Viral: ಭಾರತದ ರಾಜಕೀಯ ನಾಯಕರುಗಳಾಗಿ ಡೊನಾಲ್ಡ್‌ ಟ್ರಂಪ್‌, ಕಮಲಾ ಹ್ಯಾರಿಸ್‌; AI ಫೋಟೋ ವೈರಲ್

| Updated By: ಅಕ್ಷಯ್​ ಪಲ್ಲಮಜಲು​​

Updated on: Nov 05, 2024 | 2:34 PM

ಇಂದು ಅಮೆರಿಕ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಹಾಲಿ ಉಪಾಧ್ಯಕ್ಷೆ ಮತ್ತು ಡೆಮಾಕ್ರಟಿಕ್‌ ಪಕ್ಷದ ಕಮಲಾ ಹ್ಯಾರಿಸ್‌ ಮತ್ತು ಮಾಜಿ ಅಧ್ಯಕ್ಷ, ರಿಪಬ್ಲಿಕನ್‌ ಪಾರ್ಟಿಯ ಡೊನಾಲ್ಡ್‌ ಟ್ರಂಪ್‌ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿದೆ. ಈ ನಡುವೆ ಈ ಇಬ್ಬರೂ ರಾಜಕೀಯ ನಾಯಕರುಗಳ ಜೊತೆ ಒಬಾಮ, ಎಲಾನ್‌ ಮಸ್ಕ್‌ ಭಾರತೀಯ ರಾಜಕೀಯಕ್ಕೆ ಎಂಟ್ರಿ ಕೊಟ್ಟು, ಇಲ್ಲೂ ಭರ್ಜರಿ ಪ್ರಚಾರ ಮಾಡಿದ AI ಫೋಟೋವೊಂದು ಸಿಕ್ಕಾಪಟ್ಟೆ ವೈರಲ್‌ ಆಗಿದೆ.

Viral: ಭಾರತದ ರಾಜಕೀಯ ನಾಯಕರುಗಳಾಗಿ ಡೊನಾಲ್ಡ್‌ ಟ್ರಂಪ್‌, ಕಮಲಾ ಹ್ಯಾರಿಸ್‌; AI ಫೋಟೋ ವೈರಲ್
ವೈರಲ್​​​​ ಫೊಟೋ
Follow us on

ಅಮೆರಿಕದ ನೂತನ ಅಧ್ಯಕ್ಷರ ಆಯ್ಕೆಗೆ ನವೆಂಬರ್‌ 5 ಮಂಗಳವಾರ ಅಂದರೆ ಇಂದು ಮತದಾನ ನಡೆಯಲಿದೆ. ರಿಪಬ್ಲಿಕನ್‌ ಪಾರ್ಟಿಯ ಡೊನಾಲ್ಡ್‌ ಟ್ರಂಪ್‌ ಹಾಗೂ ಡೆಮಾಕ್ರಟಿಕ್‌ ಪಕ್ಷದ ಕಮಲಾ ಹ್ಯಾರಿಸ್‌ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿದ್ದು, ಅಮೆರಿಕದ ಅಧ್ಯಕ್ಷರು ಯಾರಾಗುತ್ತಾರೆ ಎಂದು ಇಡೀ ವಿಶ್ವವೇ ಕಾತುರದಿಂದ ಎದುರು ನೋಡುತ್ತಿದೆ. ಇನ್ನೂ ಮತದಾನಕ್ಕೆ ಒಂದು ದಿನ ಮುಂಚೆ ಉಭಯ ಸ್ಪರ್ಧಿಗಳು ಕೊನೆಯ ಹಂತದ ಬಿರುಸಿ ಪ್ರಚಾರ ಕೂಡಾ ನಡೆಸಿದ್ದಾರೆ. ಈ ಚುನಾವಣೆಯ ಜಿದ್ದಾಜಿದ್ದಿಯ ನಡುವೆ ಈ ಇಬ್ಬರೂ ರಾಜಕೀಯ ನಾಯಕರುಗಳ ಜೊತೆ ಒಬಾಮ, ಎಲಾನ್‌ ಮಸ್ಕ್‌ ಭಾರತೀಯ ರಾಜಕೀಯಕ್ಕೆ ಎಂಟ್ರಿ ಕೊಟ್ಟು, ಇಲ್ಲೂ ಭರ್ಜರಿ ಪ್ರಚಾರ ಮಾಡಿದ AI ಫೋಟೋವೊಂದು ಸಿಕ್ಕಾಪಟ್ಟೆ ವೈರಲ್‌ ಆಗಿದೆ.

ರಾಜಕೀಯ ನಾಯಕರು, ಕ್ರಿಕೆಟ್‌ ಮತ್ತು ಸಿನಿಮಾ ಸ್ಟಾರ್‌ಗಳ AI ಫೋಟೋಗಳು ಆಗಾಗ್ಗೆ ವೈರಲ್‌ ಆಗುತ್ತಿರುತ್ತವೆ. ಇದೀಗ ಅಂತಹದ್ದೇ AI ಫೋಟೋವೊಂದು ವೈರಲ್‌ ಆಗಿದ್ದು, ಈ ಫೋಟೋದಲ್ಲಿ ಡೊನಾಲ್ಡ್‌ ಟ್ರಂಪ್‌, ಕಮಲಾ ಹ್ಯಾರಿಸ್‌, ಎಲಾನ್ ಮಸ್ಕ್‌ ಮತ್ತು ಬರಾಕ್‌ ಒಬಾಮ ಅವರನ್ನು ಭಾರತೀಯ ರಾಜಕೀಯ ನಾಯಕರ ರೀತಿಯಲ್ಲಿ ತೋರಿಸಲಾಗಿದೆ. ಹೌದು ಇವರುಗಳು ಭಾರತೀಯ ರಾಜಕಾರಣಿಗಳಾಗಿದ್ದರೆ ಹೇಗಿರುತ್ತಾರೆ, ಹೇಗೆ ಚುನಾವಣಾ ಪ್ರಚಾರವನ್ನು ಮಾಡುತ್ತಾರೆ ಎಂಬುದನ್ನು ಚಿತ್ರಿಸಲಾಗಿದೆ. ಈ ಅದ್ಭುತವಾದ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಫೋಟೊವನ್ನು ಕಲಾವಿದ ಸಾಹಿದ್‌ ಎಸ್.‌ಕೆ ಎಂಬವರು ಚಿತ್ರಿಸಿದ್ದಾರೆ.

ಈ AI ಫೋಟೋಗಳನ್ನು ಕಲಾವಿದ ಸಾಹಿದ್‌ (sahixd) ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೈರಲ್‌ ಆಗುತ್ತಿರುವ ಈ ಫೋಟೋಗಳಲ್ಲಿ ಡೊನಾಲ್ಡ್‌ ಟ್ರಂಪ್‌ ಹಾಗೂ ಎಲಾನ್‌ ಮಸ್ಕ್ ಜೊತೆಗೆ ಕಮಲಾ ಹ್ಯಾರಿಸ್‌ ಮತ್ತು ಒಬಾಮ ಭಾರತೀಯ ರಾಜಕೀಯ ನಾಯಕರಂತೆ ತಮ್ಮ ತಮ್ಮ ಪಕ್ಷದ ಪರವಾಗಿ ಭರ್ಜರಿ ಪ್ರಚಾರದಲ್ಲಿ ತೊಡಗಿರುವ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಸಿಂಗಾಪುರ ಬಡ ರಾಷ್ಟ್ರದಿಂದ ಜಗತ್ತಿನ ಶ್ರೀಮಂತ ದೇಶಗಳಲ್ಲಿ ಒಂದಾಗಿದ್ದು ಹೇಗೆ?

ಮೂರು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ಪೋಸ್ಟ್‌ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಈ ಫೋಟೋಗಳು ಮಸ್ತ್‌ ಆಗಿದೆʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಎಂತಹ ಅದ್ಭುತ ಪರಿಕಲ್ಪನೆʼ ಎಂದು ಹೊಗಳಿಕೆಯ ಮಾತುಗಳನ್ನಾಡಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ