ಮೈಕ್ರೋಸಾಫ್ಟ್ ತಾಂತ್ರಿಕ ದೋಷ: ಭಾರತದ ಎನ್ಐಸಿ ನೆಟ್ವರ್ಕ್ ಮೇಲೆ ಪರಿಣಾಮ ಆಗಿಲ್ಲ: ಸಚಿವ ಎ ವೈಷ್ಣವ್ ಸ್ಪಷ್ಟನೆ
CERT technical advisory on Microsoft outage: ಇಂದು ಜುಲೈ 19ರಂದು ಕ್ರೌಡ್ಸ್ಟ್ರೈಕ್ ಅಪ್ಡೇಟ್ ಇರುವ ವಿಂಡೋಸ್ ಕಂಪ್ಯೂಟರ್ಗಳು ಕ್ರ್ಯಾಷ್ ಆಗುತ್ತಿವೆ. ಜಾಗತಿಕವಾಗಿ ಹಲವು ಸೇವೆಗಳು ಸ್ಥಗಿತಗೊಂಡಿವೆ. ಕೇಂದ್ರ ಐಟಿ ಮತ್ತು ಎಲೆಕ್ಟ್ರಾನಿಕ್ಸ್ ಸಚಿವ ಎ ವೈಷ್ಣವ್ ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಸಿಇಆರ್ಟಿ ಸಂಸ್ಥೆ ಅಡ್ವೈಸರಿ ಬಿಡುಗಡೆ ಮಾಡಿದ್ದು, ಈ ತಾಂತ್ರಿಕ ದೋಷದ ಸಮಸ್ಯೆಗೆ ಪರಿಹಾರಕ್ಕೆ ಮಾರ್ಗೋಪಾಯ ಕೂಡ ನೀಡಿದೆ.
ನವದೆಹಲಿ, ಜುಲೈ 19: ಮೈಕ್ರೋಸಾಫ್ಟ್ ತಂತ್ರಾಂಶದ ಕಂಪ್ಯೂಟರ್ಗಳಲ್ಲಿ ಇಂದು ಬಗ್ ಸಮಸ್ಯೆ ತಲೆದೋರಿ ಜಾಗತಿಕವಾಗಿ ವಿವಿಧ ಸೇವೆಗಳು ವ್ಯತ್ಯಯಗೊಂಡಿದೆ. ಈ ಬೆಳವಣಿಗೆ ಬಗ್ಗೆ ಭಾರತದ ಎಲೆಕ್ಟ್ರಾನಿಕ್ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಮೈಕ್ರೋಸಾಫ್ಟ್ ಹಾಗೂ ಅದರ ಸಹಸಂಸ್ಥೆಗಳ ಜೊತೆ ತಮ್ಮ ಸಚಿವಾಲಯ ಸಂಪರ್ಕದಲ್ಲಿದೆ. ಈ ಜಾಗತಿಕ ತಾಂತ್ರಿಕ ದೋಷಕ್ಕೆ ಕಾರಣ ಏನೆಂದು ಗುರುತಿಸಲಾಗಿದೆ. ಸಮಸ್ಯೆ ಬಗೆಹರಿಸಲು ಅಪ್ಡೇಟ್ಗಳನ್ನು ಮೈಕ್ರೋಸಾಫ್ಟ್ ಬಿಡುಗಡೆ ಮಾಡಿದೆ ಎಂದು ಸಚಿವ ಅಶ್ವಿನಿ ವೈಷ್ಣವ್ ಮಾಹಿತಿ ನೀಡಿದ್ದಾರೆ.
ಎಕ್ಸ್ ಪ್ಲಾಟ್ಫಾರ್ಮ್ನಲ್ಲಿ ಈ ಬಗ್ಗೆ ಪೋಸ್ಟ್ ಹಾಕಿರುವ ಅವರು, ಸಿಇಆರ್ಟಿಯಿಂದ ಈ ಸಂಬಂಧ ಟೆಕ್ನಿಕಲ್ ಅಡ್ವೈಸರಿ ಹೊರಡಿಸಲಾಗುವುದು ಎಂದಿದ್ದಾರೆ. ಹಾಗೆಯೇ, ಸರ್ಕಾರದ ಎನ್ಐಸಿ ನೆಟ್ವರ್ಕ್ಗೆ ಈ ಮೈಕ್ರೋಸಾಫ್ಟ್ ಔಟೇಜ್ ಸಮಸ್ಯೆ ಬಾಧಿಸಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.
MEITY is in touch with Microsoft and its associates regarding the global outage.
The reason for this outage has been identified and updates have been released to resolve the issue.
CERT is issuing a technical advisory.
NIC network is not affected.
— Ashwini Vaishnaw (@AshwiniVaishnaw) July 19, 2024
ಸಿಇಆರ್ಟಿ ಅಡ್ವೈಸರಿ ಇದು…
ಸೈಬರ್ ದಾಳಿ ಇತ್ಯಾದಿ ಸಮಸ್ಯೆಗಳಿಗೆ ತುರ್ತಾಗಿ ಸ್ಪಂದಿಸಲೆಂದು ರೂಪಿಸಲಾಗಿರುವ ಸಿಇಆರ್ಟಿ ಸಂಸ್ಥೆ ಈಗ ಮೈಕ್ರೋಸಾಫ್ಟ್ ಔಟೇಜ್ ಸಮಸ್ಯೆ ಬಗ್ಗೆ ಇಂದು ಶುಕ್ರವಾರ ಅಡ್ವೈಸರಿ ಬಿಡುಗಡೆ ಮಾಡಿದೆ.
CERT-In advisory on the outage of Microsoft. https://t.co/QFo6oGqlCG pic.twitter.com/7vmR80cEII
— Ashwini Vaishnaw (@AshwiniVaishnaw) July 19, 2024
“ಕ್ರೌಡ್ ಸ್ಟ್ರೈಕ್ನ ಫಾಲ್ಕನ್ ಸೆನ್ಸಾರ್ ಹೊಂದಿರುವ ವಿಂಡೋಸ್ ಸಿಸ್ಟಂಗಳಿಗೆ ಸಮಸ್ಯೆ ಆಗಿದೆ. ಈ ಫಾಲ್ಕನ್ ಸೆನ್ಸಾರ್ನ ಇತ್ತೀಚಿನ ಅಪ್ಡೇಟ್ನಿಂದ ಈ ಸಮಸ್ಯೆ ಆಗಿದೆ. ಫಾಲ್ಕನ್ ಸೆನ್ಸಾರ್ಗೆ ಸಂಬಂಧಿಸಿದ ಬ್ಲೂ ಸ್ಕ್ರಿನ್ ಆಫ್ ಡೆತ್ ದೋಷ ಕಾಣಿಸಿಕೊಂಡಿದೆ” ಎಂದು ಸಿಇಆರ್ಟಿ ವಿವರಿಸಿದೆ.
ಇದನ್ನೂ ಓದಿ: ನಿಮಗೂ ಬಂತಾ ಈ ಬ್ಲೂ ಸ್ಕ್ರೀನ್ ಎರರ್? ಕಂಪ್ಯೂಟರ್ ದಿಢೀರ್ ರೀಸ್ಟಾರ್ಟ್ ಆಗ್ತಿದ್ಯಾ? ಹೀಗೆ ಮಾಡಿ…
“ಕ್ರೌಡ್ಸ್ಟ್ರೈಕ್ನ ಇತ್ತೀಚಿನ ಅಪ್ಡೇಟ್ನಿಂದ ಸಮಸ್ಯೆಗಳಾಗಿವೆ. ಇದು ಕ್ರೌಡ್ ಸ್ಟ್ರೈಕ್ ಗಮನಕ್ಕೆ ಹೋಗಿದೆ. ಹೊಸ ಅಪ್ಡೇಟ್ ಬಿಡುಗಡೆ ಮಾಡಲಾಗಿದೆ. ವಿಂಡೋಸ್ ಬಳಕೆದಾರರು ಈಗಲೂ ಕೂಡ ಸಮಸ್ಯೆ ಎದುರಿಸುತ್ತಿದ್ದರೆ ಈ ಕೆಳಗಿನ ಕ್ರಮ ತೆಗೆದುಕೊಳ್ಳಬೇಕು:
- ನಿಮ್ಮ ವಿಂಡೋಸ್ ಅನ್ನು ಸ್ಟಾರ್ಟ್ ಮಾಡಿ ಸೇಫ್ ಮೋಡ್ ಅಥವಾ ವಿಂಡೋಸ್ ರಿಕವರಿ ಎನ್ವಿರಾನ್ಮೆಂಟ್ನಲ್ಲಿ ಬೂಟ್ ಮಾಡಿ.
- C:\Windows\System32\drivers\CrowdStrike directory ಇಲ್ಲಿಗೆ ಹೋಗಿ
- ಇಲ್ಲಿ ‘C-00000291*.sys’ ಎಂಬ ಹೆಸರಿನ ಫೈಲ್ ಅನ್ನು ಹುಡುಕಿರಿ.
- ಈ ಫೈಲ್ ಅನ್ನು ಡಿಲೀಟ್ ಮಾಡಿ.
- ಈಗ ನಿಮ್ಮ ವಿಂಡೋಸ್ ಅನ್ನು ಮಾಮೂಲಿಯ ರೀತಿಯಲ್ಲಿ ಬೂಟ್ ಮಾಡಿ.”
ಎಂದು ಸಿಇಆರ್ಟಿ ತನ್ನ ಅಡ್ವೈಸರಿಯಲ್ಲಿ ಕ್ರಮಗಳನ್ನು ವಿವರಿಸಿದೆ. ಹಾಗೆಯೇ, ಕ್ರೌಡ್ ಸ್ಟ್ರೈಕ್ ಪೋರ್ಟಲ್ಗೆ ಹೋಗಿ ಹೊಸ ಅಪ್ಡೇಟ್ಗಳಿದ್ದರೆ ಡೌನ್ಲೋಡ್ ಮಾಡಿ ಇನ್ಸ್ಟಾಲ್ ಮಾಡಬೇಕೆಂದೂ ಅದು ಸಲಹೆ ನೀಡಿದೆ.
ಇನ್ನಷ್ಟು ತಂತ್ರಜ್ಞಾನ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ