Viral: ಫೇಸ್‌ಬುಕ್‌ನಲ್ಲಿ ಅತ್ಯಾಚಾರ ಬೆದರಿಕೆ ಹಾಕಿದಾತನಿಗೆ ʼಕೈʼ ನಾಯಕಿ ಕೈಯಿಂದ ಸರಿಯಾಗಿ ಬಿತ್ತು ಗೂಸಾ

ಇಲ್ಲೊಬ್ಬ ವ್ಯಕ್ತಿ ಕಾಂಗ್ರೆಸ್ ನಾಯಕಿ ರೋಶ್ನಿ ಕುಶಾಲ್‌ ಜೈಸ್ವಾಲ್‌ ಅವರಿಗೆ ಮಾತ್ರವಲ್ಲದೆ ಕೆಲ ಯುವತಿಯರಿಗೆ ಸೋಷಿಯಲ್‌ ಮೀಡಿಯಾದಲ್ಲಿ ಅತ್ಯಾಚಾರ ಎಸಗುವುದಾಗಿ ಬೆದರಿಕೆ ಹಾಕಿದ್ದು, ಇದರಿಂದ ಸಿಟ್ಟಿಗೆದ್ದ ಕೈ ನಾಯಕಿ ತನ್ನ ಬೆಂಬಲಿಗರೊಂಗಿದೆ ಆ ಪುಂಡನ ಮನೆಗೆ ನುಗ್ಗಿ, ಹೆಂಡತಿ ಮಕ್ಕಳ ಮುಂದೆಯೇ ಆತನಿಗೆ ಹಿಗ್ಗಾಮುಗ್ಗಾ ಥಳಿಸಿ ಗ್ರಹಚಾರ ಬಿಡಿಸಿದ್ದಾರೆ. ಈ ವಿಡಿಯೋ ಇದೀಗ ಭಾರೀ ವೈರಲ್‌ ಆಗುತ್ತಿದೆ.

Viral: ಫೇಸ್‌ಬುಕ್‌ನಲ್ಲಿ ಅತ್ಯಾಚಾರ ಬೆದರಿಕೆ ಹಾಕಿದಾತನಿಗೆ ʼಕೈʼ ನಾಯಕಿ ಕೈಯಿಂದ ಸರಿಯಾಗಿ ಬಿತ್ತು ಗೂಸಾ
ವೈರಲ್​​​ ವಿಡಿಯೋ
Edited By:

Updated on: Sep 16, 2024 | 5:00 PM

ಸೋಷಿಯಲ್‌ ಮೀಡಿಯಾದಲ್ಲೂ ಕೂಡಾ ಕೆಲ ಪುಂಡರು ಯುವತಿಯರಿಗೆ ಮೆಸೇಜ್‌ ಮಾಡಿ ಅತ್ಯಾಚಾರ ಎಸಗುವುದಾಗಿ, ಆಸಿಡ್‌ ದಾಳಿ ಮಾಡುವುದಾಗಿ ಹೇಳಿ ಬ್ಲಾಕ್‌ಮೇಲ್‌ ಮಾಡುತ್ತಿರುತ್ತಾರೆ. ಸೆಲೆಬ್ರಿಟಿಗಳು ಮಾತ್ರವಲ್ಲದೆ, ಸೋಷಿಯಲ್‌ ಮೀಡಿಯಾ ಬಳಸುವ ಯುವತಿಯರಿಗೂ ಕೆಲ ಪುಂಡರು ಅತ್ಯಾಚಾರದ ಬೆದರಿಕೆ ಹಾಕುತ್ತಿರುತ್ತಾರೆ. ಇಂತಹ ಕಹಿ ಘಟನೆಗಳ ಸುದ್ದಿಗಳು ಆಗೊಮ್ಮೆ ಈಗೊಮ್ಮೆ ಕೇಳಿ ಬರುತ್ತಲೇ ಇರುತ್ತವೆ. ಇದೀಗ ಅಂತಹದ್ದೇ ಘಟನೆಯೊಂದು ನಡೆದಿದ್ದು, ವ್ಯಕ್ತಿಯೊಬ್ಬ ಕಾಂಗ್ರೆಸ್ ನಾಯಕಿ ರೋಶ್ನಿ ಕುಶಾಲ್‌ ಜೈಸ್ವಾಲ್‌ ಎಂಬವರಿಗೆ ಫೇಸ್‌ಬುಕ್‌ ಕಮೆಂಟ್‌ ಅಲ್ಲಿ ಅತ್ಯಾಚಾರ ಎಸಗುವುದಾಗಿ ಬೆದರಿಕೆ ಹಾಕಿದ್ದು, ಇದರಿಂದ ಸಿಟ್ಟಿಗೆದ್ದ ಕೈ ನಾಯಕಿ ತನ್ನ ಬೆಂಬಲಿಗರೊಂಗಿದೆ ಆ ಪುಂಡನ ಮನೆಗೆ ನುಗ್ಗಿ, ಹೆಂಡತಿ ಮಕ್ಕಳ ಮುಂದೆಯೇ ಆತನಿಗೆ ಹಿಗ್ಗಾಮುಗ್ಗಾ ಥಳಿಸಿ ಗ್ರಹಚಾರ ಬಿಡಿಸಿದ್ದಾರೆ. ಈ ವಿಡಿಯೋ ಇದೀಗ ಭಾರೀ ವೈರಲ್‌ ಆಗುತ್ತಿದೆ.

ವಾರಣಾಸಿಯ ರಾಜೇಶ್‌ ಸಿಂಗ್‌ ಎಂಬಾತ ಕೈ ನಾಯಕಿ ರೋಶ್ನಿ ಕುಶಾಲ್‌ ಜೈಸ್ವಾಲ್‌ ಅವರಿಗೆ ಅತ್ಯಾಚಾರ ಎಸಗುವುದಾಗಿ ಫೇಸ್‌ಬುಕ್‌ ಅಲ್ಲಿ ಬೆದರಿಕೆ ಹಾಕಿದ್ದಾನೆ. ಇದರಿಂದ ಸಿಟ್ಟಿಗೆದ್ದ ಕೈ ನಾಯಕಿ ತನ್ನ ಬೆಂಬಲಿಗರೊಂದಿಗೆ ಆ ಪುಂಡನ ಮನೆಗೆ ನುಗ್ಗಿ ಹೆಂಡತಿ ಮಕ್ಕಳ ಮುಂದೆಯೇ ಆತನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ನಂತರ ಪೊಲೀಸರಿಗೆ ಕರೆ ಮಾಡಿ ಸ್ಥಳಕ್ಕೆ ಬರುವಂತೆ ಹೇಳಿ ಲಿಖಿತ ದೂರನ್ನು ನೀಡಿದ್ದಾರೆ. ಜೊತೆಗೆ ಈತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪ್ರಧಾನಿ ಮೋದಿ ಮತ್ತು ಯೋಗಿ ಆದಿತ್ಯ ನಾಥ್‌ ಅವರನ್ನು ಒತ್ತಾಯಿಸಿದ್ದಾರೆ. ಅಲ್ಲದೆ ನನ್ನ ಪತಿಯ ಮೇಲೆ ಈಕೆ ಕಾರಣವಿಲ್ಲದೆ ಕೈ ಮಾಡಿದ್ದಾಳೆ ಎಂದು ರಾಜೇಶ್‌ ಪತ್ನಿಯೂ ಕೂಡಾ ರೋಶ್ನಿ ವಿರುದ್ಧ ದೂರನ್ನು ನೀಡಿದ್ದಾರೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಈ ಕುರಿತ ವಿಡಿಯೋವನ್ನು ಸಮರ್‌ ರಾಜ್‌ (SamarRaj_) ಎಂಬವರು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೈರಲ್‌ ವಿಡಿಯೋದಲ್ಲಿ ಕೈ ನಾಯಕಿ ರೋಶ್ನಿ ತನ್ನ ಬೆಂಬಲಿಗರೊಂದಿಗೆ ಅತ್ಯಾಚಾರ ಬೆದರಿಕೆ ಹಾಕಿದಾತನ ಮನೆಗೆ ನುಗ್ಗಿ, ಆತನನ್ನು ಬೀದಿಗೆ ಎಳೆದು ತಂದು ಸಾರ್ವಜನಿಕರ ಎದುರಲ್ಲಿಯೇ ಹಿಗ್ಗಾಮುಗ್ಗಾ ಥಳಿಸುವ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಮಧ್ಯ ರಾತ್ರಿಲಿ ಹೈವೇ ರಸ್ತೇಲಿ ರೊಮ್ಯಾನ್ಸ್‌ ಮಾಡ್ತಾ ಬೈಕಿನಲ್ಲಿ ಜಾಲಿ ರೈಡ್

ಸೆಪ್ಟೆಂಬರ್‌ 15 ರಂದು ಹಂಚಿಕೊಳ್ಳಲಾದ ಈ ಪೋಸ್ಟ್‌ 3 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಆತ ಅತ್ಯಾಚಾರ ಬೆದರಿಕೆ ಹಾಕಿದ್ದರೆ ಆತನ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ದೂರನ್ನು ನೀಡುವ ಬದಲು ನೀವ್ಯಾಕೆ ಕಾನೂನನ್ನು ಕೈಗೆ ತೆಗೆದುಕೊಂಡ್ರಿʼ ಎಂದು ಪ್ರಶ್ನಿಸಿದ್ದಾರೆ. ಇನ್ನೊಬ್ಬ ಬಳಕೆದಾರರು ʼಆತ ಮಾಡಿದ್ದು ತಪ್ಪೇ, ಆದ್ರೆ ಆತನ ಮೇಲೆ ಈಕೆ ಕೈ ಮಾಡಿದ್ದು ಸರಿಯೇʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಉತ್ತಮ ಕೆಲಸʼ ಎಂದು ಹೇಳಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Malashree anchan

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
Follow Us