ಸಾಮಾನ್ಯವಾಗಿ ಜನರು ತಮ್ಮ ಮೊಬೈಲ್ ಪಾಸ್‌ವರ್ಡ್, ಇನ್‌ಸ್ಟಾಗ್ರಾಮ್, ಫೇಸ್‌ಬುಕ್ ಇತ್ಯಾದಿ ಸೋಷಿಯಲ್ ಮೀಡಿಯಾ ಪಾಸ್‌ವರ್ಡ್‌ಗಳನ್ನು ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ. ಆದ್ರೆ ಈ ಪ್ರೇಮಿಗಳು ಮಾತ್ರ ಪರಸ್ಪರ ಸೋಷಿಯಲ್ ಮೀಡಿಯಾ ಪಾಸ್‌ವರ್ಡ್‌ಗಳನ್ನು ಹಂಚಿಕೊಳ್ಳುತ್ತಾರೆ. ಹಾಗೆಯೇ ಇಲ್ಲೊಬ್ಬಳು ಯುವತಿ ಕೂಡಾ ತನ್ನ ಪ್ರಿಯಕರನ ಬಳಿ ಮೊಬೈಲ್ ಪಾಸ್‌ವರ್ಡ್ ಕೇಳಿದ್ದು, ಆಕೆಯೊಂದಿಗೆ ಪಾಸ್‌ವರ್ಡ್ ಹಂಚಿಕೊಳ್ಳಲು ಇಷ್ಟಪಡದ ಆ ಯುವಕ ಪೊಲೀಸರ ಮುಂದೆಯೇ ಸಮುದ್ರಕ್ಕೆ ಹಾರಿದ್ದಾನೆ. ಈ ಕುರಿತ ಸುದ್ದಿಯೊಂದು ಇದೀಗ ಸಖತ್ ವೈರಲ್ ಆಗುತ್ತಿದೆ.
ಈ ಘಟನೆ ಅಮೇರಿಕಾದ ಫ್ಲೋರಿಡಾದಲ್ಲಿ ನಡೆದಿದ್ದು, ಗರ್ಲ್‌ಫ್ರೆಂಡ್ ಪಾಸ್‌ವರ್ಡ್ ಕೇಳಿದ್ದಕ್ಕೆ ಯುವಕನೊಬ್ಬ ಪೊಲೀಸರ ಮುಂದೆಯೇ ಸೀದಾ ಹೋಗಿ ಸಮುದ್ರಕ್ಕೆ ಹಾರಿದ್ದಾನೆ. ವರದಿಗಳ ಪ್ರಕಾರ ಫ್ಲೋರಿಡಾದ ಕೀ ವೆಸ್ಟ್ ಬಳಿಯ ಸಮುದ್ರದಲ್ಲಿ ಎ.ಜೆ ಎಂಬಾತ ಆತನ ಗರ್ಲ್‌ಫ್ರೆಂಡ್ ಜೊತೆ ಮೀನುಗಾರಿಕಾ ದೋಣಿಯಲ್ಲಿ ಕುಳಿತು ವಿಹರಿಸುತ್ತಿದ್ದ. ಆ ಸಂದರ್ಭದಲ್ಲಿ ಪೊಲೀಸರು ಈ ಜೋಡಿ ಬೋಟ್‌ನಲ್ಲಿ ಕೆಲವು ಕೋಡ್ ಉಲ್ಲಂಘನೆ ಮಾಡಿರುವುದನ್ನು ಗಮನಿಸುತ್ತಾರೆ. ತಕ್ಷಣ ಬೋಟ್ ಬಳಿ ಬಂದ ಪೊಲೀಸರು ಗುರುತಿನ ಚೀಟಿಯನ್ನು ಕೇಳುತ್ತಾರೆ. ಆದರೆ ಎಜೆ ಮತ್ತು ಆಕೆಯ ಗೆಳತಿ ಬಳಿ ಯಾವುದೇ ಐಡಿ ಇರಲಿಲ್ಲ. ಈ ಕಾರಣದಿಂದ ನಿಮ್ಮ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಹೇಳುತ್ತಾರೆ. ಇದರಿಂದ ಭಯಗೊಂಡ ಎಜೆ ಗೆಳತಿ, ಸರಿಯಾದ ಪ್ರೂಫ್ ತೋರಿಸಲು ಎಜೆಯ ಮೊಬೈಲ್ ತೆಗೆದುಕೊಂಡು, ನಂತರ ಅದರ ಪಾಸ್‌ವರ್ಡ್ ಕೇಳಿದ್ದಾಳೆ.
ಇದನ್ನೂ ಓದಿ: ಟ್ವೀಟ್-ರೀಟ್ವೀಟ್ನಿಂದ ಪ್ರಾರಂಭವಾದ ಲವ್, ನವ ದಂಪತಿಗಳ ಎಕ್ಸ್ ಲವ್ ಕಹಾನಿ
Florida man jumps in ocean to avoid giving cops, girlfriend his phone’s passcode: ‘You’re telling me I’m resisting’ https://t.co/zcSqxdzqlo pic.twitter.com/EpUivFbpDE
— New York Post (@nypost) July 17, 2024
ಈ ಸಂದರ್ಭದಲ್ಲಿ ವಾದ ವಿವಾದಗಳು ನಡೆದು ಕೊನೆಯಲ್ಲಿ ಪೊಲೀಸರ ಬಂಧನದಿಂದ ಹಾಗೂ ಗರ್ಲ್‌ಫ್ರೆಂಡ್‌ಗೆ ಪಾಸ್‌ವರ್ಡ್ ನೀಡುವುದನ್ನು ತಪ್ಪಿಸಲು ಎಜೆ ಪೊಲೀಸರ ಮುಂದೆಯೇ ಸಮುದ್ರಕ್ಕೆ ಹಾರಿದ್ದಾನೆ. ನಂತರ ಈಜುತ್ತಾ ದಡ ಸೇರಿದ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಈ ಪೋಸ್ಟ್ ಒಂದನ್ನು New York Post ಅಧೀಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ