Viral News: ತನ್ನ ಪ್ರೀತಿ ನಿಜವೆಂದು ಸಾಬೀತುಪಡಿಸಲು ಪ್ರಾಣವನ್ನೇ ತ್ಯಾಗ ಮಾಡಿದ ವ್ಯಕ್ತಿ

|

Updated on: Jun 13, 2024 | 5:41 PM

ತನ್ನ ಪ್ರೀತಿಯನ್ನು ನಿಜವೆಂದು ಸಾಬೀತುಪಡಿಸಲು ವ್ಯಕ್ತಿಯೊಬ್ಬ ತನ್ನ ಪ್ರಾಣವನ್ನೇ ತ್ಯಾಗ ಮಾಡಿದ ಪ್ರಕರಣ ಉತ್ತರ ಪ್ರದೇಶದ ಬಂದಾ ಎಂಬಲ್ಲಿ ನಡೆದಿದೆ. ಈತ ತನ್ನ ಸ್ವಂತ ಪತ್ನಿಯ ಸಂಬಂಧಿ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ. ಆಕೆಯೊಂದಿಗಿನ ಪ್ರೀತಿಯನ್ನು ಸಾಬೀತುಪಡಿಸಲು ಈತ ಡೆತ್​ ನೋಟ್​ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದೀಗ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

Viral News: ತನ್ನ ಪ್ರೀತಿ ನಿಜವೆಂದು ಸಾಬೀತುಪಡಿಸಲು ಪ್ರಾಣವನ್ನೇ ತ್ಯಾಗ ಮಾಡಿದ ವ್ಯಕ್ತಿ
Follow us on

ಉತ್ತರ ಪ್ರದೇಶ: ಉತ್ತರ ಪ್ರದೇಶದ ಬಂದಾದಿಂದ ಅಚ್ಚರಿಯ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲ್ಲಿ ಒಬ್ಬ ವ್ಯಕ್ತಿ ಪ್ರೀತಿಯನ್ನು ಸಾಬೀತು ಪಡಿಸಲು ತನ್ನ ಜೀವವನ್ನು ತ್ಯಾಗ ಮಾಡಿದ್ದಾನೆ. ವ್ಯಕ್ತಿ ತನ್ನ ಹೆಂಡತಿಯ ಅತ್ತಿಗೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ. ಮಾಹಿತಿ ಪ್ರಕಾರ ಸ್ವಂತ ಪತ್ನಿಯ ಹತ್ತಿರದ ಸಂಬಂಧಿ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ. ಇಬ್ಬರ ನಡುವೆ ಪ್ರೀತಿ ಚಿಗುರೊಡೆದಾಗ ಅವರ ಕುಟುಂಬದವರಿಗೂ ವಿಷಯ ತಿಳಿದಿತ್ತು. ಇದಾದ ನಂತರವೂ ಇಬ್ಬರೂ ಒಬ್ಬರನ್ನೊಬ್ಬರು ಭೇಟಿಯಾಗುತ್ತಿದ್ದರು. ಆದರೆ ಕೆಲ ದಿನಗಳಿಂದ ಆಕೆ ಆತನಿಂದ ದೂರವಾಗಿದ್ದಳು.

ಇತ್ತೀಚಿಗಷ್ಟೇ ತನ್ನ ಪ್ರೀತಿಯನ್ನು ಮತ್ತೆ ಪಡೆಯಲು ಆತ ಮಹಿಳೆಗೆ ಕರೆ ಮಾಡಿದ್ದ, ಈ ವೇಳೆ ನೀನು ನನ್ನನ್ನು ನಿಜವಾಗಿಯೂ ಪ್ರೀತಿಸುತ್ತಿದ್ದರೆ ನಿನ್ನ ಪ್ರಾಣವನ್ನೇ ತ್ಯಾಗ ಮಾಡಿ ತೋರಿಸು ಎಂದು ಆಕೆ ಹೇಳಿದ್ದಾಳೆ. ಆಕೆಯ ಮಾತಿನಂತೆ ವ್ಯಕ್ತಿ ಪತ್ರ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಇದನ್ನೂ ಓದಿ: ಅಂಬಾನಿ ಕುಟುಂಬದ ಸದಸ್ಯರು ಕುಡಿಯುವ 1 ಲೀ. ಹಾಲಿನ ಬೆಲೆ 152 ರೂ. ;ಯಾಕಿಷ್ಟು ದುಬಾರಿ ಗೊತ್ತಾ?

ನೀನು ನನ್ನನ್ನು ಪ್ರೀತಿಸಿದರೆ ಪ್ರಾಣ ತ್ಯಾಗ ಮಾಡಿ ತೋರಿಸು ಎಂದು ಮಹಿಳೆ ಆತನಿಗೆ ವಾಟ್ಸಾಪ್‌ನಲ್ಲಿ ಸಂದೇಶ ಕಳುಹಿಸಿದ್ದಳು. ಅದನ್ನು ಸವಾಲಾಗಿ ಸ್ವೀಕರಿಸಿದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದೀಗ ಈ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 5:40 pm, Thu, 13 June 24