Microsoft Windows outage: ಮೈಕ್ರೋಸಾಫ್ಟ್ ಸಮಸ್ಯೆ; ಕೈಬರಹದ ಬೋರ್ಡಿಂಗ್ ಪಾಸ್ ನೀಡಿದ ಇಂಡಿಗೋ
ಮೈಕ್ರೋಸಾಫ್ಟ್ / ಕ್ರೌಡ್‌ಸ್ಟ್ರೈಕ್ ಸ್ಥಗಿತವು ಭಾರತದ ಹೆಚ್ಚಿನ ವಿಮಾನ ನಿಲ್ದಾಣಗಳಿಗೆ ಹೊಡೆತ ನೀಡಿದೆ. ಇಂಡಿಗೋ ನೀಡಿದ ಬೋರ್ಡಿಂಗ್ ಪಾಸ್‌ನ ಚಿತ್ರವನ್ನು ಹಂಚಿಕೊಂಡ ಎಕ್ಸ್ ಬಳಕೆದಾರ ಅಕ್ಷಯ್ ಕೊಠಾರಿ ನನ್ನ ಮೊದಲ ಕೈ ಬರಹದ ಬೋರ್ಡಿಂಗ್ ಪಾಸ್ ಅನ್ನು ಇಂದು ಪಡೆದುಕೊಂಡಿದ್ದೇನೆ ಎಂದು ಹೇಳಿದ್ದಾರೆ. ಈ ಫೋಟೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ದೆಹಲಿ ಜುಲೈ 19: ಇತ್ತೀಚಿನ ಕ್ರೌಡ್‌ಸ್ಟ್ರೈಕ್ ಅಪ್‌ಡೇಟ್ (CrowdStrike update)ನಿಂದಾಗಿ ಇಂದು(ಶುಕ್ರವಾರ) ಮೈಕ್ರೋಸಾಫ್ಟ್ ವಿಂಡೋಸ್ (Microsoft Windows) ಸೇವೆ ಸ್ಥಗಿತಗೊಂಡಿದೆ. ಇದು ಅನೇಕ ಬಳಕೆದಾರರಿಗೆ ಭಯಾನಕ “ಬ್ಲೂ ಸ್ಕ್ರೀನ್ ಆಫ್ ಡೆತ್” ಎರರ್ ತೋರಿಸಿದೆ. ಇಂಡಿಗೋ (Indigo) ಕೂಡ ಈ ಸೇವೆಯ ನಿಲುಗಡೆಯಿಂದ ಪ್ರಭಾವಿತವಾಗಿದೆ. ಕಂಪ್ಯೂಟರ್ ಕಾರ್ಯವೆಸಗದೇ ಇರುವ ಕಾರ ವಿಮಾನಯಾನವು ಪ್ರಯಾಣಿಕರಿಗೆ ಕೈಬರಹದ ಬೋರ್ಡಿಂಗ್ ಪಾಸ್‌ಗಳನ್ನು ನೀಡುತ್ತಿದೆ.
ಮೈಕ್ರೋಸಾಫ್ಟ್ / ಕ್ರೌಡ್‌ಸ್ಟ್ರೈಕ್ ಸ್ಥಗಿತವು ಭಾರತದ ಹೆಚ್ಚಿನ ವಿಮಾನ ನಿಲ್ದಾಣಗಳಿಗೆ ಹೊಡೆತ ನೀಡಿದೆ. ಇಂಡಿಗೋ ನೀಡಿದ ಬೋರ್ಡಿಂಗ್ ಪಾಸ್‌ನ ಚಿತ್ರವನ್ನು ಹಂಚಿಕೊಂಡ ಎಕ್ಸ್ ಬಳಕೆದಾರ ಅಕ್ಷಯ್ ಕೊಠಾರಿ ನನ್ನ ಮೊದಲ ಕೈ ಬರಹದ ಬೋರ್ಡಿಂಗ್ ಪಾಸ್ ಅನ್ನು ಇಂದು ಪಡೆದುಕೊಂಡಿದ್ದೇನೆ ಎಂದು ಹೇಳಿದ್ದಾರೆ.
The Microsoft / CrowdStrike outage has taken down most airports in India. I got my first hand-written boarding pass today 😅 pic.twitter.com/xsdnq1Pgjr
— Akshay Kothari (@akothari) July 19, 2024
ಸಾಮಾಜಿಕ ಮಾಧ್ಯಮ ಬಳಕೆದಾರರು ಈ ಪೋಸ್ಟ್‌ಗೆ ತರಹೇವಾರಿ ಕಾಮೆಂಟ್ ಮಾಡಿದ್ದು “ನಾವು ಶಿಲಾಯುಗಕ್ಕೆ ಹಿಂತಿರುಗುತ್ತಿದ್ದೇವೆ” ಎಂದು ಒಬ್ಬರು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು “ಇಟ್ಟುಕೊಳ್ಳಲು ಉತ್ತಮ ನೆನಪು ಎಂದು ಹೇಳಿದ್ದಾರೆ.
“ಕೈಯಿಂದ ಬರೆದ ಬೋರ್ಡಿಂಗ್ ಪಾಸ್? ಇದು ಡಿಜಿಟಲ್ ಪೂರ್ವ ಯುಗಕ್ಕೆ ರೆಟ್ರೊ ಥ್ರೋಬ್ಯಾಕ್‌ನಂತಿದೆ!ಎಂದು ಮತ್ತೊಬ್ಬ ಬಳಕೆದಾರ ಕಾಮೆಂಟಿಸಿದ್ದಾರೆ.
“ನಾವು ತಂತ್ರಜ್ಞಾನದ ಮೇಲೆ ಎಷ್ಟು ಅವಲಂಬಿತರಾಗಿದ್ದೇವೆ ಎಂಬುದನ್ನು ನೋಡಲು ಆಕರ್ಷಕವಾಗಿದೆ. ಈ ನಿಲುಗಡೆಯು ಬ್ಯಾಕ್‌ಅಪ್ ವ್ಯವಸ್ಥೆಗಳ ಪ್ರಾಮುಖ್ಯತೆ ಮತ್ತು ಮಾನವನ ಚತುರತೆಯ ಸ್ಥಿತಿಸ್ಥಾಪಕತ್ವವನ್ನು ಎತ್ತಿ ತೋರಿಸುತ್ತದೆ” ಎಂದು ಎಕ್ಸ್ ಬಳಕೆದಾರರೊಬ್ಬರು ಹೇಳಿದ್ದಾರೆ.
ಮೈಕ್ರೋಸಾಫ್ಟ್ ಸ್ಥಗಿತ: ಇಂಡಿಗೋ ಹೇಳಿದ್ದೇನು?
ಮಧ್ಯಾಹ್ನ 12:37 ಕ್ಕೆ ಇಂಡಿಗೋ ತಾಂತ್ರಿಕ ದೋಷವನ್ನು ಬಗ್ಗೆ ಹೇಳಿಕೆಯನ್ನು ಬಿಡುಗಡೆ ಮಾಡಿತು. “ನಮ್ಮ ಸಂಪರ್ಕ ಕೇಂದ್ರಗಳು ಮತ್ತು ವಿಮಾನ ನಿಲ್ದಾಣಗಳಲ್ಲಿ ಕಾಯುವ ಸಮಯವನ್ನು ಹೆಚ್ಚಿಸಿರುವ Microsoft Azureನಲ್ಲಿನ ಸಮಸ್ಯೆಯಿಂದ ನೆಟ್‌ವರ್ಕ್‌ನಾದ್ಯಂತ ನಮ್ಮ ಸಿಸ್ಟಮ್‌ಗಳು ಪ್ರಭಾವಿತವಾಗಿವೆ. ನೀವು ನಿಧಾನಗತಿಯ ಚೆಕ್-ಇನ್‌ಗಳು ಮತ್ತು ದೀರ್ಘ ಸರತಿ ಸಾಲುಗಳಲ್ಲಿ ನಿಲ್ಲಬೇಕಾಗಿ ಬಂದಿತು. ನಾವೆಲ್ಲರೂ ಸಮಸ್ಯೆ ಪರಿಹರಿಸಲು ಪ್ರಯತ್ನಿಸುತ್ತಿದ್ದೇವೆ. ಸ್ಥಿರತೆ ಮತ್ತು ಸಾಮಾನ್ಯತೆಯನ್ನು ಪುನಃಸ್ಥಾಪಿಸಲು ಪಟ್ಟುಬಿಡದೆ ಕೆಲಸ ಮಾಡುತ್ತಿದ್ದೇವೆ. ಈ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಲು ನಮ್ಮ ಡಿಜಿಟಲ್ ತಂಡವು Microsoft Azure ನೊಂದಿಗೆ ನಿಕಟವಾಗಿ ಸಂಯೋಜಿಸುತ್ತಿದೆ. ಈ ಸಮಯದಲ್ಲಿ ನಿಮ್ಮ ತಾಳ್ಮೆ ಮತ್ತು ತಿಳುವಳಿಕೆಯನ್ನು ನಾವು ಪ್ರಶಂಸಿಸುತ್ತೇವೆ.
ಇದನ್ನೂ ಓದಿ: ಮೈಕ್ರೋಸಾಫ್ಟ್ ತಾಂತ್ರಿಕ ದೋಷ: ಭಾರತದ ಎನ್ಐಸಿ ನೆಟ್ವರ್ಕ್ ಮೇಲೆ ಪರಿಣಾಮ ಆಗಿಲ್ಲ: ಸಚಿವ ಎ ವೈಷ್ಣವ್ ಸ್ಪಷ್ಟನೆ
ಸೇವೆ ಸ್ಥಗಿತವು “ಬುಕಿಂಗ್, ಚೆಕ್-ಇನ್, ಬೋರ್ಡಿಂಗ್ ಪಾಸ್‌ಗೆ ಪ್ರವೇಶ ಮತ್ತು ವಿಮಾನಗಳ” ಮೇಲೆ ಪರಿಣಾಮ ಬೀರುತ್ತಿದೆ ಎಂದು ಕಂಪನಿ ಹೇಳಿದೆ. ತನ್ನ ಗ್ರಾಹಕರು “ಸಂಪರ್ಕ ಕೇಂದ್ರದಲ್ಲಿ ಹೆಚ್ಚಿನ ಪ್ರಮಾಣದ ಅನುಭವವನ್ನು ಅನುಭವಿಸುತ್ತಿರುವ ಕಾರಣ” ಅವರ ಪ್ರಯಾಣವು 24 ಗಂಟೆಗಳ ಒಳಗೆ ಇದ್ದರೆ ಮಾತ್ರ ಅವರನ್ನು ಸಂಪರ್ಕಿಸುವಂತೆ ಅದು ತನ್ನ ಗ್ರಾಹಕರನ್ನು ಒತ್ತಾಯಿಸಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ