AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವರನ ಹುಡುಕಾಟದಲ್ಲಿ ಉದ್ಯಮಿ ಕುಟುಂಬ, ವಧುವಿನ ಹಿನ್ನಲೆ ಬದಲು ಕುಟುಂಬ ಆರ್ಥಿಕ ಸ್ಥಿತಿಯೇ ಜಾಹೀರಾತಿನಲ್ಲಿ ಹೈಲೈಟ್

ಹುಡುಗ ಹುಡುಗಿಗೆ ಮದುವೆ ಮಾಡಲು ಕುಟುಂಬಸ್ಥರು ವಧು ವರರ ಅನ್ವೇಷಣೆ ಕೇಂದ್ರ ಅಥವಾ ಬ್ರೋಕರ್ ಇಲ್ಲದಿದ್ದರೆ ಪತ್ರಿಕೆಯಲ್ಲಿ ಜಾಹೀರಾತು ಸಹ ನೀಡುವುದು ಸಹಜ. ಒಳ್ಳೆಯ ಉದ್ಯೋಗ ಹಾಗೂ ಗುಣ ನಡತೆಯಿರುವ ಹುಡುಗ ಹುಡುಗಿ ಸಿಕ್ಕರೆ ಸಾಕು ಎನ್ನುವ ಕಾಲಘಟ್ಟದಲ್ಲಿ ಇದೀಗ ವಧುವಿನ ತಂದೆ ನೀಡಿರುವ ಪತ್ರಿಕೆ ಜಾಹೀರಾತಿನ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಇದು ಮದುವೆ ಪ್ರಸ್ತಾವನೆಯೋ ಅಥವಾ ವ್ಯವಹಾರ ವಿಲೀನವೋ ಎಂದು ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡಿದ್ದಾರೆ.

ವರನ ಹುಡುಕಾಟದಲ್ಲಿ ಉದ್ಯಮಿ ಕುಟುಂಬ, ವಧುವಿನ ಹಿನ್ನಲೆ ಬದಲು ಕುಟುಂಬ ಆರ್ಥಿಕ ಸ್ಥಿತಿಯೇ ಜಾಹೀರಾತಿನಲ್ಲಿ ಹೈಲೈಟ್
ವೈರಲ್ ಪೋಸ್ಟ್
ಸಾಯಿನಂದಾ
| Edited By: |

Updated on: Feb 17, 2025 | 4:47 PM

Share

ಇತ್ತೀಚೆಗಿನ ದಿನಗಳಲ್ಲಿ ಮದುವೆಗೆ ಸೂಕ್ತ ವರ ಹಾಗೂ ವಧುವನ್ನೇ ಹುಡುಕುವುದೇ ಬಹುದೊಡ್ಡ ತಲೆ ನೋವು. ಹೀಗಾಗಿ ಹೆಚ್ಚಿನವರು ವಧುವರರ ಹುಡುಕಾಟಕ್ಕಾಗಿ ವೈವಾಹಿಕ ವೆಬ್‌ಸೈಟ್‌ಗಳು ಮತ್ತು ಅಪ್ಲಿಕೇಶನ್‌ಗಳನ್ನು ಅವಲಂಬಿಸಿಕೊಂಡಿರುತ್ತಾರೆ. ಈ ಮೂಲಕ ತಮಗೆ ಹೊಂದಾಣಿಕಯಾಗುವ ಯೋಗ್ಯ ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಇನ್ನು ಕೆಲವರು ತಮ್ಮ ಪರಿಚಯಸ್ಥರು ಮತ್ತು ಸಂಬಂಧಿಕರಲ್ಲಿ ಒಳ್ಳೆಯ ಹುಡುಗ ಅಥವಾ ಹುಡುಗಿ ಎಲ್ಲಾದರೂ ಇದ್ದರೆ ತಿಳಿಸಿ ಎಂದು ಹೇಳುವುದನ್ನು ನೋಡಿರಬಹುದು. ಕೆಲವರು ವಧು ಬೇಕಾಗಿದ್ದಾರೆ ಅಥವಾ ವರ ಬೇಕಾಗಿದ್ದಾರೆ ಪತ್ರಿಕೆಯಲ್ಲಿ ಜಾಹಿರಾತು ಪ್ರಕಟಿಸುವುದನ್ನು ನೋಡಿರಬಹುದು. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ತನ್ನ 28 ವರ್ಷದ ಮಗಳಿಗೆ ಮಾರ್ವಾಡಿ ಅಥವಾ ಗುಜರಾತಿ ಹುಡುಗನನ್ನು ಹುಡುಕುತ್ತಿದ್ದೇವೆ ಎಂದು ಜಾಹೀರಾತು ನೀಡಿದ್ದು ಈ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಪತ್ರಿಕೆಯೊಂದರಲ್ಲಿ ಪ್ರಕಟವಾದ ಈ ಜಾಹೀರಾತಿನಲ್ಲಿ, “500 ಕೋಟಿಗೂ ಅಧಿಕ ಆಸ್ತಿ ಹೊಂದಿರುವ ಮುಂಬೈ ಮೂಲದ ಉದ್ಯಮಿ ಕುಟುಂಬವು ತಮ್ಮ ಮಗಳ (28 ವರ್ಷ) ಮದುವೆಗೆ ಸೂಕ್ತವಾದ ಮಾರ್ವಾಡಿ ಅಥವಾ ಗುಜರಾತಿ ಹುಡುಗನನ್ನು ಹುಡುಕುತ್ತಿದೆ” ಎಂದು ಬರೆಯಲಾಗಿದೆ. ಇಂತಹ ಜಾಹೀರಾತುಗಳಲ್ಲಿ ವಧು ವರರ ವಯಸ್ಸು, ಎತ್ತರ, ಶೈಕ್ಷಣಿಕ ಹಿನ್ನೆಲೆ ಮತ್ತು ಉದ್ಯೋಗದಂತಹ ವೈಯಕ್ತಿಕ ವಿವರಗಳನ್ನು ನೋಡಬಹುದು. ಆದರೆ ಇಲ್ಲಿ ವರ ಬೇಕಾಗಿರುವ ಕುಟುಂಬದ ಮಾರುಕಟ್ಟೆ ಮೌಲ್ಯದ ಬಗ್ಗೆ ಮಾಹಿತಿ ನೀಡಿದೆ.

ಇದನ್ನೂ ಓದಿ: ಕೋಳಿ ಸಾಗಾಟದ ಪಿಕಪ್‌ ಟ್ರಕ್‌ ಪಲ್ಟಿ; ವಾಹನದಿಂದ ಬಿದ್ದ ಕೋಳಿಗಳಿಗಾಗಿ ಮುಗಿಬಿದ್ದ ಚಿಕನ್‌ ಪ್ರಿಯರು

ಈ ಜಾಹೀರಾತಿನ ಫೋಟೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕಾಮೆಂಟ್ ಗಳ ಸುರಿಮಳೆಗೈದಿದ್ದಾರೆ. ಬಳಕೆದಾರರೊಬ್ಬರು, ಶ್ರೀಮಂತ ಕುಟುಂಬಗಳು ಸಾಮಾನ್ಯವಾಗಿ ಸಾರ್ವಜನಿಕ ಜಾಹೀರಾತುಗಳಿಗಿಂತ ಖಾಸಗಿ ನೆಟ್‌ವರ್ಕ್‌ಗಳು ಅಥವಾ ವೈವಾಹಿಕ ಏಜೆಂಟ್‌ಗಳನ್ನು ಅವಲಂಬಿಸಿರುತ್ತಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, 500 ಕೋಟಿ ರೂಪಾಯಿಗಿಂತ ಹೆಚ್ಚು ಆಸ್ತಿ ಇರುವವರು 5 ರೂಪಾಯಿ ಪತ್ರಿಕೆಗಳಲ್ಲಿ ವೈವಾಹಿಕ ಜಾಹೀರಾತುಗಳನ್ನು ಹಾಕುವುದಿಲ್ಲ. ಇದಕ್ಕಾಗಿ ಅವರ ಬಳಿ ಮದುವೆ ಏಜೆಂಟ್‌ಗಳಿದ್ದಾರೆ. ಇದು ಖಂಡಿತವಾಗಿಯೂ ವಂಚನೆ ಎಂದಿದ್ದಾರೆ. ಇನ್ನೊಬ್ಬರು, ಇದು ವ್ಯವಹಾರ ವಿಲೀನವೋ ಅಥವಾ ಮದುವೆಯ ಪ್ರಸ್ತಾಪವೋ?” ಎಂದು ವ್ಯಂಗ್ಯವಾಡಿದ್ದಾರೆ.

ವೈರಲ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್  ಮಾಡಿ

ಪಕ್ಷದ ನಿರ್ದೇಶನ ಪಾಲಿಸೋದು ಕಾರ್ಯಕರ್ತರ ಕರ್ತವ್ಯ: ಯತೀಂದ್ರ ಟಾಂಗ್
ಪಕ್ಷದ ನಿರ್ದೇಶನ ಪಾಲಿಸೋದು ಕಾರ್ಯಕರ್ತರ ಕರ್ತವ್ಯ: ಯತೀಂದ್ರ ಟಾಂಗ್
ಫಾರಂ ಕೋಳಿ, ಮೊಟ್ಟೆ ತಿನ್ನೋ ಮುನ್ನ ಎಚ್ಚರ: ಕೆಲವು ಕಡೆ ಹೀಗೆಲ್ಲ ಮಾಡ್ತಾರೆ!
ಫಾರಂ ಕೋಳಿ, ಮೊಟ್ಟೆ ತಿನ್ನೋ ಮುನ್ನ ಎಚ್ಚರ: ಕೆಲವು ಕಡೆ ಹೀಗೆಲ್ಲ ಮಾಡ್ತಾರೆ!
ಮಕ್ಕಳಿಗೂ ಮಾಳು ಸ್ಟೈಲ್​​ನಲ್ಲೇ ಹೇರ್​ಸ್ಟೈಲ್; ಇಲ್ಲಿದೆ ಫನ್ ವಿಡಿಯೋ
ಮಕ್ಕಳಿಗೂ ಮಾಳು ಸ್ಟೈಲ್​​ನಲ್ಲೇ ಹೇರ್​ಸ್ಟೈಲ್; ಇಲ್ಲಿದೆ ಫನ್ ವಿಡಿಯೋ
ಜಾತ್ರೆ, ಪೆಟ್ರೋಲ್ ಬಂಕ್, ಎಲ್ಲೆಲ್ಲೂ ಕೋಟಾ ನೋಟು ಚಲಾಯಿಸ್ತಿದ್ದವರು ಅಂದರ್
ಜಾತ್ರೆ, ಪೆಟ್ರೋಲ್ ಬಂಕ್, ಎಲ್ಲೆಲ್ಲೂ ಕೋಟಾ ನೋಟು ಚಲಾಯಿಸ್ತಿದ್ದವರು ಅಂದರ್
ನೈಜೀರಿಯಾದಲ್ಲಿ ಐಸಿಸ್ ನೆಲೆಗಳ ಮೇಲೆ ಟ್ರಂಪ್ ಪಡೆಯ ಮಾರಕ ದಾಳಿ
ನೈಜೀರಿಯಾದಲ್ಲಿ ಐಸಿಸ್ ನೆಲೆಗಳ ಮೇಲೆ ಟ್ರಂಪ್ ಪಡೆಯ ಮಾರಕ ದಾಳಿ
ನಿದ್ದೆಗಣ್ಣಿನಲ್ಲಿ 10ನೇ ಮಹಡಿಯಿಂದ ಕೆಳಗೆ ಬಿದ್ದ ವ್ಯಕ್ತಿ
ನಿದ್ದೆಗಣ್ಣಿನಲ್ಲಿ 10ನೇ ಮಹಡಿಯಿಂದ ಕೆಳಗೆ ಬಿದ್ದ ವ್ಯಕ್ತಿ
ತೋರು ಬೆರಳಿನ ಆಕಾರದಿಂದ ಮನುಷ್ಯನ ವ್ಯಕ್ತಿತ್ವ ಗೊತ್ತಾಗುತ್ತಾ?
ತೋರು ಬೆರಳಿನ ಆಕಾರದಿಂದ ಮನುಷ್ಯನ ವ್ಯಕ್ತಿತ್ವ ಗೊತ್ತಾಗುತ್ತಾ?
ಇಂದು ಈ ರಾಶಿಯವರ ಪ್ರೇಮ ವ್ಯವಹಾರಗಳಿಗೆ ಅಡ್ಡಿ
ಇಂದು ಈ ರಾಶಿಯವರ ಪ್ರೇಮ ವ್ಯವಹಾರಗಳಿಗೆ ಅಡ್ಡಿ
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು