Kannada News Spiritual On mahashivratri ujjain shiva jyothi sets guinness record by lighting lamps
Mahashivratri: 10 ನಿಮಿಷದಲ್ಲಿ 11.71 ಲಕ್ಷ ದೀಪಗಳನ್ನು ಬೆಳಗಿಸಿ ಗಿನ್ನಿಸ್ ದಾಖಲೆ ಬರೆದ ಉಜ್ಜಯಿನಿ
ಮಾರ್ಚ್ 01ರ ಮಹಾಶಿವರಾತ್ರಿ(Mahashivratri) ಹಬ್ಬದ ಪ್ರಯುಕ್ತ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ 11.71 ಲಕ್ಷ ಮಣ್ಣಿನ ದೀಪಗಳನ್ನು ಬೆಳಗಿಸುವ ಮೂಲಕ ಹೊಸ ದಾಖಲೆ ಬರೆಯಲಾಗಿದೆ. ಶಿವಜ್ಯೋತಿ ಅರ್ಪಣಂ ಮಹೋತ್ಸವದಲ್ಲಿ ದೀಪ ಬೆಳಗಿಸಿ ಗಿನ್ನಿಸ್ ವಿಶ್ವ ದಾಖಲೆ ಬರೆಯಲಾಗಿದೆ. ಗಿನ್ನಿಸ್ ವರ್ಡ್ ರೆಕಾರ್ಡ್ಸ್ ಐದು ಸದಸ್ಯರ ತಂಡ ಉಜ್ಜಯಿನಿಗೆ ಭೇಟಿ ನೀಡಿ ಮಂಗಳವಾರ ಸಂಜೆ 6:42 ಕ್ಕೆ ನಡೆದ ಅಮೋಘ ದೀಪೋತ್ಸವವನ್ನು ಕಣ್ತುಂಬಿಕೊಂಡು ದಾಖಲೆಯ ಪಟ್ಟಿಗೆ ಶಿವಜ್ಯೋತಿ ಅರ್ಪಣಂ ಮಹೋತ್ಸವವನ್ನು ಸೇರಿಸಿದ್ದಾರೆ.