Viral: ಚಪಾತಿ ಮಾಡುವುದರಿಂದ ಹಿಡಿದು ಪಾತ್ರೆ ತೊಳೆಯುವವರೆಗೆ ಹೆಣ್ಮಕ್ಕಳಿಗಿಂತ ಸೂಪರ್ ಆಗಿ ಮನೆ ಕೆಲಸ ಮಾಡುವ ಕೋತಿಯಿದು

ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುವ ಕೆಲವೊಂದು ವಿಶೇಷವೆನಿಸುವ ದೃಶ್ಯಗಳು ಬಲು ಬೇಗನೇ ನಮ್ಮ ಮನಸ್ಸನ್ನು ಸೆಳೆಯುತ್ತವೆ. ಇದೀಗ ಇಲ್ಲೊಂದು ಮಂಗನಿಗೆ ಸಂಬಂಧಿಸಿ ವಿಡಿಯೋ ವೈರಲ್‌ ಆಗಿದ್ದು, ಕೋತಿಯೊಂದು ಹೆಣ್ಮಕ್ಳಿಗಿಂತ ನಾನೇನು ಕಮ್ಮಿಯಿಲ್ಲ ಎನ್ನುತ್ತಾ ಚಪಾತಿ ಲಟ್ಟಿಸುವುದರಿಂದ ಹಿಡಿದು ಪ್ರಾತ್ರೆಗಳನ್ನು ತೊಳೆಯುವವರೆಗೆ ಎಲ್ಲಾ ಮನೆ ಕೆಲಸಗಳನ್ನು ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದೆ.

ಸಾಮಾನ್ಯವಾಗಿ ಕೋತಿಗಳು ಮನುಷ್ಯರ ಕೈಯಲ್ಲಿದ್ದ ತಿಂಡಿ, ಮೊಬೈಲ್‌ ಇತ್ಯಾದಿ ವಸ್ತುಗಳನ್ನು ಕಿತ್ತುಕೊಂಡು ಹಲವಾರು ಕಿತಾಪತಿಗಳನ್ನು ಮಾಡುತ್ತಿರುತ್ತವೆ. ಇವುಗಳ ಚೇಷ್ಟೆ, ತುಂಟಾಟಗಳು ಒಂದೆರಡಲ್ಲ. ಅದರಲ್ಲೂ ಕೆಲವೊಂದಿಷ್ಟು ಮಂಗಗಳು ಕೋಪದಲ್ಲಿ ಮನುಷ್ಯರ ಮೇಲೆ ದಾಳಿ ಮಾಡಿ ಉದಾಹರಣೆಗಳೂ ಇವೆ. ಕೋತಿ ಚೇಷ್ಟೆಗೆ ಸಂಬಂಧಿಸಿದ ಇಂತಹ ಸಾಕಷ್ಟು ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲೂ ಕಾಣಸಿಗುತ್ತಿರುತ್ತವೆ. ಇಲ್ಲೊಂದು ವಿಶೇಷ ವಿಡಿಯೋ ವೈರಲ್‌ ಆಗಿದ್ದು, ಕೋತಿಯೊಂದು ಮನುಷ್ಯರ ಜೊತೆಗೆಯೇ ಇದ್ದು, ಚಪಾತಿ ಲಟ್ಟಿಸುವುದರಿಂದ ಹಿಡಿದು ಪಾತ್ರೆ ತೊಳೆಯುವವರೆಗೆ ಮನೆ ಕೆಲಸಗಳನ್ನೆಲ್ಲಾ ಮಾಡುವ ಮೂಲಕ ಎಲ್ಲರ ಗಮನವನ್ನು ಸೆಳೆದಿದೆ.

ಉತ್ತರ ಪ್ರದೇಶದ ರಾಯ್‌ಬರೇಲಿ ಜಿಲ್ಲೆಯ ಖಾಗಿಪುರ್‌ ಸಾದ್ವಾ ಎಂಬ ಸಣ್ಣ ಹಳ್ಳಿಯ ʼರಾಣಿʼ ಎಂಬ ಹೆಸರಿನ ಕೋತಿ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಸದ್ದು ಮಾಡುತ್ತಿದೆ. ಹೌದು ಮನುಷ್ಯರಂತೆ ಮನೆಗೆಲಸಗಳನ್ನೆಲ್ಲಾ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದೆ. ಈ ಕೋತಿ ಪ್ರತಿನಿತ್ಯ ಪಾತ್ರೆ ತೊಳೆಯುವುದು, ಮಸಾಲೆಗಳನ್ನು ರುಬ್ಬುವುದರಿಂದ ಹಿಡಿದು ಚಪಾತಿ ಲಟ್ಟಿಸುವವರೆಗೆ ಮನೆಗೆಲಸಗಳನ್ನೆಲ್ಲಾ ಮಾಡುತ್ತಂತೆ. ತನ್ನ ಈ ಸಹಾಯ ಗುಣದಿಂದಲೇ ರಾಣಿ ಇಡೀ ಹಳ್ಳಿಯ ಜನರ ಅಚ್ಚುಮೆಚ್ಚಿನವಳಾಗಿದ್ದಾಳೆ.

ಇದನ್ನೂ ಓದಿ: ಗೆಳತಿಯನ್ನು ಮೆಚ್ಚಿಸಲು ಸಿಂಹದ ಬೋನಿಗೆ ಹೋಗಿ ವಿಡಿಯೋ ಮಾಡಿದ ಪ್ರೇಮಿ; ಮುಂದೇನಾಯ್ತು ನೋಡಿ…

ಸುಮಾರು ಎಂಟು ವರ್ಷಗಳ ಹಿಂದೆ ತನ್ನ ಹಿಂಡಿನಿಂದ ಬೇರ್ಪಟ್ಟು ರಾಣಿ ಈ ಹಳ್ಳಿಗೆ ಆಗಮಿಸುತ್ತಾಳೆ. ಅಂದಿನಿಂದ ಈಕೆ ಅಶೋಕ್‌ ಎಂಬವರ ಮನೆಯಲ್ಲಿ ವಾಸವಿದ್ದಾಳೆ. ಕುಟುಂಬದಲ್ಲಿ ಒಬ್ಬಳಂತೆ ಇರುವ ರಾಣಿ ಚಪಾತಿ ಲಟ್ಟಿಸುವುದು, ಮಸಾಲೆಗಳನ್ನು ರುಬ್ಬುವುದು, ಪಾತ್ರೆ ತೊಳೆಯುವುದು ಮುಂತಾದ ಎಲ್ಲಾ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದಾಳೆ. ಅಷ್ಟೇ ಅಲ್ಲದೆ ಫೋನಿನಲ್ಲಿ ವಿಡಿಯೋಗಳನ್ನೆಲ್ಲಾ ನೋಡಿ ಆನಂದಿಸುತ್ತಾಳಂತೆ. ಈ ವಿಡಿಯೋವನ್ನು ರಾಣಿಯ (Rani Vlog RBL) ಯುಟ್ಯೂಬ್‌ ಚಾನೆಲ್‌ನಲ್ಲಿ ಹಂಚಿಕೊಳ್ಳಲಾಗಿದೆ. ರಾಣಿ ಕೋತಿ ಮನೆಗೆಲಸಗಳಿಗೆ ಸಂಬಂಧಿಸಿದ ಸಾಕಷ್ಟು ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದ್ದು, ರಾಣಿಯ ಈ ನಡತೆ ನೆಟ್ಟಿಗರ ಮನ ಗೆದ್ದಿದೆ.

ವೈರಲ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ