ರೀಲ್‌ಗಾಗಿ ಬೈಕ್ ಸ್ಟಂಟ್ ಮಾಡಿ ಸಾವನ್ನಪ್ಪಿದ ಯುವಕ; ಮಗನನ್ನು ಕಳೆದುಕೊಂಡ ತಾಯಿ ಕಣ್ಣೀರು
ಯುವಕನೊಬ್ಬ ತನ್ನ ಸ್ನೇಹಿತನೊಂದಿಗೆ ಬೈಕ್ ನಲ್ಲಿ ಸ್ಟಂಟ್ ಮಾಡುತ್ತಿದ್ದಾಗ ನಿಯಂತ್ರಣ ತಪ್ಪಿ ಸ್ಕಿಡ್ ಆಗಿ ಪಲ್ಟಿಯಾಗಿದೆ. ಬೈಕ್ ಹಿಂಬದಿ ಕುಳಿತಿದ್ದ ಯುವಕ ಪ್ರಾಣ ಕಳೆದುಕೊಂಡಿದ್ದು, ಬೈಕ್ ಚಲಾಯಿಸುತ್ತಿದ್ದ ಬಾಲಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಹೈದರಾಬಾದ್: ಸೋಶಿಯಲ್ ಮೀಡಿಯಾಗಳಲ್ಲಿ ಫೇಮಸ್ ಆಗಲು ಯುವಕನೊಬ್ಬ ಹುಚ್ಚು ಸಾಹಸಕ್ಕೆ ಕೈ ಹಾಕಿದ್ದು, ಪರಿಣಾಮ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾನೆ. ಹದಿಹರೆಯದ ಮಗನ ಸಾವಿನ ಸುದ್ದಿ ಕೇಳಿ ಪೋಷಕರನ ಆಕ್ರಂದನ ಮಗಿಲು ಮುಟ್ಟಿದೆ. ಈ ಆಘಾತಕಾರಿ ಘಟನೆ ಹೈದರಾಬಾದ್ ಹಯಾತ್‌ನಗರ ಬಳಿ ನಡೆದಿದೆ.
ಅಸಲಿಗೆ ಮಳೆ ಬಿಟ್ಟು ಬಿಡದೆ ಮಳೆ ಸುರಿಯುತ್ತಿದ್ದು, ಇಡೀ ರಸ್ತೆ ಜಾರುತ್ತಿದೆ. ಇಂತಹ ಹೊತ್ತಿನಲ್ಲಿ ಇಬ್ಬರು ಹುಡುಗರು ಅಪಾಯಕಾರಿ ಸಾಹಸಗಳನ್ನು ಮಾಡಿ ಸೋಷಿಯಲ್ ಮೀಡಿಯಾ ರೀಲ್‌ಗಾಗಿ ನಡೆಸಿದ ಪ್ರಯತ್ನ ಈ ದುರಂತಕ್ಕೆ ಕಾರಣವಾಗಿದೆ. ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದ ಮಗ ಬೈಕ್ ಸ್ಟಂಟ್ ಗೆ ಬಲಿಯಾಗಿದ್ದಾನೆ ಎಂಬ ವಿಷಯ ತಿಳಿದು ತಾಯಿ ಆಘಾತಕೊಳ್ಳಗಾಗಿದ್ದಾರೆ. ಶನಿವಾರ (ಜುಲೈ 20) ಸಂಜೆ ಬೈಕ್‌ನಲ್ಲಿ ಇಬ್ಬರು ಹೈದರಾಬಾದ್-ವಿಜಯವಾಡ ಹೆದ್ದಾರಿಯ ಅಂಬರ್‌ಪೇಟ್‌ನಲ್ಲಿ ಮಳೆಯ ನಡುವೆಯೇ ಸಾಹಸ ಮಾಡುತ್ತಿದ್ದು, ಈ ದೃಶ್ಯಗಳನ್ನು ಸ್ನೇಹಿತರು ಚಿತ್ರೀಕರಿಸುತ್ತಿದ್ದರು.
ಇದನ್ನೂ ಓದಿ: 10 ವರ್ಷದ ಬಾಲಕ ಮೇಲೆ ಕುಳಿತು ಉಸಿರುಗಟ್ಟಿಸಿ ಕೊಂದ 150 ಕೆಜಿ ತೂಕದ ದಡೂತಿ ತಾಯಿ
ಆದರೆ ಕ್ಷಣಾರ್ಧದಲ್ಲಿ ಬೈಕ್ ನಿಯಂತ್ರಣ ತಪ್ಪಿ ಕೆಳಗೆ ಬಿದಿದ್ದು,ಸ್ನೇಹಿತರು ತಕ್ಷಣ ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಶಿವ ಎಂಬ ಯುವಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಮೃತಪಟ್ಟಿದ್ದಾನೆ. ಏತನ್ಮಧ್ಯೆ, ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ