Viral: ಮಕ್ಕಳ ಮದುವೆ ಮಾತುಕತೆಯಲ್ಲಿ ಅರಳಿದ ಪ್ರೀತಿ, ವಧುವಿನ ತಾಯಿಯೊಂದಿಗೆ ವರನ ತಂದೆ ಪರಾರಿ
ಮದುವೆ ಮಂಟಪದಲ್ಲಿ ಅಥವಾ ಮದುವೆ ಮನೆಗಳಲ್ಲಿ ನಡೆಯುವ ಸಿನಿಮೀಯ ರೀತಿಯ ಘಟನೆಗಳ ಬಗ್ಗೆ ಆಗಾಗ್ಗೆ ಕೇಳುತ್ತಿರುತ್ತೇವೆ. ಇದೀಗ ಅಂತಹದೇ ವಿಚಿತ್ರ ಘಟನೆಯೊಂದು ನಡೆದಿದ್ದು, ಮಕ್ಕಳ ಮದುವೆಗೆ ಇನ್ನೇನು ದಿನ ಹತ್ತಿರವಾಗುತ್ತಿದ್ದಂತೆ ವಧುವಿನ ತಾಯಿಯೊಂದಿಗೆ ವರನ ತಂದೆ ಪರಾರಿಯಾಗಿದ್ದಾನೆ. ಈ ಶಾಕಿಂಗ್ ಸುದ್ದಿ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.
ಮದುವೆ ಇಷ್ಟವಿಲ್ಲವೆಂದು ಮದುವೆ ಮಂಟಪದಿಂದ ಮದುಮಗಳು ಅಥವಾ ಮದುಮಗ ಪರಾರಿಯಾಗುವ ಅಥವಾ ಮನೆಯವರ ಒತ್ತಾಯಕ್ಕೆ ಕಟ್ಟು ಬಿದ್ದು ಮದುವೆಯಾಗಲು ಒಪ್ಪಿ ಇನ್ನೇನೂ ಮದುವೆ ದಿನ ಹತ್ತಿರ ಬರುತ್ತಿದೆ ಎನ್ನುವಾಗ ಯುವಕ ಅಥವಾ ಯುವತಿ ಮನೆ ಬಿಟ್ಟು ಓಡಿ ಹೋದ ಘಟನೆಗಳ ಬಗ್ಗೆ ಕೇಳಿರುತ್ತೀರಿ ಅಲ್ವಾ. ಆದ್ರೆ ಇಲ್ಲೊಂದು ವಿಚಿತ್ರ ಘಟನೆ ನಡೆದಿದ್ದು, ಇನ್ನೇನು ಮದುವೆ ದಿನ ಹತ್ತಿರವಾಗುತ್ತಿದ್ದಂತೆ ವಧುವಿನ ತಾಯಿಯೊಂದಿಗೆ ವರನ ತಂದೆ ಪರಾರಿಯಾಗಿದ್ದಾನೆ. ಈ ಶಾಕಿಂಗ್ ಸುದ್ದಿ ಸದ್ಯ ಎಲ್ಲೆಡೆ ವೈರಲ್ ಆಗುತ್ತಿದೆ.
ಈ ವಿಚಿತ್ರ ಘಟನೆ ಉತ್ತರ ಪ್ರದೇಶದ ಕಾಸ್‌ಗಂಜ್‌ನಲ್ಲಿ ನಡೆದಿದ್ದು, ಮಕ್ಕಳ ಮದುವೆ ಸಮೀಪಿಸುತ್ತಿದ್ದಂತೆ ವಧುವಿನ ತಾಯಿಯೊಂದಿಗೆ ವರನ ತಂದೆ ಪರಾರಿಯಾಗಿದ್ದಾನೆ. ಈ ಘಟನೆ ಜೂನ್ ಮೊದಲ ವಾರದಲ್ಲಿ ನಡೆದಿದ್ದು, ಮಕ್ಕಳ ಮದುವೆ ಮಾತುಕತೆ ಸಂದರ್ಭದಲ್ಲಿ ವರನ ತಂದೆ ಶಕೀಲ್ ಮತ್ತು ವಧುವಿನ ತಾಯಿ ಅಸ್ಮಾ ಖಾತುನ್ ನಡುವೆ ಪ್ರೀತಿ ಚಿಗುರೊಡದಿದೆ. ಮತ್ತು ಮದುವೆ ಮಾತುಕತೆಯ ನೆಪದಲ್ಲಿ ಶಕೀಲ್, ಅಸ್ಮಾಳ ಮನೆಗೆ ಹೋಗುತ್ತಿದ್ದ. ಇದೀಗ ಮಕ್ಕಳ ಮದುವೆ ಸಮೀಪಿಸುತ್ತಿದ್ದಂತೆ ಈ ಇಬ್ಬರು ಓಡಿ ಹೋಗಿದ್ದಾರೆ.
ಇದನ್ನೂ ಓದಿ: ವಿದ್ಯುತ್ ಸ್ಪರ್ಶಿಸಿ ತಾಯಿ ಹಸು ಸಾವು, ಅಮ್ಮನ ಸಮಾಧಿ ಮುಂದೆ ಕರುವಿನ ಮೂಕ ರೋದನೆ
ವರದಿಗಳ ಪ್ರಕಾರ ಶಕೀಲ್‌ಗೆ 10 ಮತ್ತು ವಧುವಿನ ತಾಯಿಗೆ 6 ಮಕ್ಕಳಿದ್ದಾರೆ. ಆದ್ರೆ ಪ್ರೀತಿಯ ಬಲೆಗೆ ಬಿದ್ದ ಈ ಇಬ್ಬರು ಮಕ್ಕಳ ಜವಬ್ದಾರಿಯನ್ನೂ ಮರೆತು ಇದೀಗ ಮನೆ ಬಿಟ್ಟು ಓಡಿ ಹೋಗಿದ್ದಾರೆ. ಈ ಬಗ್ಗೆ ಅಸ್ಮಾಳ ಗಂಡ ಶಕೀಲ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ವರನ ತಂದೆಯೇ ನನ್ನ ಪತ್ನಿಯನ್ನು ಅಪಹರಿಸಿಕೊಂಡು ಹೋಗಿದ್ದಾನೆ ಎಂದು ಆರೋಪಿಸಿದ್ದಾನೆ. ದೂರಿನ ಅನ್ವಯ ಇದೀಗ ಪೊಲೀಸರು ಈ ಇಬ್ಬರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:54 pm, Fri, 19 July 24