನಿರ್ಣಾಯಕ ಒಳನೋಟಗಳನ್ನು ನೀಡುತ್ತದೆ. ಮುಂದಿನ ದಿನಗಳಲ್ಲಿ ನನ್ನ ಸಾಕ್ಷ್ಯಚಿತ್ರ ಪುಸ್ತಕದಲ್ಲಿ ಹೆಚ್ಚಿನ ವಿವರಗಳನ್ನು ಪ್ರಕಟಿಸಲಾಗುವುದು” ಎಂದು ಅವರು ಹೇಳಿದ್ದಾರೆ.

ಬಿಜೆಪಿ ನಾಯಕ ಅಮಿತ್ ಮಾಳವಿಯಾ ಅವರು ಇತಿಹಾಸಕಾರ ರಿಜ್ವಾನ್ ಕದ್ರಿ ಅದನ್ನು ಬಹಿರಂಗಪಡಿಸುವವರೆಗೆ 8 ದಶಕಗಳಿಗೂ ಹೆಚ್ಚು ಕಾಲ ಈ ದಾಳಿಗಳ ಸತ್ಯವನ್ನು ಕಾಂಗ್ರೆಸ್ ಏಕೆ ಮರೆಮಾಡಿದೆ? ಎಂದು ಕೇಳಿದ್ದಾರೆ. “ಸತ್ಯವು ಅಹಿತಕರವಾಗಿರುತ್ತದೆ. ಕಾಂಗ್ರೆಸ್ ಅದನ್ನು ಬೇಕೆಂದೇ ಮರೆಮಾಡಿತ್ತು” ಎಂದು ಬಿಜೆಪಿ ನಾಯಕ ಹೇಳಿದ್ದಾರೆ.

ಸರ್ದಾರ್ ವಲ್ಲಭಭಾಯಿ ಪಟೇಲ್ ಸ್ಮಾರಕದಲ್ಲಿ ಪ್ರದರ್ಶಿಸಲಾದ ಐತಿಹಾಸಿಕ ದಾಖಲೆಗಳು 1939ರಲ್ಲಿ ಪ್ರಜಾಮಂಡಲ ಚಳವಳಿಯ ಮೂಲಕ ರಾಜಪ್ರಭುತ್ವದ ರಾಜ್ಯಗಳನ್ನು ಒಂದುಗೂಡಿಸುತ್ತಿದ್ದ ಸರ್ದಾರ್ ವಲ್ಲಭಭಾಯಿ ಪಟೇಲ್ ಮೇಲೆ ಮುಸ್ಲಿಂ ಲೀಗ್ ಎರಡು ದಾಳಿಗಳನ್ನು ನಡೆಸಿತು ಎಂದು ಬಹಿರಂಗಪಡಿಸುತ್ತದೆ.

ಇದನ್ನೂ ಓದಿ: ಸ್ವತಂತ್ರ ಭಾರತದ ಭೂಪಟದಲ್ಲಿ ಅಳಿಸಲಾಗದ ಛಾಪು ಮೂಡಿಸಿದ ಸರ್ದಾರ್ ವಲ್ಲಭಭಾಯಿ ಪಟೇಲ್ ಜಯಂತಿ, ಒಂದಿಷ್ಟು ಮಾಹಿತಿ ನಿಮಗಾಗಿ

“ಮುಸ್ಲಿಂ ಲೀಗ್ ಧರ್ಮದ ಹೆಸರಿನಲ್ಲಿ ಹಿಂಸಾಚಾರವನ್ನು ಪ್ರಚೋದಿಸಲು ಪ್ರಾರಂಭಿಸಿತು. ಕಾಂಗ್ರೆಸ್ ಮುಖಾಮುಖಿಯ ಬದಲು ಮೌನವನ್ನು ಆರಿಸಿಕೊಂಡಿತು” ಎಂದು ದಾಖಲೆಗಳನ್ನು ಉಲ್ಲೇಖಿಸಿ ಮಾಳವಿಯಾ ಹೇಳಿದ್ದಾರೆ. ಸರ್ದಾರ್ ಪಟೇಲ್ ಅವರ ಮೇಲಿನ ದಾಳಿಯ ಮೊದಲ ಪ್ರಯತ್ನವನ್ನು ಜನವರಿ 20, 1939ರಂದು ವಡೋದರಾದಲ್ಲಿ ಮಾಡಲಾಯಿತು.

“ಸರ್ದಾರ್ ಪಟೇಲ್ ಅವರ ಮೆರವಣಿಗೆ ಮಾಂಡ್ವಿ ಮೂಲಕ ಹಾದು ಹೋಗುತ್ತಿದ್ದಂತೆ ಮುಸ್ಲಿಂ ಲೀಗ್ ಬೆಂಬಲಿತ ಗೂಂಡಾಗಳು ಸರ್ದಾರ್ ಗೋ ಬ್ಯಾಕ್! ಎಂದು ಕೂಗಿದರು. ಪಟೇಲರ ಹೆಚ್ಚುತ್ತಿರುವ ಪ್ರಭಾವವನ್ನು ಹತ್ತಿಕ್ಕಲು ರಾಜ್ಯ ಪ್ರಾಯೋಜಿತ ಪ್ರಯತ್ನವಾಗಿ ಪ್ರಜಾಮಂಡಲ ಕಚೇರಿಗೆ ಬೆಂಕಿ ಹಚ್ಚಲಾಯಿತು. ಆಗ ಕಾಂಗ್ರೆಸ್ ಏಕೆ ಮೌನವಾಗಿತ್ತು? ಅದಾದ ಮರುದಿನ, ಸರ್ದಾರ್ ಪಟೇಲ್ ಶಾಂತಿ ಮತ್ತು ಸಂಯಮವನ್ನು ಒತ್ತಾಯಿಸಿದರು. ಆದರೆ ವಡೋದರಾ ಆಡಳಿತವು ನಕಲಿ ವಿಚಾರಣೆಯನ್ನು ನಡೆಸಿ ಪ್ರಕರಣವನ್ನು ಮುಚ್ಚಿಹಾಕಿತು. ಇದು ಕೇವಲ ಆರಂಭವಾಗಿತ್ತು. ಮುಸ್ಲಿಂ ಲೀಗ್‌ನ ಗೂಂಡಾ ಪಡೆಗಳು ಭಾವನಗರದಲ್ಲಿ ಇನ್ನೂ ಹೆಚ್ಚು ಮಾರಕವಾದ ದಾಳಿಗೆ ಪ್ರಯತ್ನ ಮಾಡಿದವು” ಎಂದು ಅಮಿತ್ ಮಾಳವಿಯಾ ಎಕ್ಸ್​ನಲ್ಲಿ ದಾಖಲೆಗಳನ್ನು ಪೋಸ್ಟ್ ಮಾಡಿದ್ದಾರೆ.

ಮೇ 14, 1939ರಂದು ಭಾವನಗರದಲ್ಲಿ ಸರ್ದಾರ್ ಪಟೇಲ್ ಐದನೇ ಪ್ರಜಾ ಪರಿಷತ್ ಅನ್ನು ಮುನ್ನಡೆಸಲು ಆಗಮಿಸಿದಾಗ, ಸ್ಥಳೀಯ ರಾಜಪ್ರಭುತ್ವದ ಬೆಂಬಲದೊಂದಿಗೆ ಮುಸ್ಲಿಂ ಲೀಗ್‌ನೊಂದಿಗೆ ಸಂಯೋಜಿತವಾದ ಗುಂಪೊಂದು ನಗೀನಾ ಮಸೀದಿಯಿಂದ ಅವರ ಶಾಂತಿಯುತ ಮೆರವಣಿಗೆಯ ಮೇಲೆ ದಾಳಿ ಮಾಡಿತು. “ಇದು ಪೂರ್ವ ಯೋಜಿತ ಪಿತೂರಿಯಾಗಿತ್ತು. ದೇಶಭಕ್ತರಾದ ಬಚು ವಿರ್ಜಿ ಮತ್ತು ಜಾದವ್‌ಜಿ ಮೋದಿ ಸರ್ದಾರ್ ಅವರನ್ನು ರಕ್ಷಿಸುವ ಹುತಾತ್ಮರಾದರು. ಡಜನ್​ಗಟ್ಟಲೆ ಜನರು ಗಾಯಗೊಂಡರು. ಆದರೂ ಸರ್ದಾರ್ ಪಟೇಲ್ ಆ ಸಂಜೆ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಮಡಿದವರಿಗೆ ಗೌರವ ಸಲ್ಲಿಸಿದರು. ಅಂತಹ ಹಿಂಸಾಚಾರದ ನಂತರವೂ ಅವರು ಎಂದಿಗೂ ಏಕತೆಯ ಹಾದಿಯನ್ನು ಕೈಬಿಡಲಿಲ್ಲ” ಎಂದು ಬಿಜೆಪಿ ಹೇಳಿದೆ.

ವಿಶೇಷ ನ್ಯಾಯಾಲಯವು 57 ಆರೋಪಿಗಳಲ್ಲಿ 34 ಜನರನ್ನು ದೋಷಿಗಳು ಎಂದು ಮತ್ತು ಇಬ್ಬರಿಗೆ ಮರಣದಂಡನೆ ವಿಧಿಸಿತು. ಆದರೆ ಸ್ವಾತಂತ್ರ್ಯದ ನಂತರ, ಕಾಂಗ್ರೆಸ್ ಇತಿಹಾಸಕಾರರು ಈ ಪ್ರಕರಣವನ್ನು ಪಠ್ಯಪುಸ್ತಕಗಳು ಮತ್ತು ದಾಖಲೆಗಳಿಂದ ಅಳಿಸಿಹಾಕಿದರು ಎಂದು ಬಿಜೆಪಿ ಆರೋಪಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್