Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಟ್ವೀಟ್‌-ರೀಟ್ವೀಟ್​​ನಿಂದ ಪ್ರಾರಂಭವಾದ ಲವ್, ನವ ದಂಪತಿಗಳ ಎಕ್ಸ್‌ ಲವ್‌ ಕಹಾನಿ

ಸೋಷಿಯಲ್‌ ಮೀಡಿಯಾದ ಮೂಲಕ ಪರಿಚಯವಾಗಿ, ಆ ಪರಿಚಯ ಪ್ರೀತಿಗೆ ತಿರುಗಿ ಮದುವೆಯಾದ ಜೋಡಿಗಳು ಹಲವರಿದ್ದಾರೆ. ಅದೇ ರೀತಿ ಇಲ್ಲೊಂದು ಜೋಡಿ ಕೂಡಾ ಸೋಷಿಯಲ್‌ ಮೀಡಿಯಾದ ಮೂಲಕ ಪರಿಚಯವಾಗಿ ಮದುವೆಯಾಗಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ಸ್ಟಾರ್ಟ್‌ ಆದ ಅವರಿಬ್ಬರ ಸರಳ ಪ್ರೇಮಕಥೆ ಇದೀಗ ‌ ಸಖತ್ ವೈರಲ್‌ ಆಗುತ್ತಿದೆ.

Viral: ಟ್ವೀಟ್‌-ರೀಟ್ವೀಟ್​​ನಿಂದ ಪ್ರಾರಂಭವಾದ ಲವ್, ನವ ದಂಪತಿಗಳ ಎಕ್ಸ್‌ ಲವ್‌ ಕಹಾನಿ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Jul 19, 2024 | 6:00 PM

ಒಂದು ಹುಡುಗ ಮತ್ತು ಹುಡುಗಿಯ ನಡುವೆ ಪ್ರೀತಿ ಯಾವಾಗ, ಹೇಗೆ ಹುಟ್ಟುತೆ ಅಂತ ಹೇಳಲು ಸಾಧ್ಯವಿಲ್ಲ. ಈ ಡಿಜಿಟಲ್‌ ಯುಗದಲ್ಲಿ ಮುಖ ಪರಿಚಯವಿಲ್ಲದಿದ್ದರೂ ಸೋಷಿಯಲ್‌ ಮೀಡಿಯಾದ ಮೂಲಕ ಅರಳಿದ ಅದೆಷ್ಟೋ ಲವ್‌ ಸ್ಟೋರಿಗಳು ಇದ್ದಾವೆ. ಹೀಗೆ ಸೋಷಿಯಲ್‌ ಮೀಡಿಯಾದ ಮೂಲಕ ಪರಿಚಯವಾಗಿ ಯುವಕ ಯುವತಿಯರು ಸ್ನೇಹ, ಪ್ರೀತಿ, ಮದುವೆ ಅಂತ ಮಾತಾಡೋದನ್ನ ನಾವೆಲ್ಲಾ ನೋಡೆ ಇರ್ತೀವಿ. ಅದೇ ರೀತಿ ಇಲ್ಲೊಂದು ಜೋಡಿ ಕೂಡಾ ಸೋಷಿಯಲ್‌ ಮೀಡಿಯಾದ ಮೂಲಕ ಪರಿಚಯವಾಗಿ ಇದೀಗ ಅದ್ಧೂರಿಯಾಗಿ ಮದುವೆಯಾಗಿದ್ದು, ಅವರಿಬ್ಬರ ನಡುವೆ ಪ್ರೀತಿ ಹುಟ್ಟಲು ಕಾರಣವಾದ ಟ್ವೀಟ್‌ ಇದೀಗ ವೈರಲ್‌ ಆಗುತ್ತಿದೆ.

ಬೆಂಗಳೂರಿನ ಟೆಕ್ಕಿ ಅಂಶುಲ್‌ ಎಂಬವರು ಸೋಷಿಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ ಎಕ್ಸ್‌ನಲ್ಲಿ 2022 ರಲ್ಲಿ ತಮಾಷೆಯ ಟ್ವೀಟ್‌ ಒಂದನ್ನು ಪೋಸ್ಟ್‌ ಮಾಡಿದ್ದರು. ಅದಕ್ಕೆ ದಿವ್ಯ ಎಂಬವರು ತಮಾಷೆಯಾಗಿಯೇ ರೀಟ್ವೀಟ್‌ ಮಾಡಿದ್ದು, ಹೀಗೆ ತಮಾಷೆಯ ಟ್ವೀಟ್‌ ಮೂಲಕ ಇವರಿಬ್ಬರ ಮಧ್ಯೆ ಪ್ರೀತಿ ಅರಳಿದ್ದು, ಇದೀಗ 2024 ರಲ್ಲಿ ಈ ಜೋಡಿ ಅದ್ಧೂರಿಯಾಗಿ ಮದುವೆಯಾಗಿದ್ದಾರೆ. ಈ ಸರಳ ಪ್ರೇಮಕಥೆಯ ಸ್ಟೋರಿ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ.

ಈ ಕುರಿತ ಪೋಸ್ಟ್‌ ಒಂದನ್ನು ಶುಭ್‌ (kadaipaneeeer) ಎಂಬವರು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದು, ʼಟ್ವಿಟರ್‌ನ ಹಿತಕರ ಭಾಗವಿದುʼ ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ವೈರಲ್‌ ಆಗಿರುವ ಒಂದು ಫೋಟೋದಲ್ಲಿ ಅಂಶುಲ್‌ ಮತ್ತು ದಿವ್ಯಾ ಅವರು 2022 ರಲ್ಲಿ ಟ್ವೀಟ್‌, ರೀಟ್ವೀಟ್‌ ಮಾಡಿದ ಸ್ಕ್ರೀನ್‌ಶಾಟ್‌ ಫೋಟೋ ಕಾಣಬಹುದು. ಇನ್ನೊಂದರಲ್ಲಿ ವಧು ದಿವ್ಯಾ ಅವರ ಫೋಟೋವನ್ನು ಕಾಣಬಹುದು.

ಇದನ್ನೂ ಓದಿ: ಮಕ್ಕಳ ಮದುವೆ ಮಾತುಕತೆಯಲ್ಲಿ ಅರಳಿದ ಪ್ರೀತಿ, ವಧುವಿನ ತಾಯಿಯೊಂದಿಗೆ ವರನ ತಂದೆ ಪರಾರಿ

ಜುಲೈ 18 ರಂದು ಹಂಚಿಕೊಳ್ಳಲಾದ ಈ ಪೋಸ್ಟ್‌ 6 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರರು ʼಇಂತಹ ಸಿಹಿ ಘಟನೆ ನನ್ನ ಜೀವನದಲ್ಲಿ ಅದ್ಯಾವಗ ನಡೆಯುತ್ತೋʼ ಎಂದು ತಮಾಷೆಯ ಕಾಮೆಂಟ್‌ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼತುಂಬಾ ಅದ್ಭುತ ಮತ್ತು ಧನಾತ್ಮಕವಾಗಿದೆ ಈ ಲವ್‌ಸ್ಟೋರಿʼ ಎಂದು ಹೇಳಿದ್ದಾರೆ. ‌

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ