ನೀನೆಂದರೆ ನನಗೆ ಪಂಚಪ್ರಾಣ ಅಂತಾರಲ್ಲ! ಹಾಗೆಂದರೇನು ? ವಾಯುಪುತ್ರನನ್ನು ಮುಖ್ಯಪ್ರಾಣ ದೇವ ಅನ್ನುವುದೇಕೆ?

ನೀನೆಂದರೆ ನನಗೆ ಪಂಚಪ್ರಾಣ ಅಂತಾರಲ್ಲ! ಹಾಗೆಂದರೇನು ? ವಾಯುಪುತ್ರನನ್ನು ಮುಖ್ಯಪ್ರಾಣ ದೇವ ಅನ್ನುವುದೇಕೆ?
ನೀನೆಂದರೆ ನನಗೆ ಪಂಚಪ್ರಾಣ ಅಂತಾರಲ್ಲ! ಹಾಗೆಂದರೇನು ? ವಾಯುಪುತ್ರ ಆಂಜನೇಯನನ್ನು ಮುಖ್ಯಪ್ರಾಣ ದೇವ ಅಂತಾ ಸಂಬೋಧಿಸುವುದು ಏಕೆ?

Mukhya Prana Hanumanth: ವಾಯು ಎಂದರೆ ಪ್ರಾಣಿ ಮಾತ್ರದ ಜೀವನಾಧಾರ ಶಕ್ತಿ. ಅನ್ನವಿಲ್ಲದೆ ಇರಬಹುದು, ನೀರಿಲ್ಲದೆ ದಿನ ದೂಡಬಹುದು; ಅದೇ ಗಾಳಿಯೇ ಇಲ್ಲದೆ ಕೆಲ ಗಳಿಗೆಯೂ ಬದುಕಿರುವುದು ಸಾಧ್ಯವಿಲ್ಲ. ವಾಯುವೆಂದರೆ ಪ್ರಾಣಶಕ್ತಿ. ಆದ್ದರಿಂದ ವಾಯುವಿನ ಮಗನಾದ ಹನುಮಂತನಿಗೆ ‘ಪ್ರಾಣದೇವರು’ ಎನ್ನುತ್ತಾರೆ.

TV9kannada Web Team

| Edited By: sadhu srinath

Mar 03, 2022 | 6:06 AM

ನೀವೆಂದರೆ ನನಗೆ ಪಂಚ ಪ್ರಾಣ ಅಂತಾರಲ್ಲ! ಹಾಗೆಂದರೇನು ? ಯಾರನ್ನು ಬಿಟ್ಟು ಜೀವಿಸಲು ಸಾಧ್ಯವಿಲ್ಲ ಎಂದು ಅಂದುಕೊಳ್ಳೊತ್ತೇವೋ ಅವರೇ ಪಂಚಪ್ರಾಣ! ಅಂದರೆ ಜೀವನದಲ್ಲಿ ಅವರು ಇಲ್ಲವೆಂದರೆ ಜೀವನ ಸಾಗದು ಎಂಬರ್ಥ. ಹಾಗೆಯೇ, ನಮ್ಮ ದೇಹದ ಅಸ್ತಿತ್ವವೂ ಪ್ರಾಣವಾಯು ಇರುವುದರಿಂದಲೇ ಸಾಧ್ಯವಾಗಿದೆ. ಆ ಪ್ರಾಣವಾಯುವೇ ಮುಖ್ಯಪ್ರಾಣ ದೇವ. ವಾಯುವಿನ ಅಂಶದಿಂದ ವಾಯುನಂದನ ಮತ್ತು ಕಪಿವೀರ ಕೇಸರಿಯ ಮಗನಾದ ಕಾರಣ ಕೇಸರಿನಂದನ, ವಾಯುಪುತ್ರ ಆಂಜನೇಯ ಎನ್ನಿಸಿಕೊಂಡ – ಅಂದರೆ ವಾನರನಾಗಿ ಅಂಜನೇಯ ಗರ್ಭದಲ್ಲಿ ಹುಟ್ಟಿ ಆಂಜನೇಯನೆನಿಸಿದ.

ಪ್ರತಿಯೊಂದು ಜೀವಿಯ ಅಸ್ತಿತ್ವವೂ ಪ್ರಾಣವಾಯು ಇರುವುದರಿಂದಲೇ ಸಾಧ್ಯ ಆದ್ದರಿಂದ ಆಂಜನೇಯ ಮುಖ್ಯಪ್ರಾಣನೆನಿಸಿದ. ಚಲನವು ಮಾರುತನ ಧರ್ಮ. ಪ್ರಾಣ, ಅಪಾನ, ಸಮಾನ, ಉದಾನ ಮತ್ತು ವ್ಯಾನಗಳು ಕೂಡ ಮಾರುತನ ರೂಪಗಳು. ಸ್ಪರ್ಶ ಇಂದ್ರಿಯ (ತ್ವಕ್) ಮತ್ತು ಸ್ಪರ್ಶ ಎಂಬ ಗುಣವೂ ಸಹ ಮಾರುತನಿಂದಲೇ ನಿಯಮಿಸಲ್ಪಡುವುದು.

ವಾಯು ಎಂದರೆ ಪ್ರಾಣಿ ಮಾತ್ರದ ಜೀವನಾಧಾರ ಶಕ್ತಿ. ಅನ್ನವಿಲ್ಲದೆ ಇರಬಹುದು, ನೀರಿಲ್ಲದೆ ದಿನ ದೂಡಬಹುದು; ಅದೇ ಗಾಳಿಯೇ ಇಲ್ಲದೆ ಕೆಲ ಗಳಿಗೆಯೂ ಬದುಕಿರುವುದು ಸಾಧ್ಯವಿಲ್ಲ. ವಾಯುವೆಂದರೆ ಪ್ರಾಣಶಕ್ತಿ. ಆದ್ದರಿಂದ ವಾಯುವಿನ ಮಗನಾದ ಹನುಮಂತನಿಗೆ ‘ಪ್ರಾಣದೇವರು’ ಎನ್ನುತ್ತಾರೆ. ಹನೂಮಂತ, ವಾಯಪುತ್ರ, ಪವನಸಂಭವ, ಮಾರುತಿ ಹೀಗೆ ಅನೇಕ ಹೆಸರುಗಳಿಂದ ಪ್ರಸಿದ್ಧನಾದವನು ಆಂಜನೇಯ.

ಮುಖ್ಯಪ್ರಾಣ ದೇವರು ಭಗವಂತನೊಂದಿಗೆ ನಮ್ಮ ಹೃದಯದಲ್ಲೇ ನೆಲೆಸಿದ್ದಾರೆ. ಎಲ್ಲಕ್ಕಿಂತ ವಿಶೇಷನಾಗಿ ನಮ್ಮ ಹೃತ್ಕಮಲ ಮಧ್ಯದಲ್ಲಿ ಸೂಕ್ಷಕ್ಕಿಂತ ಸೂಕ್ಷ್ಮನಾಗಿ ನೆಲೆಸಿದ್ದಾನೆ. ಆತನ ಇರುವಿಕೆಯ ಅರಿವನ್ನು ನಾವು ಭಕ್ತಿಪೂರ್ವಕ ಜ್ಞಾನದಿಂದ ಮಾತ್ರ ಅರಿಯಲು ಸಾಧ್ಯ. ಅರಿತವರಿಗೆ ಸಮೀಪವೂ, ಅರಿಯದವರಿಗೆ ಅತೀ ದೂರವು ಆಗಿದ್ದಾರೆ.

ನಮ್ಮ ಆತ್ಮವೇ ರಾಮ. ನಮ್ಮ ಮನಸ್ಸೇ ಸೀತೆ. ನಮ್ಮ ಉಸಿರೇ ಜೀವನದಾಯಿ ಪ್ರಾಣ ಎಂದರೆ ಹನುಮಂತ. ವೈಕುಂಠದಿಂದ ಬಂದು ನೀ ಪಂಪಾಕ್ಷೇತ್ರದಿ ನಿಂದು .. ಯಂತ್ರೋದ್ಧಾರಕನೆಂದೂ ಪುರಂದರ ವಿಠ್ಠಲ ಸಲಹೆಂದು… ಸ್ವಾಮಿ ಮುಖ್ಯಪ್ರಾಣ ನಿನ್ನ ಮರೆವರ ಗಂಟಲಗಾಣ.. ಪಿಡಿದ್ಯೋ ರಾಮರ ಚಾರಣ ನೀ ಹೌದೌದೋ ಜಗತ್ರಾಣ” ಇದು ನಾರದಾಂಶ ಸಂಭೂತರ ಭವ್ಯ ವರ್ಣನೆ.

ಒಂದು ಕೋಟಿ ಬೀಜ ಮಂತ್ರದಿಂದ ಸುತ್ಯಂತ್ರವ ಬರಿಸಿ ಅಂದು ಪ್ರಾಣ ಪ್ರತಿಷ್ಠೆಯ ಮಾಡಿ ನಿಂದಿಸಿದರು ನಿನ್ನ ಮಂದಹಾಸದಿ ವ್ಯಾಸ ಮುನಿಗಳು ಒಂದು ಕರದಲಿ ಜಪಮಾಲೆ ಒಂದು ಕರ ನಾಭಿ ಕೆಳಗೆ ಚಂದದಿಂದ ಪದುಮಾಸನದಿಂದ ಕುಳಿತು ನಿತ್ಯ ನಿತ್ಯಾನಂದ ವಿಜಯ ವಿಠಲನ್ನ ವಂದಿಸಿ ವರಗಳ ಕೊಡುತ, ಬಂದ ನರರ ಪಾಲಿಸುತ್ತ. ಈ ಮೇಲಿನ ಸಾಲುಗಳಲ್ಲಿ ಶ್ರೀ ವಿಜಯ ದಾಸರು ಆ ಪ್ರಾಣದೇವರ ಹಿರಿಮೆಯನ್ನು, ವ್ಯಾಸರಾಜರ ತಪೋಶಕ್ತಿಯನ್ನು ಹಾಡಿ ಕೊಂಡಾಡಿದ್ದಾರೆ.

ಶ್ರೀ ವ್ಯಾಸರಾಜರೇ ರಚಿಸಿರುವ ಶ್ರೀ ಯಂತ್ರೋದ್ಧಾರಕ ಪ್ರಾಣದೇವರ ಅಷ್ಟಕದಲ್ಲಿ ಕಂಡುಬರುವಂತೆ, ತಂತ್ರಸಾರೋಕ್ತ ವಿಧಿಗಳಿಂದ ಶ್ರೀ ವ್ಯಾಸರಾಜರಿಂದ ಪೂಜಿಸಲ್ಪಟ್ಟ ಪ್ರಾಣದೇವರು, ದೇಶದೇಶಗಳಿಂದ ಬರುವ ಭಕ್ತರಿಗೆ ಇಷ್ಟಾರ್ಥಗಳನ್ನು ಅನುಗ್ರಹಿಸುವುದಕ್ಕೆ ಶ್ರೀ ಹರಿಯೇ ಸಾಕ್ಷಿಯಾಗಿದ್ದಾನೆ.

ಹನುಮಂತ ಶಿವನ ಅಂಶಾವತಾರನಾಗಿದ್ದು ಅವನು 11 ನೇ ರುದ್ರನಾಗಿದ್ದಾನೆ. ಆ ದೃಷ್ಟಿಯಿಂದಲೂ ಹನುಮಂತ ಮುಖ್ಯಪ್ರಾಣನೇ ಯಾಕೆಂದರೆ… ಶರೀರದಲ್ಲಿರುವ ಪ್ರಾಣಾಪಾನಾದಿಗಳು ರುದ್ರನ ಸ್ವರೂಪ. ಮಹಾಭಾರತದಲ್ಲಿ ಶಿವನ ನಾಮಗಳನ್ನು ತಿಳಿಸುವಾಗ ಶಿವನೇ ಪ್ರಾಣಿಗಳ ಶರೀರದಲ್ಲಿ ಪ್ರಾಣಾಪಾನಾದಿ ಸಂಜ್ಞೆಗಳಿಂದ ಇರುವ ವಾಯು ಎಂದು ಹೇಳಲ್ಪಟ್ಟಿದೆ.

Follow us on

Most Read Stories

Click on your DTH Provider to Add TV9 Kannada