ಭಾರತವೇನಾದರೂ ರಷ್ಯಾದಿಂದ ತೈಲ ಖರೀಸದೇ ಹೋಗಿದ್ದರೆ ಜಾಗತಿಕವಾಗಿ ಬೆಲ ದುಬಾರಿಯಾಗುತ್ತಿತ್ತು: ಸಚಿವ ಹರ್ದೀಪ್ ಸಿಂಗ್ ಪುರಿ

Hardeep Singh Puri on Russian oil imports: ಭಾರತವೇನಾದರೂ ರಷ್ಯಾದಿಂದ ಕಚ್ಛಾ ತೈಲ ಖರೀದಿಸದೇ ಹೋಗಿದ್ದರೆ ಜಾಗತಿಕವಾಗಿ ತೈಲ ಬೆಲೆ ಬ್ಯಾರಲ್​ಗೆ 200 ಡಾಲರ್ ದಾಟುತ್ತಿತ್ತು ಎಂದು ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ. 2026ರೊಳಗೆ ತೈಲ ಬೆಲೆಯಲ್ಲಿ ಹೆಚ್ಚು ಸ್ಥಿರತೆ ಹೊಂದುವ ವಾತಾರಣ ಇರಲಿದೆ ಎಂದು ಪುರಿ ಅಭಿಪ್ರಾಯಪಟ್ಟಿದ್ದಾರೆ. ತೈಲ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕತೆ ಇದೆ. ಸ್ಪರ್ಧಾತ್ಮಕ ಬೆಲೆಗೆ ಕೊಡುವ ದೇಶಗಳ ಆಯ್ಕೆ ಇದೆ ಎಂದೂ ಸಚಿವರು ಹೇಳಿದ್ದಾರೆ.

ಭಾರತವೇನಾದರೂ ರಷ್ಯಾದಿಂದ ತೈಲ ಖರೀಸದೇ ಹೋಗಿದ್ದರೆ ಜಾಗತಿಕವಾಗಿ ಬೆಲ ದುಬಾರಿಯಾಗುತ್ತಿತ್ತು: ಸಚಿವ ಹರ್ದೀಪ್ ಸಿಂಗ್ ಪುರಿ
ಹರ್ದೀಪ್ ಸಿಂಗ್ ಪುರಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 08, 2024 | 4:41 PM

ನವದೆಹಲಿ, ನವೆಂಬರ್ 8: ಭಾರತದಿಂದಾಗಿ ಜಾಗತಿಕ ತೈಲಬೆಲೆ ದುಬಾರಿಯಾಗುವುದು ತಪ್ಪಿದೆ. ಭಾರತವೇನಾದರೂ ರಷ್ಯನ್ ತೈಲವನ್ನು ಖರೀದಿಸದೇ ಹೋಗಿದ್ದರೆ ಜಾಗತಿಕವಾಗಿ ಕಚ್ಚಾ ತೈಲ ಬೆಲೆ ಬ್ಯಾರಲ್​ಗೆ 200 ಡಾಲರ್​ಗೆ ಏರುತ್ತಿತ್ತು ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಅಭಿಪ್ರಾಯಪಟ್ಟಿದ್ದಾರೆ. ರಷ್ಯನ್ ತೈಲವನ್ನು ಖರೀದಿಸುತ್ತಿರುವ ಭಾರತದ ಮೇಲೆ ಪಾಶ್ಚಿಮಾತ್ಯ ದೇಶಗಳು ನಿರ್ಬಂಧ ಹಾಕಬೇಕು ಎಂದು ಕೆಲ ವಲಯಗಳಲ್ಲಿ ಕೇಳಿಬರುತ್ತಿರುವ ಮಾತುಗಳಿಗೆ ಸಚಿವ ಹರ್ದೀಪ್ ಸಿಂಗ್ ತಿರುಗೇಟು ನೀಡಿದ್ದಾರೆ. ಸಿಎನ್​ಎನ್ ವಾಹಿನಿ ಜೊತೆಗಿನ ಸಂದರ್ಶನದಲ್ಲಿ ಮಾತನಾಡುತ್ತಿದ್ದ ಸಚಿವ ಪುರಿ, ಭಾರತ ಯಾರಿಂದ ಕಡಿಮೆ ಬೆಲೆಗೆ ತೈಲ ಸಿಗುತ್ತದೋ ಅಲ್ಲಿಂದ ಖರೀದಿಸುವ ತನ್ನ ನೀತಿಯನ್ನು ಮುಂದುವರಿಸುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

ಸದ್ಯೋಭವಿಷ್ಯದಲ್ಲಿ ಜಾಗತಿಕ ಇಂಧನ ಕ್ಷೇತ್ರದಲ್ಲಿ ತೈಲದ ಮಹತ್ವದ ಪಾತ್ರ ಮುಂದುವರಿಯಬಹುದು ಎಂದು ಅಭಿಪ್ರಾಯಪಟ್ಟ ಹರ್ದೀಪ್ ಸಿಂಗ್ ಪುರಿ, ತೈಲಬೆಲೆಯಲ್ಲಿ ಇಳಿಕೆ ಆಗಬಹುದು ಎಂದು ಭವಿಷ್ಯ ನುಡಿದಿದ್ದಾರೆ. ಹಾಗೆಯೇ, 2026ರೊಳಗೆ ತೈಲ ಬೆಲೆ ಹೆಚ್ಚು ಸ್ಥಿರತೆ ಸಾಧಿಸುವ ವಾತಾವರಣ ಇರಲಿದೆ ಎಂದೂ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಟ್ರಂಪ್ ಬಂದದ್ದೇ ರಿನಿವಬಲ್ ಎನರ್ಜಿ ಷೇರುಗಳಿಗೆ ನಡುಕ; ಸೂಪರ್​ಹಿಟ್ ವಾರೀ ಎನರ್ಜೀಸ್​ಗೂ ಹೊಡೆತ

ಮಾಹಿತಿ ಕೊರತೆ ಹೊಂದಿರುವವರು ಭಾರತದ ಮೇಲೆ ನಿರ್ಬಂಧ ಹಾಕಲು ಒತ್ತಾಯಿಸುತ್ತಿರುವುದು ಒಂದೆಡೆಯಾದರೆ, ಇನ್ನೊಂದೆಡೆ ಹಲವು ಐರೋಪ್ಯ ಮತ್ತು ಏಷ್ಯನ್ ದೇಶಗಳು ರಷ್ಯಾದಿಂದ ಸಾಕಷ್ಟು ಮೌಲ್ಯದ ಕಚ್ಛಾ ತೈಲ, ಡೀಸಲ್, ಎಲ್​ಎನ್​ಜಿ, ಅಪರೂಪ ಖನಿಜಗಳನ್ನು ಖರೀದಿಸಿವೆ. ಭಾರತದಲ್ಲಿ ಪೆಟ್ರೋಲ್ ಅಗತ್ಯ ಇರುವ ಏಳು ಕೋಟಿಗೂ ಹೆಚ್ಚು ನಾಗರಿಕರಿಗೆ ಅವಶ್ಯಕ ಇಂಧನ ಸಿಗಬೇಕೆನ್ನುವುದು ತಮಗಿರುವ ಆದ್ಯತೆ ಎಂದು ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.

ರಷ್ಯನ್ ತೈಲ ಆಮದು ಕಡಿಮೆ ಮಾಡಿದ್ದು ಯಾಕೆ?

ಭಾರತ ಇತ್ತೀಚೆಗೆ ರಷ್ಯನ್ ತೈಲ ಆಮದನ್ನು ಶೇ. 10ರಷ್ಟು ಕಡಿಮೆ ಮಾಡಲಾಗಿದ್ದು ಪಾಶ್ಚಿಮಾತ್ಯ ದೇಶಗಳ ಒತ್ತಡದಿಂದಲಾ ಎನ್ನುವ ಅನುಮಾನವನ್ನು ಸಚಿವ ಹರ್ದೀಪ್ ಸಿಂಗ್ ದೂರ ಮಾಡಿದ್ದಾರೆ. ರಷ್ಯಾದಿಂದ ತೈಲ ಆಮದು ಕಡಿಮೆ ಮಾಡಿದ್ದು, ಬೇರೆಡೆಯಿಂದ ಉತ್ತಮ ಬೆಲೆಗೆ ತೈಲ ಲಭ್ಯತೆ ಇದ್ದರಿಂದ ಎಂದು ಕೇಂದ್ರ ಪೆಟ್ರೋಲಿಯಂ ಸಚಿವರು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ರಿಷಿತ್, ಈ ಬೆಂಗಳೂರು ಹುಡುಗ ಈಗ ಸ್ವೀಡನ್ ಮೂಲದ ಟ್ರೂಕಾಲರ್ ಸಿಇಒ; ಯಾರು ಈ ಜುಂಜುನವಾಲ?

‘ಅದೇ ಸ್ಪರ್ಧಾತ್ಮಕ ಬೆಲೆಗೆ ತೈಲ ಸರಬರಾಜು ಮಾಡಲು ಬೇರೆ ದೇಶಗಳಿವೆ. ಆರೋಗ್ಯಯುತ ಸ್ಪರ್ಧೆ ಚಾಲನೆಯಲ್ಲಿದೆ. ಒಂದು ಕಡೆಯಿಂದ ನಿಮಗೆ ಸಿಗಲಿಲ್ಲವೆಂದರೆ, ಬೇರೆ ಕಡೆಯಿಂದ ನಿಮಗೆ ಸಿಗುತ್ತದೆ,’ ಎಂದು ಜಾಗತಿಕ ತೈಲ ಮಾರುಕಟ್ಟೆಯ ಗುಟ್ಟನ್ನು ಹರ್ದೀಪ್ ಸಿಂಗ್ ಪುರಿ ಬಿಚ್ಚಿಟ್ಟಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಗೆಳೆಯನನ್ನು ಕಚ್ಚಿ ಹಿಡಿದ ಸಿಂಹಕ್ಕೆ ಮನಬಂದಂತೆ ಥಳಿಸಿದ ವ್ಯಕ್ತಿ
ಗೆಳೆಯನನ್ನು ಕಚ್ಚಿ ಹಿಡಿದ ಸಿಂಹಕ್ಕೆ ಮನಬಂದಂತೆ ಥಳಿಸಿದ ವ್ಯಕ್ತಿ
ಮಹಾರಾಷ್ಟ್ರದಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ
ಮಹಾರಾಷ್ಟ್ರದಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ
ಸೋಮನಹಳ್ಳಿಯ ಚಿತಾಗಾರದಿಂದ ಭಾರವಾದ ಹೆಜ್ಜೆಹಾಕುತ್ತ ವಾಪಸ್ಸಾದರು ಪ್ರೇಮ
ಸೋಮನಹಳ್ಳಿಯ ಚಿತಾಗಾರದಿಂದ ಭಾರವಾದ ಹೆಜ್ಜೆಹಾಕುತ್ತ ವಾಪಸ್ಸಾದರು ಪ್ರೇಮ
ಒಕ್ಕಲಿಗ ಸಂಪ್ರದಾಯದಂತೆ ನಡೆದ ಅಂತಿಮ ಸಂಸ್ಕಾರದಲ್ಲಿ ಅನೇಕ ಗಣ್ಯರು ಭಾಗಿ
ಒಕ್ಕಲಿಗ ಸಂಪ್ರದಾಯದಂತೆ ನಡೆದ ಅಂತಿಮ ಸಂಸ್ಕಾರದಲ್ಲಿ ಅನೇಕ ಗಣ್ಯರು ಭಾಗಿ
ಉಗ್ರಂ ಮಂಜು ನಿಜವಾದ ಮುಖ ಬಯಲು ಮಾಡಿದ ಗೌತಮಿ; ಬದಲಾಯ್ತು ಆಟ
ಉಗ್ರಂ ಮಂಜು ನಿಜವಾದ ಮುಖ ಬಯಲು ಮಾಡಿದ ಗೌತಮಿ; ಬದಲಾಯ್ತು ಆಟ
ಮಗಳು ಮತ್ತು ಮೊಮ್ಮಗನೊಂದಿಗೆ ಆಗಮಿಸಿ ತಿರಂಗ ಸ್ವೀಕರಿಸಿದ ಪ್ರೇಮ ಕೃಷ್ಣ
ಮಗಳು ಮತ್ತು ಮೊಮ್ಮಗನೊಂದಿಗೆ ಆಗಮಿಸಿ ತಿರಂಗ ಸ್ವೀಕರಿಸಿದ ಪ್ರೇಮ ಕೃಷ್ಣ
ವಿಡಿಯೋ: ರಾಜಕೀಯ ಗುರುವಿಗೆ ಹೆಗಲು ಕೊಟ್ಟು ವಿದಾಯ ಹೇಳಿದ ಡಿಕೆ ಬ್ರದರ್ಸ್
ವಿಡಿಯೋ: ರಾಜಕೀಯ ಗುರುವಿಗೆ ಹೆಗಲು ಕೊಟ್ಟು ವಿದಾಯ ಹೇಳಿದ ಡಿಕೆ ಬ್ರದರ್ಸ್
ರಾಜ್ಯ ಮತ್ತು ರಾಷ್ಟ್ರದ ಹಲವಾರು ನಾಯಕರು ಕೃಷ್ಣರ ಅಂತ್ಯಕ್ರಿಯೆಯಲ್ಲಿ ಭಾಗಿ
ರಾಜ್ಯ ಮತ್ತು ರಾಷ್ಟ್ರದ ಹಲವಾರು ನಾಯಕರು ಕೃಷ್ಣರ ಅಂತ್ಯಕ್ರಿಯೆಯಲ್ಲಿ ಭಾಗಿ
ರಜತ್ ವಿರುದ್ಧ ಮುಗಿಬಿದ್ದ ಮಂಜು, ತ್ರಿವಿಕ್ರಮ್
ರಜತ್ ವಿರುದ್ಧ ಮುಗಿಬಿದ್ದ ಮಂಜು, ತ್ರಿವಿಕ್ರಮ್
ಅಂತ್ಯಕ್ರಿಯೆ ಉಸ್ತುವಾರಿ ವಹಿಸಿಕೊಂಡ ಡಿಕೆ ಶಿವಕುಮಾರ್​ರಿಂದ ಚುರುಕು ಓಡಾಟ
ಅಂತ್ಯಕ್ರಿಯೆ ಉಸ್ತುವಾರಿ ವಹಿಸಿಕೊಂಡ ಡಿಕೆ ಶಿವಕುಮಾರ್​ರಿಂದ ಚುರುಕು ಓಡಾಟ