Love : ವರ್ಷಾಳನ್ನು ನಾನು ಮೊದಲ ಸಲ ಕಾಲೇಜಿನಲ್ಲಿ (College Love) ನೋಡಿದಾಗ ನನಗೆ 17 ವರ್ಷ. ಸ್ನೇಹಿತರಾದೆವು, ಬಲುಬೇಗನೆ ಪ್ರೀತಿಯಲ್ಲಿಯೂ ಬಿದ್ದೆವು. ಆದರೆ 2021ರಲ್ಲಿ ಒಂದು ದಿನ ಮುಂಬೈನಿಂದ ಪುಣೆಗೆ ಹೋಗುವಾಗ ಹೆದ್ದಾರಿಯಲ್ಲಿ ನನ್ನ ಕಾರಿನ ಟಯರ್ ಸಿಡಿದು ದೊಡ್ಡ ಅಪಘಾತವಾಯಿತು. ನನ್ನ ಒಂದು ಕಾಲು ಅಲ್ಯೂಮಿನಿಯಂ ಶೀಟ್ನಲ್ಲಿ ಸಿಕ್ಕಿಹಾಕಿಕೊಂಡಿತು. ಆ ಕಾಲನ್ನು ಕತ್ತರಿಸದಿದ್ದರೆ ಜೀವಕ್ಕೆ ಅಪಾಯ ಎಂದು ವೈದ್ಯರು ಹೇಳಿದರು. ಒಂದು ತಿಂಗಳತನಕ ವರ್ಷಾ ನನ್ನೊಂದಿಗೆ ಹಗಲೂ ರಾತ್ರಿ ಇದ್ದಳು. ಊಟ ಮಾಡಿಸುವುದು, ಡೈಪರ್ ಬದಲಾಯಿಸುವುದರಿಂದ ಹಿಡಿದು ನನ್ನೆಲ್ಲ ಕೆಲಸಗಳನ್ನು ಮಾಡಿದಳು. ನಂತರ ‘ನಾನು ಓಂಕಾರನೊಂದಿಗೆ ಜೀವನಪೂರ್ತಿ ಇರುತ್ತೇನೆ’ ಎಂದು ನನ್ನ ಪೋಷಕರಿಗೆ ಹೇಳಿದಳು.’ ಓಂಕಾರ ರೌಂಡಾಲೆ, ಮಹಾರಾಷ್ಟ್ರ
ಇದನ್ನೂ ಓದಿ : Viral Video: ಪೈನಾಪಲ್ ಮೊಮೊ: ‘ಇದಕ್ಕೆ ಚಟ್ನಿ ಬೇಡ, ಹಾರ್ಪಿಕ್ ಹಾಕಿ ಕೊಟ್ಟುಬಿಡು’; ನೆತ್ತಿಗೇರಿದ ನೆಟ್ಟಿಗರ ಕೋಪ
‘2021ರಲ್ಲಿ ನಮ್ಮಿಬ್ಬರ ಮದುವೆಯಾಯಿತು. ನಮಗೀಗ ಮುದ್ದಾದ ಹೆಣ್ಣು ಮಗುವಿದೆ. ನಾನೀವತ್ತು ಮಹಾರಾಷ್ಟ್ರ ವೀಲ್ಚೇರ್ ಕ್ರಿಕೆಟ್ ಟೀಮ್ ಅಸೋಸಿಯೇಷನ್ ಅನ್ನು ಮುನ್ನಡೆಸುತ್ತಿದ್ದೇನೆ. ಬದುಕಿನ ಸಂಕಷ್ಟಗಳು ನನ್ನ ಮತ್ತು ವರ್ಷಾ ಬಂಧವನ್ನು ಗಟ್ಟಿಗೊಳಿಸಿವೆ. ವರ್ಷಾ ಇಲ್ಲದಿದ್ದರೆ ನನ್ನ ಬದುಕೇನಾಗುತ್ತಿತ್ತೋ’ ಎನ್ನುತ್ತಾರೆ ಓಂಕಾರ.
ಇಂಥ ನಿಸ್ವಾರ್ಥ ಪ್ರೀತಿ ಮತ್ತು ಕಾಳಜಿಯು ಇತ್ತೀಚಿನ ದಿನಗಳಲ್ಲಿ ಸಂಬಂಧಗಳ ಮಧ್ಯೆ ಕಣ್ಮರೆಯಾಗಿದೆ. ಒಣ ಅಹಂಕಾರ, ಹಣ ಮತ್ತು ಸ್ವಾತಂತ್ರ್ಯ ಎಂಬ ತಪ್ಪು ವ್ಯಾಖ್ಯಾನದಿಂದಾಗಿ ಸಂಬಂಧಗಳು ಅರ್ಥವನ್ನೇ ಕಳೆದುಕೊಂಡಿವೆ ಎಂದಿದ್ದಾರೆ ಒಬ್ಬರು. ಜೀವನದ ನಿಜವಾದ ಅರ್ಥವನ್ನು ನೀವು ಗಂಭೀರವಾಗಿ ತೋರಿಸುತ್ತಿದ್ದೀರಿ. ನಿಮ್ಮ ಇಚ್ಛಾಶಕ್ತಿಯ ಮುಂದೆ ಯಾವುದೂ ಅಸಾಧ್ಯವಲ್ಲ ಎನ್ನುವುದನ್ನು ಸಾಬೀತುಪಡಿಸಿದ್ದೀರಿ ಎಂದಿದ್ಧಾರೆ ಇನ್ನೊಬ್ಬರು.
ಇದನ್ನೂ ಓದಿ : Viral Video: ಬೆಂಗಳೂರಿನಲ್ಲಿ ಬ್ಯಾಟ್ಮೊಬೈಲ್, ಮಿಸ್ಟರಿ ಮಷೀನ್, ಬಂಬಲ್ಬೀ ಕಾರುಗಳು; ನೆಟ್ಟಿಗರ ಹಾಸ್ಯದಲೆ
ಆಕೆ ರಾಣಿ! ದೇವರು ಅವಳನ್ನು ನಿಮ್ಮನ್ನು ಆಶೀರ್ವದಿಸಲಿ, ನಿಮ್ಮಿಬ್ಬರಿಗೂ ಹೆಚ್ಚಿನ ಶಕ್ತಿ ಲಭಿಸಲಿ ಎಂದಿದ್ದಾರೆ ಮತ್ತೊಬ್ಬರು. ಇಂಥವಳನ್ನು ಪಡೆದ ನೀವು ಧನ್ಯ ಮತ್ತು ಅದೃಷ್ಟವಂತರು ಎಂದಿದ್ದಾರೆ ಮಗದೊಬ್ಬರು. ಅನೇಕರು ಇಂಥವರ ಸಂತತಿ ಹೆಚ್ಚಲಿ ಎಂದು ಹಾರೈಸಿದ್ದಾರೆ. ಸಿನೆಮಾ ಮತ್ತು ಜಾಹೀರಾತು ಪ್ರಪಂಚ ಹುಟ್ಟುಹಾಕುವ ಹುಸಿ ಆದರ್ಶದ ವ್ಯಾಖ್ಯಾನವನ್ನು ಇಂಥವರೇ ಅಳಿಸಬೇಕು ಎಂದಿದ್ದಾರೆ.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 2:23 pm, Fri, 29 September 23