ಈ ಬಾರೀ ರಾಜ್ಯದ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಮುಂಗಾರು ಆರ್ಭಟಕ್ಕೆ ಹಲವೆಡೆ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಹಲವಾರು ಸಾವು ನೋವುಗಳು ಕೂಡಾ ಸಂಭವಿಸಿದೆ. ಇನ್ನೂ ಮಳೆಗಾಲದಲ್ಲಿ ನದಿ-ಹೊಳೆ ನೀರು ಕೆಸರು ಬಣ್ಣಕ್ಕೆ ತಿರುಗುವುದು ಸರ್ವೆಸಾಮಾನ್ಯ. ಅಷ್ಟೇ ಅಲ್ಲದೆ ಬಾವಿ ನೀರು ಕೂಡಾ ಕೊಂಚ ಕೆಸರು ಬಣ್ಣಕ್ಕೆ ತಿರುಗುತ್ತವೆ. ಅಂತದ್ರಲ್ಲಿ ಇಲ್ಲೊಂದು ವಿಸ್ಮಯ ನಡೆದಿದ್ದು, ಭಾರೀ ಮಳೆಗೆ ನದಿ ಹೊಳೆ ತುಂಬಿ ಹರಿದು ತೋಟ ಮುಳುಗಿದರೂ, ಆ ತೋಟದಲ್ಲಿರುವ ಬಾವಿ ನೀರಿಗೆ ಕೆಸರು ನೀರು ಸೋಕದೆ, ಆ ನೀರು ಸ್ವಚ್ಛಂದವಾಗಿ, ತಿಳಿಯಾಗಿಯೇ ಇತ್ತು. ಈ ಅದ್ಭುತ ದೃಶ್ಯ ನೋಡುಗರಲ್ಲಿ ಅಚ್ಚರಿಯನ್ನು ಉಂಟು ಮಾಡಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಬೆಳ್ಳಿಪ್ಪಾಡಿ ಎಂಬಲ್ಲಿನ ಕೂಟೇಲು ಬಳಿ ಈ ಅಪರೂಪದ ದೃಶ್ಯ ನೋಡ ಸಿಕ್ಕಿದ್ದು, ಪ್ರಕೃತಿಯ ಅದ್ಭುತವನ್ನು ಮನ್ಮಥ ಶೆಟ್ಟಿ ಎಂಬವರು ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಈ ಕುರಿತ ಪೋಸ್ಟ್ ಒಂದನ್ನು nammabillaver ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.
ಇದನ್ನೂ ಓದಿ: ಆಗುಂಬೆಯಲ್ಲಿ ಕಾಣಿಸಿಕೊಂಡ 12 ಅಡಿ ಉದ್ದದ ದೈತ್ಯ ಕಾಳಿಂಗ ಸರ್ಪ; ಮೈ ಜುಮ್ಮೆನಿಸುವಂತಿದೆ ರಕ್ಷಣಾ ಕಾರ್ಯ
ವೈರಲ್ ವಿಡಿಯೋದಲ್ಲಿ ಭಾರೀ ಮಳೆಯಿಂದ ನದಿ ಹೊಳೆ ತುಂಬಿ ಹರಿದು ಅಡಿಕೆ ತೋಟ ಮುಳುಗಿದರೂ, ಅಲ್ಲಿದ್ದ ಬಾವಿಗೆ ತುಂಬಿದ ಬಾವಿಗೆ ಒಂದು ಚೂರು ಕೆಸರು ನೀರು ತಾಕದೆ, ಬಾವಿ ನೀರು ತಿಳಿಯಾಗಿ ಸ್ವಚ್ಛಂದವಾಗಿರುವ ಅದ್ಭುತ ದೃಶ್ಯವನ್ನು ಕಾಣಬಹುದು. ಒಂದು ದಿನದ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 19 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಈ ಪ್ರಕೃತಿಯ ವಿಸ್ಮಯ ನೋಡುಗರನ್ನು ಅಚ್ಚರಿಗೊಳಿಸಿದೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ