
ಉತ್ತರ ಪ್ರದೇಶ, ಡಿ.26: ಉತ್ತರ ಪ್ರದೇಶದ (UP bike stunt) ರಾಷ್ಟ್ರೀಯ ಹೆದ್ದಾರಿಯಲ್ಲಿ ಒಂದೇ ಬೈಕ್‌ನಲ್ಲಿ 5 ಜನ ಹೋಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ರಸ್ತೆ ಸಂಚಾರ ನಿಯಮವನ್ನು ಉಲ್ಲಂಘಿಸಿ, ಐದು ಹುಡುಗರು ಒಂದೇ ಬೈಕ್‌ನಲ್ಲಿ ಹೋಗಿದ್ದಾರೆ. ಇದೀಗ ಈ ರೀತಿಯ ಸಂಚಾರ ಸಾರ್ವಜನಿಕರಲ್ಲಿ ಹಾಗೂ ವಾಹನ ಸವಾರರಲ್ಲಿ ಭೀತಿ ಹುಟ್ಟಿಸಿದೆ. ಹಾಪುರದ ರಾಷ್ಟ್ರೀಯ ಹೆದ್ದಾರಿ 9 ರಲ್ಲಿ ಈ ಘಟನೆ ನಡೆದಿದೆ. ಈ ವಿಡಿಯೋದಲ್ಲಿ 5 ಜನ ಯುವಕರು ಅಪಾಯಕಾರಿ ಸವಾರಿ ನಡೆಸಿದ್ದಾರೆ. ಇನ್ನು ಈ ಬೈಕ್ನ ಕೊನೆಯಲ್ಲಿ ನೇತಾಡಿಕೊಂಡು ಕೂತಿರುವುದನ್ನು ಕಾಣಬಹುದು. ಇದೀಗ ಈ ವಿಡಿಯೋ ಪೊಲೀಸರ ಕೈ ಸೇರಿದೆ.
ರಾಷ್ಟ್ರೀಯ ಹೆದ್ದಾರಿ 9ರಲ್ಲಿ ಐದು ಹುಡುಗರು ಒಂದೇ ಬೈಕ್‌ನಲ್ಲಿ ಸವಾರಿ ಮಾಡುವುದನ್ನು ಕಾಣಬಹುದು. ಐದು ಹುಡುಗರಲ್ಲಿ ಒಬ್ಬ ಹುಡುಗ ಬೈಕ್‌ನಿಂದ ನೇತಾಡುತ್ತಿರುವುದು ಮತ್ತು ಇನ್ನೊಬ್ಬ ಹುಡುಗ ಅವನ ಬೆನ್ನಿಗೆ ನಿಂತಿರುವುದನ್ನು ಕಾಣಬಹುದು. ಮತ್ತೊಂದೆಡೆ, ಬೈಕ್ನ ಹಿಂದೆ ಕೂತಿದ್ದ ಯುವಕ ವಿಡಿಯೋ ಮಾಡಿದ್ದಾನೆ. ಇನ್ನು ಬೈಕ್ ಹಿಂದೆ ಒಬ್ಬರು ವಿಡಿಯೋ ದೃಶ್ಯವನ್ನು ಸೆರೆಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
#हापुड़ में एक बाइक पर 5 लड़कों ने एक साथ सवारी करके विश्व कीर्तिमान बनाया है. यह सेलिब्रेशन यातायात माह का जश्न है. पुलिस ने बाइक का 31 हजार रूपये का चालान किया है pic.twitter.com/04NwE0PfBx
— Narendra Pratap (@hindipatrakar) December 23, 2025
ಈ ವಿಡಿಯೋ ವೈರಲ್ ಆದ ನಂತರ, ಪಿಲ್ಖುವಾ ಕೊಟ್ವಾಲಿಯ ಪೊಲೀಸ್ ಅಧಿಕಾರಿಗಳು ಈ ಬಗ್ಗೆ ತನಿಖೆಯನ್ನು ನಡೆಸಿ, ಪೊಲೀಸರು ಸಂಚಾರ ಉಲ್ಲಂಘನೆ ಪ್ರಕರಣವನ್ನು ದಾಖಲಿಸಿಕೊಂಡು ಅಜಾಗರೂಕ ಮತ್ತು ಅಪಾಯಕಾರಿ ಸವಾರಿಗಾಗಿ 31,000 ರೂ. ದಂಡ ಹಾಕಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಬುಲೆಟ್ಗೆ ಗುದ್ದಿ ಅರ್ಧ ಕಿಮೀ ಎಳೆದೊಯ್ದ ಕಾರು, ರಸ್ತೆಯುದ್ದಕ್ಕೂ ಬೆಂಕಿಯ ಕಿಡಿ
ಈ ವಿಡಿಯೋ ಇದೊಂದೇ ಅಲ್ಲ. ಜನರು ಸಾರ್ವಜನಿಕ ರಸ್ತೆಗಳಲ್ಲಿ ಇಂತಹ ಅಪಾಯಕಾರಿ ಸಾಹಸಗಳನ್ನು ಮಾಡುತ್ತಲೇ ಇರುತ್ತಾರೆ, ಇದು ಅವರ ಜೀವಕ್ಕೆ ಮತ್ತು ರಸ್ತೆಗಳಲ್ಲಿ ಇತರರ ಸವಾರಿಗೂ ಜೀವಕ್ಕೆ ದೊಡ್ಡ ಅಪಾಯವನ್ನುಂಟುಮಾಡುತ್ತದೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:36 pm, Fri, 26 December 25