AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೆನಸಿಕೊಂಡರೆ ಈಗಲೂ ಮೈ ನಡುಗುತ್ತೆ, 1984ರ ಗಲಭೆಯನ್ನು ಭಾರತದ ಕರಾಳ ಅಧ್ಯಾಯ ಎಂದು ಕರೆದ ಹರ್ದೀಪ್ ಸಿಂಗ್ ಪುರಿ

ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ, 1984ರಲ್ಲಿ ನಡೆದ ಸಿಖ್ ವಿರೋಧಿ ಗಲಭೆ ಕುರಿತು ಪೋಸ್ಟ್​ ಮಾಡಿದ್ದಾರೆ. ಎಕ್ಸ್​ನಲ್ಲಿ ವಿವರವಾದ ಪೋಸ್ಟ್ ಬರೆದಿದ್ದು, ದೆಹಲಿ ಮತ್ತು ಭಾರತದ ಇತರ ಭಾಗಗಳಲ್ಲಿ ಸಾವಿರಾರು ಸಿಖ್ಖರ ಸಾವಿಗೆ ಕಾರಣವಾದ ಹಿಂಸಾಚಾರವನ್ನು ನೆನಪಿಸಿಕೊಳ್ಳುವಾಗ ನನಗೆ ಈಗಲೂ ನಡುಕ ಹುಟ್ಟುತ್ತೆ ಎಂದರು. ಅಸಹಾಯಕ ಮತ್ತು ಮುಗ್ಧ ಸಿಖ್ ಪುರುಷರು, ಮಹಿಳೆಯರು ಮತ್ತು ಮಕ್ಕಳನ್ನು ಹತ್ಯೆ ಮಾಡಲಾಯಿತು. ಅವರ ಮನೆಗಳು ಮತ್ತು ಪೂಜಾ ಸ್ಥಳಗಳನ್ನು ಕಾಂಗ್ರೆಸ್ ನಾಯಕರು ಮಾರ್ಗದರ್ಶನದಲ್ಲಿ ಹುಟ್ಟಿಕೊಂಡ ಗುಂಪುಗಳು ದೋಚಿದವು ಎಂದು ಅವರು ಬರೆದಿದ್ದಾರೆ.

ನೆನಸಿಕೊಂಡರೆ ಈಗಲೂ ಮೈ ನಡುಗುತ್ತೆ, 1984ರ ಗಲಭೆಯನ್ನು ಭಾರತದ ಕರಾಳ ಅಧ್ಯಾಯ ಎಂದು ಕರೆದ ಹರ್ದೀಪ್ ಸಿಂಗ್ ಪುರಿ
ಪುರಿ
ನಯನಾ ರಾಜೀವ್
|

Updated on: Oct 31, 2025 | 12:37 PM

Share

ನವದೆಹಲಿ, ಅಕ್ಟೋಬರ್ 31: ಭಾರತದ ಸ್ವಾತಂತ್ರ್ಯಾ ನಂತರ 1984ರಲ್ಲಿ ನಡೆದ ಸಿಂಗ್ ವಿರೋಧಿ ಗಲಭೆ ಭಾರತದ ಇತಿಹಾಸದಲ್ಲಿ ಕಪ್ಪು ಚುಕ್ಕೆಯಾಗಿ ಉಳಿದುಬಿಟ್ಟಿದೆ ಎಂದು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ(Hardeep Singh Puri) ಹೇಳಿದ್ದಾರೆ. ಆಗಿನ ಪ್ರಧಾನಿ ಇಂದಿರಾ ಗಾಂಧಿಯ ಹತ್ಯೆಯ ನಂತರ ಮುಗ್ದ ಸಿಖ್ ಕುಟುಂಬಗಳನ್ನು ಗುರಿಯಾಗಿಸಿಕೊಂಡ ಗುಂಪುಗಳನ್ನು ಕಾಂಗ್ರೆಸ್ರಕ್ಷಿಸಿತ್ತು ಎಂದು ಆರೋಪಿಸಿದ್ದಾರೆ.

ಎಕ್ಸ್ನಲ್ಲಿ ವಿವರವಾದ ಪೋಸ್ಟ್ ಬರೆದಿದ್ದು, ದೆಹಲಿ ಮತ್ತು ಭಾರತದ ಇತರ ಭಾಗಗಳಲ್ಲಿ ಸಾವಿರಾರು ಸಿಖ್ಖರ ಸಾವಿಗೆ ಕಾರಣವಾದ ಹಿಂಸಾಚಾರವನ್ನು ನೆನಪಿಸಿಕೊಳ್ಳುವಾಗ ನನಗೆ ಈಗಲೂ ನಡುಕ ಹುಟ್ಟುತ್ತೆ ಎಂದರು.

ಅಸಹಾಯಕ ಮತ್ತು ಮುಗ್ಧ ಸಿಖ್ ಪುರುಷರು, ಮಹಿಳೆಯರು ಮತ್ತು ಮಕ್ಕಳನ್ನು ಹತ್ಯೆ ಮಾಡಲಾಯಿತು. ಅವರ ಮನೆಗಳು ಮತ್ತು ಪೂಜಾ ಸ್ಥಳಗಳನ್ನು ಕಾಂಗ್ರೆಸ್ ನಾಯಕರು ಮಾರ್ಗದರ್ಶನದಲ್ಲಿ ಹುಟ್ಟಿಕೊಂಡ ಗುಂಪುಗಳು ದೋಚಿದವು ಎಂದು ಅವರು ಬರೆದಿದ್ದಾರೆ.

ರಾಜ್ಯ ಆಡಳಿತವು ಉದ್ದೇಶಪೂರ್ವಕವಾಗಿಯೇ ಮೌನವಾಗಿತ್ತು ಎಂದು ಪುರಿ ಆರೋಪಿಸಿದರು, ಗುಂಪುಗಳು ಸಿಖ್ಖರ ಮನೆಗಳು ಮತ್ತು ಗುರುದ್ವಾರಗಳನ್ನು ಲೂಟಿ ಮಾಡಿ ಸುಟ್ಟುಹಾಕಿದಾಗ ಪೊಲೀಸರು ಮೂಕ ಪ್ರೇಕ್ಷಕರಂತೆ ನಿಂತರು ಎಂದು ಹೇಳಿದರು.

ಹರ್ದೀಪ್ ಸಿಂಗ್ ಪೋಸ್ಟ್​

ರಕ್ಷಕರು ಅಪರಾಧಿಗಳಾಗಿ ಬದಲಾದರು, ಸಿಖ್ ಒಡೆತನದ ಆಸ್ತಿಗಳನ್ನು ಗುರುತಿಸಲು ಮತದಾರರ ಪಟ್ಟಿಗಳನ್ನು ಬಳಸಲಾಗಿದೆ ಮತ್ತು ಪೊಲೀಸ್ ಪಡೆಗಳಿಗೆ ಹಲವಾರು ದಿನಗಳವರೆಗೆ ಮಧ್ಯಪ್ರವೇಶಿಸದಂತೆ ಸೂಚನೆ ನೀಡಲಾಗಿತ್ತು ಎಂದು ಆರೋಪಿಸಿದರು.

ದೊಡ್ಡ ಮರ ಬಿದ್ದಾಗ ಭೂಮಿ ಕಂಪಿಸುತ್ತದೆ ಎಂಬ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಹೇಳಿಕೆಯನ್ನು ಹತ್ಯಾಕಾಂಡಕ್ಕೆ ಬಹಿರಂಗ ಬೆಂಬಲ ಎಂದು ಅವರು ಉಲ್ಲೇಖಿಸಿದರು. ಹಿಂಸಾಚಾರ ಭುಗಿಲೆದ್ದಾಗ ಕಾಂಗ್ರೆಸ್ ನಾಯಕರು ಗುರುದ್ವಾರಗಳ ಹೊರಗೆ ಗುಂಪುಗಳನ್ನು ಮುನ್ನಡೆಸುತ್ತಿರುವುದು ಕಂಡುಬಂದಿತ್ತು ಎಂದು ಅವರು ಹೇಳಿದರು.

1984 ರ ಹಿಂಸಾಚಾರದ ಸಮಯದಲ್ಲಿ, ಅವರನ್ನು ಜಿನೀವಾದಲ್ಲಿ ಪ್ರಥಮ ಕಾರ್ಯದರ್ಶಿಯಾಗಿ ನೇಮಿಸಲಾಯಿತು ಮತ್ತು ದೆಹಲಿಯಲ್ಲಿ ತಮ್ಮ ಹೆತ್ತವರ ಸುರಕ್ಷತೆಯ ಬಗ್ಗೆ ಭಯಪಟ್ಟಿದ್ದರು ಎಂದು ಪುರಿ ಹೇಳಿದರು.

ನನ್ನ ಹೆತ್ತವರು ಹೌಜ್ ಖಾಸ್‌ನಲ್ಲಿ ವಾಸಿಸುತ್ತಿದ್ದರು ಮತ್ತು ನಗರದಾದ್ಯಂತ ಊಹಿಸಲಾಗದ ಹಿಂಸಾಚಾರ ಭುಗಿಲೆದ್ದಿದ್ದರೂ ಸಹ, ಹಿಂದೂ ಸ್ನೇಹಿತನೊಬ್ಬ ಅವರನ್ನು ಸಕಾಲದಲ್ಲಿ ರಕ್ಷಿಸಿದ್ದ, ಅವನು ಅವರನ್ನು ಸುರಕ್ಷಿತವಾಗಿ ಕರೆದೊಯ್ದಿದ್ದ ಎಂದು ಅವರು ಬರೆದಿದ್ದಾರೆ.

ಇಂದು ಭಾರತವು ತನ್ನ ಅಲ್ಪಸಂಖ್ಯಾತರನ್ನು ಸುರಕ್ಷಿತವಾಗಿರಿಸುವುದು ಮಾತ್ರವಲ್ಲದೆ, ಪೂರ್ವಾಗ್ರಹ ಅಥವಾ ತಾರತಮ್ಯವಿಲ್ಲದೆ ಸಬ್ಕಾ ಸಾಥ್, ಸಬ್ಕಾ ವಿಕಾಸ್ ಅನ್ನು ಖಚಿತಪಡಿಸುತ್ತದೆ ಎಂದು ಪುರಿ ಹೇಳಿದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!