AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ವಿದ್ಯುತ್‌ ಸ್ಪರ್ಶಿಸಿ ತಾಯಿ ಹಸು ಸಾವು, ಅಮ್ಮನ ಸಮಾಧಿ ಮುಂದೆ ಕರುವಿನ ಮೂಕ ರೋದನೆ

ಮನಕಲಕುವ ಘಟನೆಯ ವಿಡಿಯೋ ದೃಶ್ಯಾವಳಿಯೊಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದ್ದು, ವಿದ್ಯುತ್‌ ಸ್ಪರ್ಶದಿಂದ ಮೃತಪಟ್ಟ ತಾಯಿ ಹಸುವನ್ನು ಮನೆಯವರು ಮಣ್ಣು ಮಾಡಿದ್ದು, ಆದರೆ ನನಗೆ ಅಮ್ಮ ಬೇಕೇ ಬೇಕೆಂದು ಕರುವೊಂದು ತಾಯಿ ಸಮಾಧಿ ಬಳಿ ಓಡಿ ಬಂದು ಹೂತಿದ್ದ ಮಣ್ಣನ್ನು ಕಾಲಿನಿಂದ ಕೆರೆದು ಅಮ್ಮಾ ಎದ್ದೇಳಮ್ಮಾ..... ಎಂದು ಗೋಳಾಡಿದೆ. ಕರುವಿನ ಈ ಮೂಕ ಯಾತನೆ ಕರುಳು ಹಿಂಡುವಂತಿದೆ.

ಮಾಲಾಶ್ರೀ ಅಂಚನ್​
| Edited By: |

Updated on: Jul 19, 2024 | 11:50 AM

Share

ಮನುಷ್ಯರು ಮಾತ್ರವಲ್ಲ ಪ್ರಾಣಿಗಳಿಗೂ ರಕ್ತ ಸಂಬಂಧ, ಪ್ರೀತಿ, ಮಮತೆ, ಭಾವನೆಗಳು ಇರುವುತ್ತವೆ ಎಂಬುದಕ್ಕೆ ಸಾಕ್ಷಿ ಎಂಬಂತಿರುವ ಮನಕಲಕುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ವಿದ್ಯುತ್‌ ಸ್ಪರ್ಶದಿಂದ ಹಸುನೀಗಿದ ತಾಯಿ ಹಸುವನ್ನು ಮನೆಯವರು ಮಣ್ಣು ಮಾಡಿರುತ್ತಾರೆ. ಆದರೆ ನನಗೆ ನನ್ನಮ್ಮಾ ಬೇಕೇ ಬೇಕು ಎಂದು ಸಮಾಧಿ ಬಳಿ ಓಡುತ್ತಾ ಬಂದ ಕರು ಹೂತಿದ್ದ ಮಣ್ಣನ್ನು ಕಾಲಿನಿಂದ ಕೆರೆದು ಅಮ್ಮಾ ಎದ್ದೇಳಮ್ಮಾ….. ಎಂದು ಗೋಳಾಡಿದೆ. ಹೆತ್ತ ತಾಯಿಯನ್ನು ಕಳೆದುಕೊಂಡ ಕರುವಿನ ಈ ಯಾತನೆ ಕರುಳು ಹಿಂಡುವಂತಿದೆ.

ಈ ಮನಕಲಕುವ ಘಟನೆ ಮೈಸೂರಿನಲ್ಲಿ ನಡೆದಿದ್ದು, ಇಲ್ಲಿನ ಹೂಟಗಳ್ಳಿಯ ಎಸ್‌ಆರ್‌ಎಸ್‌ ಬಡಾವಣೆಯಲ್ಲಿ ಮಂಗಳವಾರದಂದು (ಜುಲೈ 16) 1.20 ಲಕ್ಷ ಬೆಲೆಬಾಳುವ ಗರ್ಭಿಣಿ ಹಸುವೊಂದು ರಸ್ತೆ ಬದಿಯಲ್ಲಿದ್ದ ಬೋರ್‌ವೇಲ್‌ ವಿದ್ಯುತ್‌ ಸಂಪರ್ಕ ಕಲ್ಪಿಸುವ ಸ್ವಿಚ್‌ಬಾಕ್ಸ್‌ ಸ್ಪರ್ಶಿಸಿ ಸ್ಥಳದಲ್ಲೇ ಧಾರುಣವಾಗಿ ಸಾವನ್ನಪ್ಪಿದೆ. ತಾಯಿ ಹಸುವು ಒದ್ದಾಡಿ ಪ್ರಾಣ ಬಿಟ್ಟಿದ್ದನ್ನು ಕಣ್ಣಾರೆ ಕಂಡ ಕರುವಿನ ರೋಧನೆ ಕರುಳು ಹಿಂಡುವಂತಿದೆ.

ಇದನ್ನೂ ಓದಿ: ಪಿಟ್‌ಬುಲ್‌ ಶ್ವಾನಗಳ ದಾಳಿ; ಪ್ರಾಣ ಉಳಿಸಿಕೊಳ್ಳಲು ಕಾರಿನ ಮೇಲತ್ತಿ ಕುಳಿತ ಡೆಲಿವರಿ ಬಾಯ್‌

ಹೌದು ಸಾವನ್ನಪ್ಪಿದ ಹಸುವನ್ನು ಮನೆಯವರು ಮಣ್ಣು ಮಾಡಿದ್ದು, ಆ ಸಂದರ್ಭದಲ್ಲಿ ತಾಯಿ ಸಮಾಧಿ ಬಳಿಗೆ ಓಡುತ್ತಾ ಬಂದ ಕರು ಅಮ್ಮಾ ಎದ್ದೇಳಮ್ಮಾ…. ಅಮ್ಮಾ ಎಲ್ಲಿದ್ದೀಯಾ ಬೇಗ ಬಾರಮ್ಮಾ… ಎಂದು ಕಾಲಿನಿಂದ ಸಮಾಧಿಯ ಮಣ್ಣನ್ನು ಅಗೆದು, ತಾಯಿಗಾಗಿ ಈ ಮುಗ್ಧ ಜೀವ ಗೋಳಾಡಿದೆ. ಈ ಮನಕಲಕುವ ವಿಡಿಯೋ ದೃಶ್ಯಾವಳಿ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ತಾಯಿಯನ್ನು ಕಳೆದುಕೊಂಡ ಮೂಕ ಜೀವಿಯ ಯಾತನೆ ಕರುಳು ಹಿಂಡುವಂತಿದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
5 ಜನ ಜಲಸಮಾಧಿ:ಕಾವೇರಿ ನದಿ ದಡದಲ್ಲಿ ಬ್ಯಾರಿಕೇಡ್ ಅಳವಡಿಕೆಗೆ ಸೂಚನೆ
5 ಜನ ಜಲಸಮಾಧಿ:ಕಾವೇರಿ ನದಿ ದಡದಲ್ಲಿ ಬ್ಯಾರಿಕೇಡ್ ಅಳವಡಿಕೆಗೆ ಸೂಚನೆ
ವಿಜಯೇಂದ್ರರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಅಡ್ಡಮತದಾನ ಮಾಡಿದ್ರಾ?
ವಿಜಯೇಂದ್ರರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಅಡ್ಡಮತದಾನ ಮಾಡಿದ್ರಾ?
ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಹರಿದುಬಂದ ಪ್ರವಾಸಿಗರ ದಂಡು, ಭಕ್ತ ಸಾಗರ
ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಹರಿದುಬಂದ ಪ್ರವಾಸಿಗರ ದಂಡು, ಭಕ್ತ ಸಾಗರ
ಮಳೆಯಿಲ್ಲದೇ ಬರಿದಾಯ್ತು ಭೀಮಾ ನದಿ: ಜಾನುವಾರುಗಳಿಗೂ ಕುಡಿಯಲು ನೀರಿಲ್ಲ
ಮಳೆಯಿಲ್ಲದೇ ಬರಿದಾಯ್ತು ಭೀಮಾ ನದಿ: ಜಾನುವಾರುಗಳಿಗೂ ಕುಡಿಯಲು ನೀರಿಲ್ಲ
ಚಲಿಸುತ್ತಿದ್ದ ಬೈಕ್​​ ಮೇಲೆ ಮರದ ಕೊಂಬೆ ಬಿದ್ದು ಸವಾರ ಗಂಭೀರ
ಚಲಿಸುತ್ತಿದ್ದ ಬೈಕ್​​ ಮೇಲೆ ಮರದ ಕೊಂಬೆ ಬಿದ್ದು ಸವಾರ ಗಂಭೀರ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​​ನ್ಯೂಸ್​​ ಕೊಟ್ಟ ರಾಜ್ಯ ಸರ್ಕಾರ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​​ನ್ಯೂಸ್​​ ಕೊಟ್ಟ ರಾಜ್ಯ ಸರ್ಕಾರ
ಧಾರವಾಡದ ರಾಮನಾಳದಲ್ಲಿ ಸರ್ವಧರ್ಮ ಸಮನ್ವಯತೆಗೆ ಸಾಕ್ಷಿಯಾದ ಮೊಹರಂ ಆಚರಣೆ
ಧಾರವಾಡದ ರಾಮನಾಳದಲ್ಲಿ ಸರ್ವಧರ್ಮ ಸಮನ್ವಯತೆಗೆ ಸಾಕ್ಷಿಯಾದ ಮೊಹರಂ ಆಚರಣೆ
ಬರೋಬ್ಬರಿ 6 ಕಿ.ಮೀ. ಓಡಿದ ದಳಪತಿ ವಿಜಯ್
ಬರೋಬ್ಬರಿ 6 ಕಿ.ಮೀ. ಓಡಿದ ದಳಪತಿ ವಿಜಯ್
ಮಂತ್ರಾಲಯಕ್ಕೆ ಭಕ್ತ ಸಾಗರ: 21 ದಿನಗಳಲ್ಲೇ ಬಂತು ಕೋಟಿ ಕೋಟಿ ಕಾಣಿಕೆ!
ಮಂತ್ರಾಲಯಕ್ಕೆ ಭಕ್ತ ಸಾಗರ: 21 ದಿನಗಳಲ್ಲೇ ಬಂತು ಕೋಟಿ ಕೋಟಿ ಕಾಣಿಕೆ!
ಚಲಿಸುತ್ತಿದ್ದ ಓಮಿನಿ ಕಾರಿನಿಂದ ಕೆಳಗೆ ಬಿದ್ದ ಐವರು ಮಕ್ಕಳು!
ಚಲಿಸುತ್ತಿದ್ದ ಓಮಿನಿ ಕಾರಿನಿಂದ ಕೆಳಗೆ ಬಿದ್ದ ಐವರು ಮಕ್ಕಳು!