Hindu Rituals: ದೇಹದ ವಿವಿಧ ಭಾಗಗಳಿಗೆ ತಿಲಕ ಹಚ್ಚುವ ನಿಯಮ ಹಾಗೂ ಮಂತ್ರಗಳ ಬಗ್ಗೆ ಮಾಹಿತಿ ಇಲ್ಲಿದೆ
ಹಿಂದೂ ಧರ್ಮದಲ್ಲಿ ತಿಲಕವು ಅತ್ಯಂತ ಮಹತ್ವದ ಸಂಕೇತವಾಗಿದೆ. ಇದು ಭಕ್ತಿ, ಶಕ್ತಿ ಮತ್ತು ಶುಭದ ಸಂಕೇತವಾಗಿದ್ದು, ದೇವರನ್ನು ಸ್ಮರಿಸುವುದರೊಂದಿಗೆ ಹಚ್ಚಲಾಗುತ್ತದೆ. ಹಣೆಯ ಮೇಲೆ ಮಾತ್ರವಲ್ಲದೆ, ದೇಹದ ವಿವಿಧ ಭಾಗಗಳಿಗೆ ವಿವಿಧ ಮಂತ್ರಗಳೊಂದಿಗೆ ತಿಲಕವನ್ನು ಹಚ್ಚಲಾಗುತ್ತದೆ. ಪ್ರತಿಯೊಂದು ಸ್ಥಾನಕ್ಕೂ ವಿಶೇಷ ಅರ್ಥವಿದೆ ಮತ್ತು ಅದು ಒಳ್ಳೆಯ ಆರೋಗ್ಯ, ಶಾಂತಿ ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ನಂಬಲಾಗಿದೆ.

ಹಿಂದೂ ಧರ್ಮದಲ್ಲಿ ತಿಲಕಕ್ಕೆ ವಿಶೇಷ ಮಹತ್ವವಿದೆ. ತಿಲಕವನ್ನು ಹಾಕಿಕೊಳ್ಳುವುದನ್ನು ನಂಬಿಕೆ ಮತ್ತು ಶುಭದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇದು ಕೇವಲ ಧಾರ್ಮಿಕ ಸಂಪ್ರದಾಯವಲ್ಲ, ಇದು ಶಕ್ತಿ, ಗೌರವ ಮತ್ತು ಆತ್ಮ ವಿಶ್ವಾಸವನ್ನು ಜಾಗೃತಗೊಳಿಸುತ್ತದೆ ಎಂದು ನಂಬಲಾಗಿದೆ. ದೇವರ ನಾಮವನ್ನು ಸ್ಮರಿಸುತ್ತಾ ತಿಲಕವನ್ನು ಹಚ್ಚಿಕೊಂಡಾಗ, ನಮ್ಮ ದೇಹ, ಮನಸ್ಸು ಮತ್ತು ಆತ್ಮವು ಶುದ್ಧವಾಗುತ್ತದೆ. ತಿಲಕವು ಹಣೆಯನ್ನು ಅಲಂಕರಿಸುವುದಲ್ಲದೆ, ಆತ್ಮದ ಶಕ್ತಿಯ ಸಂಕೇತವೂ ಆಗಿದೆ.
ತಿಲಕದ ಮಹತ್ವ:
ತಿಲಕ ಹಚ್ಚುವುದು ಕೇವಲ ಧಾರ್ಮಿಕ ಸಂಕೇತವಲ್ಲ ಆದರೆ ದೇವರ ಉಪಸ್ಥಿತಿಯ ಸಂಕೇತವಾಗಿದೆ. ತಿಲಕವನ್ನು ಹಚ್ಚುವುದರಿಂದ ಮನಸ್ಸು, ಮೆದುಳು ಮತ್ತು ದೇಹವು ಶಾಂತವಾಗುತ್ತದೆ. ಯಾವುದೇ ಕೆಲಸದಲ್ಲಿ ಏಕಾಗ್ರತೆ ಹೆಚ್ಚಾಗುತ್ತದೆ. ಇದರೊಂದಿಗೆ, ದುಷ್ಟ ಶಕ್ತಿಗಳಿಂದ ರಕ್ಷಿಸಲ್ಪಡುತ್ತೇವೆ. ತಿಲಕವು ನಮ್ಮ ಸಂಸ್ಕೃತಿ, ಧರ್ಮ ಮತ್ತು ಆಧ್ಯಾತ್ಮಿಕತೆಯ ಅತಿದೊಡ್ಡ ಮತ್ತು ಪ್ರಮುಖ ಸಂಕೇತವಾಗಿದೆ.
ದೇಹದ ವಿವಿಧ ಭಾಗಗಳಿಗೆ ತಿಲಕ ಹಚ್ಚುವ ನಿಯಮಗಳು:
- ಹಣೆಯ ಮೇಲೆ ತಿಲಕ ಇಡುವಾಗ ‘ ಓಂ ಶ್ರೀ ಕೇಶವಾಯ ನಮಃ ‘ ಎಂಬ ಮಂತ್ರವನ್ನು ಪಠಿಸಬೇಕು . ಹಣೆಯ ಮೇಲೆ ತಿಲಕ ಇಡುವುದರಿಂದ ಮನಸ್ಸಿಗೆ ಶಾಂತಿ ಮತ್ತು ಏಕಾಗ್ರತೆ ಸಿಗುತ್ತದೆ ಎಂದು ನಂಬಲಾಗಿದೆ.
- ಕುತ್ತಿಗೆಗೆ ತಿಲಕ ಇಡುವಾಗ ‘ ಓಂ ಶ್ರೀ ಗೋವಿಂದಾಯ ನಮಃ ‘ ಎಂಬ ಮಂತ್ರವನ್ನು ಪಠಿಸಬೇಕು . ಕುತ್ತಿಗೆಗೆ ತಿಲಕ ಇಡುವುದರಿಂದ ಮಾತಿನಲ್ಲಿ ಶುದ್ಧತೆ ಮತ್ತು ಮಾಧುರ್ಯ ಬರುತ್ತದೆ. ಇದರೊಂದಿಗೆ, ನಮ್ಮ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳು ಬರುತ್ತವೆ ಎಂದು ನಂಬಲಾಗಿದೆ.
- ಎದೆಯ ಮೇಲೆ ತಿಲಕ ಇಡುವಾಗ ‘ ಓಂ ಶ್ರೀ ಮಾಧವಾಯ ನಮಃ ‘ ಎಂಬ ಮಂತ್ರವನ್ನು ಜಪಿಸಬೇಕು . ಎದೆಯ ಮೇಲೆ ತಿಲಕ ಇಡುವುದರಿಂದ ಮನಸ್ಸಿನಲ್ಲಿ ಪ್ರೀತಿ, ಭಕ್ತಿ ಮತ್ತು ಕರುಣೆಯ ಭಾವನೆ ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ.
- ಹೊಟ್ಟೆಯ ಮೇಲೆ ತಿಲಕ ಇಡುವಾಗ ‘ ಓಂ ಶ್ರೀ ನಾರಾಯಣಾಯ ನಮಃ ‘ ಎಂಬ ಮಂತ್ರವನ್ನು ಜಪಿಸಬೇಕು . ಹೀಗೆ ಮಾಡುವುದರಿಂದ ಜೀರ್ಣಕ್ರಿಯೆ ಮತ್ತು ಆರೋಗ್ಯ ಸಂಬಂಧಿತ ಸಮಸ್ಯೆಗಳಿಂದ ಪರಿಹಾರ ಸಿಗುತ್ತದೆ.
- ಬಲ ಸೊಂಟಕ್ಕೆ ತಿಲಕ ಇಡುವಾಗ ‘ ಓಂ ಶ್ರೀ ವಿಷ್ಣುವೇ ನಮಃ ‘ ಎಂಬ ಮಂತ್ರವನ್ನು ಜಪಿಸಬೇಕು . ಹಾಗೆ ಮಾಡುವುದರಿಂದ ಧರ್ಮದ ಮಾರ್ಗವನ್ನು ಅನುಸರಿಸಲು ಸಹಾಯವಾಗುತ್ತದೆ ಎಂದು ಹೇಳಲಾಗಿದೆ.
- ಎಡಗೈಗೆ ತಿಲಕ ಇಡುವಾಗ, ‘ ಓಂ ಶ್ರೀ ಶ್ರೀಧರಾಯ ನಮಃ ‘ ಎಂಬ ಮಂತ್ರವನ್ನು ಜಪಿಸಬೇಕು . ಈ ಮಂತ್ರವನ್ನು ಜಪಿಸುವುದರಿಂದ, ದೇವರು ಯಾವಾಗಲೂ ನಿಮ್ಮ ಹತ್ತಿರದಲ್ಲಿಯೇ ಇರುತ್ತಾನೆ ಎಂದು ಹಲವು ಜನರು ನಂಬುತ್ತಾರೆ.
- ಎಡ ಭುಜದ ಮೇಲೆ ತಿಲಕ ಇಡುವಾಗ, ‘ ಓಂ ಶ್ರೀ ಹೃಷೀಕೇಶಾಯ ನಮಃ ‘ ಎಂಬ ಮಂತ್ರವನ್ನು ಜಪಿಸಬೇಕು . ಹೀಗೆ ಮಾಡುವುದರಿಂದ, ನಿಮ್ಮ ಇಂದ್ರಿಯಗಳು ನಿಯಂತ್ರಣದಲ್ಲಿರುತ್ತವೆ ಎಂದು ಹೇಳಲಾಗುತ್ತದೆ.
- ಕತ್ತಿನ ಹಿಂಭಾಗದಲ್ಲಿ ತಿಲಕ ಇಡುವಾಗ, ‘ ಓಂ ಶ್ರೀ ಪದ್ಮನಾಭಾಯ ನಮಃ ‘ ಎಂಬ ಮಂತ್ರವನ್ನು ಜಪಿಸಬೇಕು . ಹೀಗೆ ಮಾಡುವುದರಿಂದ ನಿಮ್ಮ ದೃಢನಿಶ್ಚಯದ ಶಕ್ತಿ ಬಲಗೊಳ್ಳುತ್ತದೆ.
- ತಲೆಯ ಹಿಂಭಾಗಕ್ಕೆ ತಿಲಕ ಇಡುವಾಗ, ‘ ಓಂ ಶ್ರೀ ವಾಸುದೇವಾಯ ನಮಃ ‘ ಎಂಬ ಮಂತ್ರವನ್ನು ಜಪಿಸಬೇಕು . ಹಾಗೆ ಮಾಡುವುದರಿಂದ ಆತ್ಮಜ್ಞಾನ ಮತ್ತು ದೇವರ ಪ್ರಾಪ್ತಿ ಸಿಗುತ್ತದೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ