
ಸಾಮಾನ್ಯವಾಗಿ ಆಟೋದಲ್ಲಿ 3 ರಿಂದ 4 ಜನ ಪ್ರಯಾಣಿಕರಷ್ಟೇ ಕುಳಿತುಕೊಳ್ಳಲು ಸಾಧ್ಯ. ಅಬ್ಬಬ್ಬಾ ಅಂದ್ರೆ ಚಾಲಕ ಒಂದೆರಡು ಪ್ರಯಾಣಿಕರನ್ನು ಹೆಚ್ಚುವರಿಯಾಗಿ ಕೂರಿಸಿಕೊಂಡು ಹೋಗ್ತಾನೆ. ಆದ್ರೆ ಇಲ್ಲೊಬ್ಬ ಆಟೋ ಚಾಲಕ ಒಂದೇ ಬಾರಿಗೆ ಬರೋಬ್ಬರಿ 19 ಜನರನ್ನು ರಿಕ್ಷಾದಲ್ಲಿ ಕೂರಿಸಿಕೊಂಡು ಹೋಗಿದ್ದಾನೆ. ಹೌದು ಸಂಚಾರ ನಿಯಮಗಳನ್ನೇ ಉಲ್ಲಂಘಿಸಿ ಒಂದೇ ಬಾರಿಗೆ ಆಟೋದಲ್ಲಿ 19 ಜನ ಪ್ರಯಾಣಿಕರನ್ನು ಕರೆದುಕೊಂಡು ಹೋಗಿದ್ದು, ಒಂದೇ ಆಟೋದೊಳಗೆ ಇಷ್ಟೊಂದು ಜನರನ್ನು ಕಂಡು ಇದೆಲ್ಲಾ ಹೆಂಗಪ್ಪಾ ಸಾಧ್ಯ ಎಂದು ಪೊಲೀಸರು ಬೆಚ್ಚಿ ಬಿದ್ದಿದ್ದಾರೆ. ಈ ಕುರಿತ ವಿಡಿಯೋವೊಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.
ಈ ಘಟನೆ ಉತ್ತರ ಪ್ರದೇಶದ ಝಾನ್ಸಿಯಲ್ಲಿ ನಡೆದಿದ್ದು. ಆಟೋ ಚಾಲಕನೊಬ್ಬ ಒಂದೇ ಬಾರಿಗೆ ತನ್ನ ಆಟೋದಲ್ಲಿ 19 ಪ್ರಯಾಣಿಕರನ್ನು ಹೊತ್ತೊಯ್ಯುವ ಮೂಲಕ ಸಂಚಾರ ನಿಯಮವನ್ನು ಉಲ್ಲಂಘಿಸಿದ್ದಾನೆ. ಫೆಬ್ರವರಿ 15 ಶನಿವಾರ ರಾತ್ರಿಯ ವೇಳೆ ಆಟೋ ಚಾಲಕ ತನ್ನ ಆಟೋದಲ್ಲಿ 19 ಜನರನ್ನು ಕೂರಿಸಿಕೊಂಡು ಬರುತ್ತಿದ್ದ ವೇಳೆ ಬರುವಾಸಾಗರ್ ಪೊಲೀಸ್ ಠಾಣೆ ವ್ಯಾಪ್ತಿಯ ಚೆಕ್ ಪಾಯಿಂಟ್ ಬಳಿ ಪೊಲೀಸರು ಆಟೋವನ್ನು ನಿಲ್ಲಿಸಿದಾಗ, ಸಂಚಾರ ನಿಯಮವನ್ನು ಉಲ್ಲಂಘಿಸಿ ಚಾಲಕ ಆಟೋವನ್ನು ಓಡಿಸಿದ್ದಾನೆ ಎಂದು ತಿಳಿದಿದೆ. ಅಷ್ಟೇ ಅಲ್ಲದೆ ಒಂದು ಪುಟ್ಟ ಆಟೋದೊಳಗೆ 19 ಜನರಿರುವುದನ್ನು ಕಂಡು ಪೊಲೀಸರು ಬೆಚ್ಚಿಬಿದ್ದಿದ್ದಾರೆ. ಈ ಕುರಿತ ವಿಡಿಯೋವೊಂದು ಇದೀಗ ವೈರಲ್ ಆಗುತ್ತಿದ್ದು, ಆಟೋ ಚಾಲಕನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತ ವಿಡಿಯೋವನ್ನು ghantaa ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಲಾಗಿದೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಪೊಲೀಸರು ಆಟೋದಲ್ಲಿದ್ದ 19 ಪ್ರಯಾಣಿಕರನ್ನು ಒಬ್ಬೊಬ್ಬರನ್ನಾಗಿಯೇ ಕೆಳಗಿಳಿಸುತ್ತಿರುವ ದೃಶ್ಯವನ್ನು ಕಾಣಬಹುದು. ಹೀಗೆ ಒಬ್ಬೊಬ್ಬರನ್ನಾಗಿಯೇ ಇಳಿಸುತ್ತಾ ಒಟ್ಟಾರೆ ಒಂದೇ ಆಟೋದೊಳಗೆ 19 ಜನರಿದ್ದಾರೆ ಎಂದು ತಿಳಿದು ಪೊಲೀಸರು ಫುಲ್ ಶಾಕ್ ಆಗಿದ್ದಾರೆ.
ಇದನ್ನೂ ಓದಿ: ವರನ ಹುಡುಕಾಟದಲ್ಲಿ ಉದ್ಯಮಿ ಕುಟುಂಬ, ವಧುವಿನ ಹಿನ್ನಲೆ ಬದಲು ಕುಟುಂಬ ಆರ್ಥಿಕ ಸ್ಥಿತಿಯೇ ಜಾಹೀರಾತಿನಲ್ಲಿ ಹೈಲೈಟ್
ಒಂದು ದಿನದ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 3.2 ಲಕ್ಷ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇದೋನು ಆಟೋನಾ ಅಥವಾ ಬಸ್ಸಾ ಒಂದೂ ಗೊತ್ತಾಗ್ತಿಲ್ಲʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಅಯ್ಯೋ ದೇವ್ರೆ ಇದೆಲ್ಲಾ ಹೆಂಗೆ ಸಾಧ್ಯʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ