ನಿಯತ್ತಿಗೆ ಹೆಸರಾದ ಸಾಕು ಪ್ರಾಣಿಗಳಲ್ಲಿ ನಾಯಿಯು ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ ಎಂದರೆ ತಪ್ಪಿಲ್ಲ. ಮೋಟು ಬಾಲ, ಬಾಯಿಯಿಂದಾಚೆಗೆ ನಾಲಿಗೆ, ಗುರ್.. ಎನ್ನುವ ಕಣ್ಣುಗಳು, ಏನು ಕೇಳಿದರೂ ಬೌ.. ಬೌ ಎನ್ನುವುದಷ್ಟೇ ಉತ್ತರ. ಮನೆಯಲ್ಲಿ ಮುದ್ದಿನಿಂದ ಸಾಕಿದ ನಾಯಿಮರಿಯೊಂದು ಊಟ ಮಾಡುವ ಮೊದಲು ಪ್ರಾರ್ಥನೆ ಮಾಡಿ ಬಳಿಕ ಆಹಾರ ಸೇವಿಸುವ ವಿಡಿಯೋ ಇದೀಗ ವೈರಲ್ ಆಗಿದೆ. ವಿಡಿಯೋ ನೋಡಿದ ನೆಟ್ಟಿಗರಿಗೆ ಆಶ್ಚರ್ಯವನ್ನುಂಟು ಮಾಡಿದೆ.
ಸಾಕಿದ ನಾಯಿ ಮನೆಗೆ ಕಾವಲಾಗುತ್ತಾ ಕರ್ತವ್ಯಕ್ಕೆ ಎಂದೂ ಬದ್ಧವಾಗಿರುತ್ತದೆ. ಮನೆ ಜನರ ಮಾತನ್ನು ಆಲಿಸುತ್ತಾ, ಭಾಷೆ ಬಾರದಿದ್ದರೂ ಜನರ ಮಾತುಗಳನ್ನು ಅರಿತುಕೊಂಡು ಎಂದೂ ಕಾವಲಾಗಿರುತ್ತದೆ. ಮನೆಯಲ್ಲಿ ಮುದ್ದಿನಿಂದ ಸಾಕಿದ ಪ್ರಾಣಿಗೆ ಮಹಿಳೆಯೋರ್ವರು ಊಟ ಮಾಡುವ ಮುನ್ನ ಪ್ರಾರ್ಥನೆ ಮಾಡುವ ಅಭ್ಯಾಸವನ್ನು ಕಲಿಸಿದ್ದಾರೆ. ಮನೆಯಲ್ಲಿ ರೂಢಿಯಲ್ಲಿರುವ ಸಂಪ್ರದಾಯವನ್ನು ನಾಯಿಮರಿ ಪಾಲಿಸುವ ವಿಡಿಯೋ ನೋಡಿದರೆ ನಿಮಗೂ ಆಶ್ವರ್ಯವಾಗುತ್ತದೆ. ಇದೀಗ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಊಟಕ್ಕೆ ಕುಳಿತಾಗ ಪ್ರಾರ್ಥನೆ ಮಾಡಿ ನಂತರ ಊಟ ಮಾಡುವ ಸಂಪ್ರದಾಯವಿದೆ. ಅದೇ ರೀತಿ ಮನೆಯ ಒಡತಿ ಊಟ ಪ್ರಾರಂಭಿಸುವ ಮೊದಲು ಪ್ರಾರ್ಥನೆ ಮಾಡುತ್ತಾಳೆ. ಆಕೆಯ ಅಕ್ಕ-ಪಕ್ಕದಲ್ಲಿ ಕೂತ ನಾಯಿ ಮರಿಗಳೂ ಕೂಡಾ ಪ್ರಾರ್ಥಿಸಿ ನಂತರ ಊಟ ಸವಿಯುತ್ತವೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋವನ್ನು ವೈಶಾಲಿ ಮಾಥುರ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ‘ಹೃದಯ ಪೂರ್ವಕವಾಗಿ ಹಂಚಿಕೊಳ್ಳುತ್ತಿರುವ ವಿಡಿಯೋ ಇದು- ನನ್ನ ಸ್ನೇಹಿತೆ, ತಾನು ಸಾಕಿದ ನಾಯಿ ಮರಿಗಳಿಗೆ ಊಟ ಮಾಡುವ ಮುಂಚೆ ಪ್ರಾರ್ಥನೆ ಹೇಳಿಕೊಡುವ ದೃಶ್ಯ ಹೃದಯ ತಟ್ಟಿದೆ. ಸ್ನೇಹಿತೆ ಅಕ್ಕಪಕ್ಕದಲ್ಲಿ ಕುಳಿತ ಇಬ್ಬರೂ ಒಳ್ಳೆಯ ಹುಡುಗರು’ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋ ಹಂಚಿಕೊಳ್ಳಲಾಗಿದೆ.
Sharing this heart-warming video of my friend teaching her pups to say their prayers before food. Me thinks both are good boys. ?@dog_rates pic.twitter.com/z5ANJDVwVn
— Vaishali Mathur (@mathur_vaishali) May 1, 2021
ವಿಡಿಯೋದಲ್ಲಿ ಗಮನಿಸುವಂತೆ ಮಹಿಳೆ, ತಾನು ಸಾಕಿದ ನಾಯಿಮರಿಗಳನ್ನು ತನ್ನ ಅಕ್ಕಪಕ್ಕದಲ್ಲಿ ಕೂರಿಸಿಕೊಂಡು ನಾಯಿಗೆ ನೀಡಲಾದ ಆಹಾರದ ಬಟ್ಟಲನ್ನು ಎದುರಿಗೆ ಇರಿಸಿಕೊಂಡಿದ್ದಾಳೆ. ಎರಡೂ ಕೈಗಳಿಂದ ನಮಸ್ಕರಿಸಿ, ಅವಳು ಪ್ರಾರ್ಥಿಸುತ್ತಾಳೆ. ನಾಯಿಮರಿಗಳನ್ನು ನೋಡುತ್ತಾ ಮಂತ್ರ ಪಠಿಸುತ್ತಾಳೆ. ಪ್ರಾರ್ಥನೆ ಮುಗಿಯುವವರೆಗೂ ನಾಯಿ ಮರಿಗಳು ಸುಮ್ಮನೆ ಕುಳಿತಿರುತ್ತವೆ. ಮಹಿಳೆ ಹೇಳುತ್ತಿರುವ ಪ್ರಾರ್ಥನೆ ಮುಗಿಯುವವರೆಗೂ ತಾಳ್ಮೆಯಿಂದ ಕಾಯುತ್ತದೆ. ಮಹಿಳೆ, ನಾಯಿಮರಿಗಳಿಗೆ ತಿಂಡಿ ಸೇವಿಸುವಂತೆ ಸನ್ನೆ ಮಾಡಿದ ಮೇಲೆ ಆಹಾರದ ಬಟ್ಟಲು ಬಳಿ ಹೋಗುತ್ತವೆ.
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಆಗಿದ್ದ ಈ ವಿಡಿಯೋವನ್ನು 24,000ಕ್ಕೂ ಹೆಚ್ಚು ಜನ ನೋಡಿದ್ದಾರೆ. ಹಾಗೂ 1,100ಕ್ಕೂ ಹೆಚ್ಚು ಲೈಕ್ಸ್ಗಳು ಬಂದಿವೆ. ಕಾಮೆಂಟ್ಸ್ಗಳ ಸುರಿಮಳೆಯೇ ಬಂದಿದ್ದು, ‘ನಗುಮುಖದ ಇಮೋಜಿ ಹಂಚಿಕೊಳ್ಳುವ ಮೂಲಕ, ನಾಯಿಮರಿಗಳು ಆಹಾರ ಎದುರಿಗಿದ್ದಾಗ ಕಾಯುತ್ತಾ ಕುಳಿತಿರಲು ಸಾಧ್ಯವೇ ಇಲ್ಲ’ ಎಂದು ಬರೆದುಕೊಂಡಿದ್ದಾರೆ. ‘ಪ್ರೀತಿಯ ನಡವಳಿಕೆಯಿಂದ ನಾಯಿ ಮಾತ್ರವೇನು, ಡೈನಾಸರ್ ಸೇರಿದಂತೆ ಡ್ರಾಗನ್ಗಳಿಗೂ ಬೇಕಾದರೆ ಮಾತು ಕಲಿಸಬಹುದು’ ಎಂದು ಇನ್ನೋರ್ವರು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಜಾನುವಾರುಗಳು, ನಾಯಿಗಳಿಗೆ ಆಹಾರ ಹಾಕಿ ಮಾನವೀಯತೆ ಮೆರೆದ ಗದಗ ಟ್ರಾಫಿಕ್ ಪೊಲೀಸರು
(Video Viral in Social Media woman Teaches Dogs to Pray before Eating in Home )