AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೆನೆಜುವೆಲಾದಲ್ಲಿ ಹಣದುಬ್ಬರ; ಪೇಪರ್​ನಂತೆ ನೋಟಿನ ಕಂತೆಗಳನ್ನು ಬಿಸಾಡಿದ ಜನರು

ವೆನೆಜುವೆಲಾದಲ್ಲಿ ಹಣದುಬ್ಬರ; ಪೇಪರ್​ನಂತೆ ನೋಟಿನ ಕಂತೆಗಳನ್ನು ಬಿಸಾಡಿದ ಜನರು

ಸುಷ್ಮಾ ಚಕ್ರೆ
|

Updated on: Oct 31, 2025 | 9:50 PM

Share

ವೆನೆಜುವೆಲಾದ ಸ್ಥಳೀಯರು ಹಣದುಬ್ಬರ ಬಿಕ್ಕಟ್ಟಿನ ನಡುವೆ ಗಾಳಿಯಲ್ಲಿ ಹಣವನ್ನು ಎಸೆಯುತ್ತಿರುವ ವಿಡಿಯೋ ವೈರಲ್ ಆಗಿದೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಜನರು ಪ್ರತಿಭಟನೆಯ ರೂಪದಲ್ಲಿ ನೋಟುಗಳ ಕಂತೆಗಳನ್ನು ಗಾಳಿಯಲ್ಲಿ ಎಸೆಯುವುದನ್ನು ನೋಡಬಹುದು. ನೋಟುಗಳನ್ನು ತುಂಬಿದ ಟ್ರಕ್ ಒಳಗೆ ನಿಂತಿರುವ ವ್ಯಕ್ತಿಯೊಬ್ಬರು ಹಣವನ್ನು ಜನರ ಮೇಲೆ ಎಸೆಯುವುದನ್ನು ವಿಡಿಯೋದಲ್ಲಿ ನೋಡಬಹುದು.

ವೆನೆಜುವೆಲಾ, ಅಕ್ಟೋಬರ್ 31: ವೆನೆಜುವೆಲಾದಲ್ಲಿ ಅಧಿಕ ಹಣದುಬ್ಬರದ ಬಿಕ್ಕಟ್ಟು ಎದುರಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗುತ್ತಿರುವ ವಿಡಿಯೋದಲ್ಲಿ ಜನರು ಪ್ರತಿಭಟನೆಯ ರೂಪದಲ್ಲಿ ನೋಟುಗಳ ಕಂತೆಗಳನ್ನು ಗಾಳಿಯಲ್ಲಿ ಎಸೆಯುವುದನ್ನು ನೋಡಬಹುದು. ನೋಟುಗಳನ್ನು ತುಂಬಿದ ಟ್ರಕ್ ಒಳಗೆ ನಿಂತಿರುವ ವ್ಯಕ್ತಿಯೊಬ್ಬರು ಹಣವನ್ನು ಜನರ ಮೇಲೆ ಎಸೆಯುವುದನ್ನು ವಿಡಿಯೋದಲ್ಲಿ ನೋಡಬಹುದು. ವೆನೆಜುವೆಲಾದ ನಡೆಯುತ್ತಿರುವ ಆರ್ಥಿಕ ಪ್ರಕ್ಷುಬ್ಧತೆಯ ನಡುವೆ ರಾಷ್ಟ್ರೀಯ ಕರೆನ್ಸಿ ಎಷ್ಟು ನಿಷ್ಪ್ರಯೋಜಕವಾಗಿದೆ ಎಂಬುದನ್ನು ಒತ್ತಿಹೇಳುವ ಈ ನೋಟುಗಳು ಉಪಯೋಗಕ್ಕೆ ಬಾರದ ಕಾಗದದಂತೆ ನೆಲದಾದ್ಯಂತ ಹರಡಿಕೊಂಡಿರುವುದನ್ನು ಕಾಣಬಹುದು. ಭಾರತದ 1 ರೂಪಾಯಿ ವೆನೆಜುವೆಲಾದ 1,381 ಬೊಲಿವರ್‌ಗಳಿಗೆ ಸಮವಾಗಿದೆ.”

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ