ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಗುಂಪುಗಳ ನಡುವೆ ಸಣ್ಣಪುಟ್ಟ ಜಗಳಗಳು, ಮನಸ್ತಾಪಗಳು ಆಗುತ್ತಲೇ ಇರುತ್ತವೆ. ಆದ್ರೆ ಈ ಮಸ್ತಾಪಗಳು ಕೈ ಮಿಲಾಯಿಸುವ ಮಟ್ಟಕ್ಕೆ ಹೋಗಲ್ಲ. ಕೇವಲ ಸಿನಿಮಾ, ಧಾರಾವಾಹಿಗಳಲ್ಲಿ ಮಾತ್ರ ವಿದ್ಯಾರ್ಥಿಗಳ ಎರಡು ಬಣಗಳ ಫೈಟ್ ಸೀನ್ ಕಾಣಸಿಗುತ್ತವೆ. ಆದ್ರೆ ಇಲ್ಲೊಂದು ಇಂತಹದ್ದೇ ಸಿನಿಮಿಯ ರೀತಿಯ ಘಟನೆ ನಡೆದಿದ್ದು, ಶಿಕ್ಷಕಿಯೊಬ್ಬರು ಪಾಠ ಮಾಡುತ್ತಿರುವಾಗಲೇ ಹೇಳದೆ ಕೇಳದೆ ತರಗತಿಯೊಳಗೆ ಎಂಟ್ರಿ ಕೊಟ್ಟ ಪುಂಡ ವಿದ್ಯಾರ್ಥಿ, ಆ ತರಗತಿಯಲ್ಲಿದ್ದ ವಿದ್ಯಾರ್ಥಿಯೊಬ್ಬನಿಗೆ ಬೆಲ್ಟ್‌ನಿಂದ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಪುಂಡ ಹುಡುಗನ ಈ ಗೂಂಡಾಗಿರಿಯ ವಿಡಿಯೋ ಇದೀಗ ವೈರಲ್ ಆಗುತ್ತಿದ್ದು, ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ನೆಟ್ಟಿಗರು ಕಳವಳ ವ್ಯಕ್ತಪಡಿಸಿದ್ದಾರೆ.
ಈ ಘಟನೆ ಉತ್ತರ ಪ್ರದೇಶದ ಬಹ್ರೈಚ್ ಪ್ರದೇಶದಲ್ಲಿ ನಡೆದಿದ್ದು, ಇಲ್ಲಿನ ಪ್ರತಿಷ್ಠಿತ ಸೆವೆಂತ್ ಡೇ ಅಡ್ವೆಂಟಿಸ್ಟ್ ಇಂಟರ್ ಕಾಲೇಜ್ ಸ್ಕೂಲ್‌ನಲ್ಲಿ ವಿದ್ಯಾರ್ಥಿಗಳ ನಡುವೆ ಸಿನಿಮಿಯ ರೀತಿಯ ಬಿಗ್ ಫೈಟ್ ನಡೆದಿದೆ. ಹೌದು ಶಿಕ್ಷಕಿಯೊಬ್ಬರು ಪಾಠ ಮಾಡುತ್ತಿರುವಾಗಲೇ ತರಗತಿಯೊಳಗೆ ಹೇಳದೆ ಕೇಳದೆ ಎಂಟ್ರಿ ಕೊಟ್ಟ ಇಬ್ಬರು ಪುಂಡ ಹುಡುಗರು, ವಿದ್ಯಾರ್ಥಿಯೊಬ್ಬನಿಗೆ ಬೆಲ್ಟ್‌ನಿಂದ ಹಿಗ್ಗಾಮುಗ್ಗಾ ಥಳಿಸಿದ್ದಾರೆ.
gharkekalesh ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಪುಂಡ ಹುಡಗರಿಬ್ಬರು ತರಗತಿಯೊಳಗೆ ನುಗ್ಗಿ ವಿದ್ಯಾರ್ಥಿಯೊಬ್ಬನಿಗೆ ಬೆಲ್ಟ್‌ನಿಂದ ಹೊಡೆಯುವ ದೃಶ್ಯವನ್ನು ಕಾಣಬಹುದು. ಶಿಕ್ಷಕಿ ಪಾಠ ಮಾಡುತ್ತಿರುವಾಗಲೇ ಹೇಳದೆ ಕೇಳದ ತರಗತಿಯೊಳಗೆ ಎಂಟ್ರಿ ಕೊಟ್ಟ ಆ ಇಬ್ಬರು, ವಿದ್ಯಾರ್ಥಿಯೊಬ್ಬನಿಗೆ ಮನ ಬಂದಂತೆ ಥಳಿಸಿದ್ದಾರೆ.
ಇದನ್ನೂ ಓದಿ: 1.5 ಲಕ್ಷ ರೂ. ತಲುಪಿದ ಬೆಂಗಳೂರಿನ ನರ್ಸರಿ, ಎಲ್‌ಕೆಜಿ ಸ್ಕೂಲ್ ಫೀಸ್; ವೈರಲ್ ಆಯ್ತು ದುಬಾರಿ ಶುಲ್ಕ ವಿವರ
ಅಕ್ಟೋಬರ್ 24 ರಂದು ಹಂಚಿಕೊಳ್ಳಲಾದ ಈ ವಿಡಿಯೋ 1 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಶಾಲೆಗಳಲ್ಲೂ ರಕ್ಷಣೆ ಇಲ್ವೇʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಇಂದಿನ ಪೀಳಿಗೆಯ ಮಕ್ಕಳು ಇಂತಹ ಬಹಳಷ್ಟು ಕೆಲಸಗಳನ್ನು ಮಾಡುತ್ತಿದೆʼ ಎಂದು ಹೇಳಿದ್ದಾರೆ. ಇನ್ನೂ ಅನೇಕರು ವಿದ್ಯಾರ್ಥಿಗಳಲ್ಲಿ ಇದೆಂಥಾ ಗೂಂಡಾಗಿರಿ ಮನೋಭಾವನೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:00 pm, Fri, 25 October 24