‘ಬ್ರ್ಯಾಟ್’ ನೋಡಿದ ಪ್ರೇಕ್ಷಕರ ಪ್ರತಿಕ್ರಿಯೆ ಕಂಡು ಶಶಾಂಕ್ ಮುಖದಲ್ಲಿ ಮೂಡಿತು ನಗು
ಡಾರ್ಲಿಂಗ್ ಕೃಷ್ಣ ಮತ್ತು ನಿರ್ದೇಶಕ ಶಶಾಂಕ್ ಕಾಂಬಿನೇಷನ್ನಲ್ಲಿ ಬಂದಿರುವ ‘ಬ್ರ್ಯಾಟ್’ ಸಿನಿಮಾ ಅ.31ರಂದು ಬಿಡುಗಡೆ ಆಗಿದೆ. ಜನರಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿರುವುದಕ್ಕೆ ಶಶಾಂಕ್ ಮತ್ತು ಕೃಷ್ಣ ಖುಷಿ ಆಗಿದ್ದಾರೆ. ಮಾಧ್ಯಮಗಳ ಜೊತೆ ಅವರು ಮಾತಾಡಿದ್ದಾರೆ. ‘ಡಾರ್ಲಿಂಗ್ ಕೃಷ್ಣ ಅವರ ವೃತ್ತಿಜೀವನದ ಅತ್ಯುತ್ತಮ ಸಿನಿಮಾ ಇದು ಎಂಬ ವಿಮರ್ಶೆ ಬಂದಿದೆ’ ಎಂದ ಶಶಾಂಕ್ ಹೇಳಿದ್ದಾರೆ.
ಖ್ಯಾತ ನಿರ್ದೇಶಕ ಶಶಾಂಕ್ ಅವರು ‘ಬ್ರ್ಯಾಟ್’ (Brat) ಸಿನಿಮಾದಲ್ಲಿ ಕ್ರಿಕೆಟ್ ಬೆಟ್ಟಿಂಗ್ ಕುರಿತ ಕಥೆಯನ್ನು ಹೇಳಿದ್ದಾರೆ. ನಟ ಡಾರ್ಲಿಂಗ್ ಕೃಷ್ಣ (Darling Krishna) ಅವರು ಈ ಸಿನಿಮಾದಲ್ಲಿ ಹೊಸ ಬಗೆಯ ಪಾತ್ರವನ್ನು ಮಾಡಿದ್ದಾರೆ. ನಟ ಡ್ರ್ಯಾಗನ್ ಮಂಜು ಅವರು ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ‘ಬ್ರ್ಯಾಟ್’ ಸಿನಿಮಾಗೆ ಮೊದಲ ದಿನವೇ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಒಂದು ಡಿಫರೆಂಟ್ ಸಿನಿಮಾ ಮಾಡಬೇಕು ಎಂಬ ಉದ್ದೇಶದಿಂದ ನಿರ್ದೇಶಕ ಶಶಾಂಕ್ ಮತ್ತು ಡಾರ್ಲಿಂಗ್ ಕೃಷ್ಣ ಅವರು ‘ಬ್ರ್ಯಾಟ್’ ಚಿತ್ರ ಮಾಡಿದ್ದಾರೆ. ಅವರ ಪ್ರಯತ್ನವನ್ನು ಪ್ರೇಕ್ಷಕರು ಮೆಚ್ಚಿಕೊಂಡಿರುವುದು ಇಡೀ ಚಿತ್ರತಂಡಕ್ಕೆ ಖುಷಿ ನೀಡಿದೆ. ‘ಡಾರ್ಲಿಂಗ್ ಕೃಷ್ಣ ಅವರ ವೃತ್ತಿ ಜೀವನದ ದಿ ಬೆಸ್ಟ್ ಸಿನಿಮಾ ಇದು ಎಂಬ ವಿಮರ್ಶೆ ಬಂದಿದೆ’ ಎಂದು ನಿರ್ದೇಶಕ ಶಶಾಂಕ್ (Director Shashank) ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
TV9 Network ನ್ಯೂಸ್ ಡೈರೆಕ್ಟರ್ಗೆ ವಾಯ್ಸ್ ಆಪ್ ದ ಪೀಪಲ್ ಅವಾರ್ಡ್
ಕೆಂಪೇಗೌಡ ಏರ್ಪೋಟ್ನಲ್ಲೇ ಲಾಂಗ್ ಹಿಡಿದು ಅಟ್ಟಾಡಿಸಿದ ವಿಡಿಯೋ ಸೆರೆ
ಸಿದ್ದರಾಮಯ್ಯ ಪತ್ನಿಗೆ ಐಸಿಯುನಲ್ಲಿ ಚಿಕಿತ್ಸೆ: ಪಾರ್ವತಿಯವರಿಗೆ ಆಗಿದ್ದೇನು?
ಪರಸ್ಪರ ದೃಷ್ಟಿ ತೆಗೆಸಿಕೊಂಡ ಜಾಹ್ನವಿ, ಅಶ್ವಿನಿ: ಮತ್ತೆ ಒಂದಾದ ಹಳೇ ಜೋಡಿ

