Viral Video: ಭಾರೀ ಮಳೆಗೆ ತೋಟ ಮುಳುಗಿದರೂ ತಿಳಿಯಾಗಿ ಸ್ವಚ್ಛಂದವಾಗಿರುವ ಬಾವಿ ನೀರು; ಪ್ರಕೃತಿಯ ವಿಶೇಷತೆಯೇ ಇದಲ್ಲವೇ….

ಪ್ರಕೃತಿಯ ಮಡಿಲಲ್ಲಿ ನಡೆಯುವ ಕೆಲವೊಂದು ವಿಸ್ಮಯ ಸಂಗತಿಗಳು ನಮ್ಮನ್ನು ರೋಮಾಂಚನಗೊಳಿಸುತ್ತದೆ. ಇದೀಗ ಅಂತಹದೊಂದು ರೋಮಾಂಚನಕಾರಿ ದೃಶ್ಯ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದ್ದು, ಭಾರೀ ಮಳೆಯಿಂದ ನದಿ ತುಂಬಿ ಹರಿದು ಆ ಪ್ರವಾಹದ ನೀರಿನಿಂದ ತೋಟ ಮುಳುಗಿದರೂ, ಆ ತೋಟದಲ್ಲಿ ಇರುವಂತಹ ಬಾವಿಯ ನೀರು ಮಾತ್ರ ತಿಳಿಯಾಗಿಯೇ ಇದೆ. ಈ ಅದ್ಭುತ ದೃಶ್ಯ ನೋಡುಗರಲ್ಲಿ ಅಚ್ಚರಿಯನ್ನು ಉಂಟು ಮಾಡಿದೆ.

Viral Video: ಭಾರೀ ಮಳೆಗೆ ತೋಟ ಮುಳುಗಿದರೂ ತಿಳಿಯಾಗಿ ಸ್ವಚ್ಛಂದವಾಗಿರುವ ಬಾವಿ ನೀರು;  ಪ್ರಕೃತಿಯ ವಿಶೇಷತೆಯೇ ಇದಲ್ಲವೇ….
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷತಾ ವರ್ಕಾಡಿ

Updated on: Jul 21, 2024 | 2:59 PM

ಈ ಬಾರೀ ರಾಜ್ಯದ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಮುಂಗಾರು ಆರ್ಭಟಕ್ಕೆ ಹಲವೆಡೆ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಹಲವಾರು ಸಾವು ನೋವುಗಳು ಕೂಡಾ ಸಂಭವಿಸಿದೆ. ಇನ್ನೂ ಮಳೆಗಾಲದಲ್ಲಿ ನದಿ-ಹೊಳೆ ನೀರು ಕೆಸರು ಬಣ್ಣಕ್ಕೆ ತಿರುಗುವುದು ಸರ್ವೆಸಾಮಾನ್ಯ. ಅಷ್ಟೇ ಅಲ್ಲದೆ ಬಾವಿ ನೀರು ಕೂಡಾ ಕೊಂಚ ಕೆಸರು ಬಣ್ಣಕ್ಕೆ ತಿರುಗುತ್ತವೆ. ಅಂತದ್ರಲ್ಲಿ ಇಲ್ಲೊಂದು ವಿಸ್ಮಯ ನಡೆದಿದ್ದು, ಭಾರೀ ಮಳೆಗೆ ನದಿ ಹೊಳೆ ತುಂಬಿ ಹರಿದು ತೋಟ ಮುಳುಗಿದರೂ, ಆ ತೋಟದಲ್ಲಿರುವ ಬಾವಿ ನೀರಿಗೆ ಕೆಸರು ನೀರು ಸೋಕದೆ, ಆ ನೀರು ಸ್ವಚ್ಛಂದವಾಗಿ, ತಿಳಿಯಾಗಿಯೇ ಇತ್ತು. ಈ ಅದ್ಭುತ ದೃಶ್ಯ ನೋಡುಗರಲ್ಲಿ ಅಚ್ಚರಿಯನ್ನು ಉಂಟು ಮಾಡಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಬೆಳ್ಳಿಪ್ಪಾಡಿ ಎಂಬಲ್ಲಿನ ಕೂಟೇಲು ಬಳಿ ಈ ಅಪರೂಪದ ದೃಶ್ಯ ನೋಡ ಸಿಕ್ಕಿದ್ದು, ಪ್ರಕೃತಿಯ ಅದ್ಭುತವನ್ನು ಮನ್ಮಥ ಶೆಟ್ಟಿ ಎಂಬವರು ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಈ ಕುರಿತ ಪೋಸ್ಟ್‌ ಒಂದನ್ನು nammabillaver ಹೆಸರಿನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ: ಆಗುಂಬೆಯಲ್ಲಿ ಕಾಣಿಸಿಕೊಂಡ 12 ಅಡಿ ಉದ್ದದ ದೈತ್ಯ ಕಾಳಿಂಗ ಸರ್ಪ; ಮೈ ಜುಮ್ಮೆನಿಸುವಂತಿದೆ ರಕ್ಷಣಾ ಕಾರ್ಯ

ವೈರಲ್‌ ವಿಡಿಯೋದಲ್ಲಿ ಭಾರೀ ಮಳೆಯಿಂದ ನದಿ ಹೊಳೆ ತುಂಬಿ ಹರಿದು ಅಡಿಕೆ ತೋಟ ಮುಳುಗಿದರೂ, ಅಲ್ಲಿದ್ದ ಬಾವಿಗೆ ತುಂಬಿದ ಬಾವಿಗೆ ಒಂದು ಚೂರು ಕೆಸರು ನೀರು ತಾಕದೆ, ಬಾವಿ ನೀರು ತಿಳಿಯಾಗಿ ಸ್ವಚ್ಛಂದವಾಗಿರುವ ಅದ್ಭುತ ದೃಶ್ಯವನ್ನು ಕಾಣಬಹುದು. ಒಂದು ದಿನದ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 19 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಈ ಪ್ರಕೃತಿಯ ವಿಸ್ಮಯ ನೋಡುಗರನ್ನು ಅಚ್ಚರಿಗೊಳಿಸಿದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ