ಕೋತಿಗಳು ಮಾಡುವಂತಹ ಚೇಷ್ಟೆಗಳು ತುಂಬಾನೇ ತಮಾಷೆಯಾಗಿ ಕಾಣುತ್ತವೆ. ಅವುಗಳು ಮನುಷ್ಯರ ಕೈಯಲ್ಲಿದ್ದ ತಿಂಡಿ ತಿನಿಸುಗಳನ್ನು ಕಸಿದುಕೊಳ್ಳುವ ಮೂಲಕ, ಮೊಬೈಲ್ ಕಸಿದುಕೊಳ್ಳುವ ಮೂಲಕ ಹಲವಾರು ಚೇಷ್ಟೆಗಳನ್ನು ಮಾಡುತ್ತಿರುತ್ತವೆ. ಇಂತಹ ಸಾಕಷ್ಟು ವಿಡಿಯೋಗಳು ಕೂಡಾ ಸೋಷಿಯಲ್ ಮೀಡಿಯಾದಲ್ಲಿ ಆಗಾಗ್ಗೆ ಕಾಣಸಿಗುತ್ತಿರುತ್ತವೆ. ಇನ್ನೂ ಕೆಲವೊಮ್ಮೆ ಕೋತಿಗಳು ಕೋಪದಲ್ಲಿ ಮನುಷ್ಯರ ಮೇಲೆ ಅಟ್ಯಾಕ್ ಮಾಡುವುದು ಕೂಡಾ ಉಂಟು. ಅದೇ ರೀತಿ ಇಲ್ಲೊಂದು ಕೋತಿ ಕೂಡಾ ಯುವತಿಯೊಬ್ಬಳ ಮೇಲೆ ಅಟ್ಯಾಕ್ ಮಾಡಿ ಆಕೆಯ ಶೂ ಕಸಿದುಕೊಂಡಿದೆ. ಹೌದು ಮಾಲ್‌ಗೆ ನುಗ್ಗಿದಂತಹ ಕೋತಿ ಯುವತಿಯ ಮೇಲೆ ಅಟ್ಯಾಕ್ ಮಾಡಿದ್ದು, ಕಪಿರಾಯನ ಚೇಷ್ಟೆಗೆ ಆಕೆ ಹೈರಾಣಾಗಿದ್ದಾಳೆ. ಈ ಕುರಿತ ವಿಡಿಯೋವೊಂದು ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಉತ್ತರ ಪ್ರದೇಶದ ಝಾನ್ಸಿಯ ಮಾಲ್ ಒಂದರಲ್ಲಿ ಈ ಘಟನೆ ನಡೆದಿದ್ದು, ಮಾಲ್‌ಗೆ ನುಗ್ಗಿದಂತಹ ಕೋತಿಯೊಂದು ಅಲ್ಲಿದ್ದ ಯುವತಿಯ ಮೇಲೆ ಅಟ್ಯಾಕ್ ಮಾಡಿ ಆಕೆಯ ಶೂ ಕಸಿದುಕೊಂಡಿದೆ. ಹೌದು ಅಲ್ಲಿ ಎಷ್ಟೇ ಜನ ಇದ್ರೂ ಅವರ್ಯಾರಿಗೂ ತೊಂದರೆ ಕೊಡದೆ ಕೋತಿ ಪದೇ ಪದೇ ಆ ಯುವತಿಯ ಮೇಲೆಯೇ ದಾಳಿ ಮಾಡಿ ಆಕೆಯ ಕೂದಲನ್ನು ಎಳೆದು ಆಕೆಗೆ ತೊಂದರೆ ಕೊಟ್ಟಿದೆ.
झांसी के मॉल में बंदर ने मचाया उत्पात…
एक युवती को जमकर किया परेशान
चीखती नजर आई युवती,वीडियो हुआ वायरल#Jhansi #UPNews #ViralVideo pic.twitter.com/efQRvkLDTu
— News1India (@News1IndiaTweet) January 11, 2025
ಇದನ್ನೂ ಓದಿ: ಪುಟಾಣಿ ಮಕ್ಕಳಂತೆ ಮುದ್ದು ಕರುವಿಗೂ ನಡೆಯಿತು ಅದ್ದೂರಿ ತೊಟ್ಟಿಲು ಶಾಸ್ತ್ರ; ವಿಡಿಯೋ ವೈರಲ್
News1Indiatweet ಹೆಸರಿನ ಎಕ್ಸ್ ಖಾತೆಯಲ್ಲಿ ಈ ಕುರಿತ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಕೋತಿಯೊಂದು ಯುವತಿಯ ಮೇಲೆ ಅಟ್ಯಾಕ್ ಮಾಡಿ ಆಕೆಯ ಶೂ ಕಸಿದುಕೊಳ್ಳುತ್ತಿರುವ ದೃಶ್ಯವನ್ನು ಕಾಣಬಹುದು. ಅಲ್ಲಿದ್ದ ಜನರೆಲ್ಲಾ ಆಕೆಯ ಸಹಾಯಕ್ಕೆ ಬಂದರೂ ಆ ಯುವತಿಯ ಹಿಂದೆಯೇ ಪದೇ ಪದೇ ಓಡಿ ಹೋಗಿ ಕೋತಿ ಆಕೆಯ ಮೇಲೆ ದಾಳಿ ನಡೆಸಿದೆ. ಈ ಮಂಗನ ಕಾಟಕ್ಕೆ ಯುವತಿ ಫುಲ್ ಸುಸ್ತಾಗಿದ್ದಾಳೆ. ಕಪಿರಾಯನ ಚೇಷ್ಟೆಯ ದೃಶ್ಯವನ್ನು ಕಂಡು ನೆಟ್ಟಿಗರು ಶಾಕ್ ಆಗಿದ್ದಾರೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ