ಪ್ರಯಾಗರಾಜ್: ಕೇವಲ 16 ಗಂಟೆಯೊಳಗೆ 107 ಕಣ್ಣುಗಳ ಆಪರೇಷನ್ ಮಾಡುವ ಮೂಲಕ ಪ್ರಾದೇಶಿಕ ನೇತ್ರವಿಜ್ಞಾನ ಸಂಸ್ಥೆಯ ನಿರ್ದೇಶಕ ಮತ್ತು ಪ್ರಯಾಗ್‌ರಾಜ್‌ನಲ್ಲಿರುವ ಎಂಎಲ್‌ಎನ್ ವೈದ್ಯಕೀಯ ಕಾಲೇಜಿನ (ಎಂಎಲ್‌ಎನ್‌ಎಂಸಿ) ಪ್ರಾಂಶುಪಾಲ ಡಾ. ಎಸ್.ಪಿ. ಸಿಂಗ್ ಹೊಸ ದಾಖಲೆ ಬರೆದಿದ್ದಾರೆ. ಅವರು ಹದಿನಾರೂವರೆ ಗಂಟೆಯ ಅವಧಿಯಲ್ಲಿ ಇಂಟ್ರಾಕ್ಯುಲರ್ ಲೆನ್ಸ್ (ಐಒಎಲ್) ಇಂಪ್ಲಾಂಟ್‌ನೊಂದಿಗೆ 107 ಫಾಕೊಎಮಲ್ಸಿಫಿಕೇಶನ್ ಶಸ್ತ್ರಚಿಕಿತ್ಸೆಗಳನ್ನು ನಡೆಸುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ.
2022ರ ಫೆಬ್ರವರಿ 25ರಂದು ಬೆಳಿಗ್ಗೆ 6ರಿಂದ ರಾತ್ರಿ 10.30ರವರೆಗೆ ನಿರಂತರವಾಗಿ 16 ಗಂಟೆ 30 ನಿಮಿಷಗಳ ಅವಧಿಯಲ್ಲಿ ಕಣ್ಣಿನ ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಯಿತು. 1 ವಾರ ಅಬ್ಸರ್ವೇಷನ್ನಲ್ಲಿದ್ದ ಎಲ್ಲಾ ರೋಗಿಗಳು ಈಗ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ ಎಂದು ಡಾ. ಸಿಂಗ್ ಮಾಹಿತಿ ನೀಡಿದ್ದಾರೆ.
“ಒಂದೇ ಬಾರಿಗೆ ಹಲವಾರು ಶಸ್ತ್ರಚಿಕಿತ್ಸೆಗಳನ್ನು ಮಾಡಿದ್ದರಿಂದ ನನಗೆ ಸಂತೋಷವಾಗಿದೆ. ಇದು ಕಿರಿಯ ಸರ್ಜನ್ಗಳಿಗೆ ಸಾರ್ವಜನಿಕ ಕಲ್ಯಾಣಕ್ಕಾಗಿ ಕೆಲಸ ಮಾಡಲು ಪ್ರೇರಣೆ ನೀಡುತ್ತದೆ ಎಂದು ಭಾವಿಸುತ್ತೇನೆ” ಎಂದು ಡಾ. ಸಿಂಗ್ ಸಂತಸ ಹಂಚಿಕೊಂಡಿದ್ದಾರೆ. ಐ ಸರ್ಜನ್ ಡಾ. ಸಿಂಗ್ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ಗೆ ಪತ್ರ ಬರೆದು, ಅಗತ್ಯವಿರುವ ಪುರಾವೆಗಳೊಂದಿಗೆ ತಮ್ಮ ಸಾಧನೆಯ ಬಗ್ಗೆ ತಿಳಿಸಿದ್ದಾರೆ
ಇದಕ್ಕೂ ಮೊದಲು, ನವ ದೆಹಲಿಯ ಸೇನಾ ಆಸ್ಪತ್ರೆಯ ಸಂಶೋಧನೆ ಮತ್ತು ರೆಫರಲ್‌ನ ಆಗಿನ ಬ್ರಿಗೇಡಿಯರ್ (ಡಾ) ಜೆಕೆಎಸ್ ಪರಿಹಾರ್ ಅವರು ಅಕ್ಟೋಬರ್ 2011ರಲ್ಲಿ ಪೂರ್ವ ಲಡಾಖ್‌ನಲ್ಲಿ 34 ಫಾಕೋಎಮಲ್ಸಿಫಿಕೇಶನ್ ಶಸ್ತ್ರಚಿಕಿತ್ಸೆಗಳನ್ನು ನಡೆಸಿ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಗಳಿಸಿದ್ದರು.
ಇದನ್ನೂ ಓದಿ: Mahashivratri: 10 ನಿಮಿಷದಲ್ಲಿ 11.71 ಲಕ್ಷ ದೀಪಗಳನ್ನು ಬೆಳಗಿಸಿ ಗಿನ್ನಿಸ್ ದಾಖಲೆ ಬರೆದ ಉಜ್ಜಯಿನಿ
Viral Video: ಹೆಲಿಕಾಪ್ಟರ್ ಕೆಳಗೆ ನೇತಾಡುತ್ತಾ ಪುಲ್ ಅಪ್ಸ್ ಮಾಡಿ ದಾಖಲೆ ಬರೆದ ಯುವಕ