Video: ಗ್ರಾಮ ರಕ್ಷಾ ದಳದ 600 ಹುದ್ದೆಗಳಿಗೆ ನೇಮಕಾತಿ; ಸಾವಿರಾರು ಜನರನ್ನು ನಿಯಂತ್ರಿಸಲಾಗದೆ ಲಾಠಿ ಚಾರ್ಜ್

| Updated By: shruti hegde

Updated on: Nov 28, 2021 | 11:20 AM

ಸಾವಿರಾರು ಜನಸಾಗರದ ನಡುವೆ ಪರಿಸ್ಥಿತಿ ನಿಯಂತ್ರಿಸಲಾಗದೇ ಸ್ಥಳೀಯ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಬೇಕಾಯಿತು. ಸ್ವಲ್ಪ ಪರಿಸ್ಥಿತಿ ತಿಳಿಯಾದ ನಂತರ ಪ್ರತಿ ಉದ್ಯೋಗ ಆಕಾಂಕ್ಷಿಯ ಪರಿಶೀಲನಾ ಪ್ರಕ್ರಿಯೆಯು ಪೊಲೀಸ್ ಠಾಣೆಯಲ್ಲಿ ಪ್ರಾರಂಭವಾಯಿತು.

Video: ಗ್ರಾಮ ರಕ್ಷಾ ದಳದ 600 ಹುದ್ದೆಗಳಿಗೆ ನೇಮಕಾತಿ; ಸಾವಿರಾರು ಜನರನ್ನು ನಿಯಂತ್ರಿಸಲಾಗದೆ ಲಾಠಿ ಚಾರ್ಜ್
Follow us on

ದೇಶದಲ್ಲಿ ನಿರುದ್ಯೋಗ ಸಮಸ್ಯೆ ಎಷ್ಟರ ಮಟ್ಟಿಗಿದೆ ಎಂಬುವುದಕ್ಕೆ ಸಾಕ್ಷಿ ಎಂಬಂತೆ ಇಲ್ಲೊಂದು ವಿಡಿಯೋ ಹರಿದಾಡುತ್ತಿದೆ. ಬನಸ್ಕಾಂತ ಜಿಲ್ಲೆಯ ಪಾಲನ್​ಪುರ ಪ್ರದೇಶದಲ್ಲಿ ಸಾವಿರಾರು ಉದ್ಯೋಗ ಆಕಾಂಕ್ಷಿಗಳು ಜಮಾಯಿಸಿದ್ದರು. ಈ ಯುವಕರು ಗ್ರಾಮ ರಕ್ಷಾ ದಳದ 600 ಹುದ್ದೆಗಳ ನೇಮಕಾತಿಗಾಗಿ ಬಂದಿದ್ದರು. ಗ್ರಾಮ ರಕ್ಷಾ ದಳಕ್ಕೆ ಸಂಭಂದಿಸಿದ ನೇಮಕಾತಿ ಜಾಹಿರಾತಿನ ಪ್ರಕಾರ, ಈ ಹುದ್ದೆಗೆ 5ನೇ ತರಗತಿಗಿಂತ ಕಡಿಮೆ ಉತ್ತೀರ್ಣರಾದವರೂ ಸಹ ಅರ್ಜಿ ಸಲ್ಲಿಸಬಹುದು. ಈ ನಿಟ್ಟಿನಲ್ಲಿಯೇ ಸಾವಿರಾರು ಉದ್ಯೋಗ ಆಕಾಂಕ್ಷಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. 

ಸಾವಿರಾರು ಜನಸಾಗರದ ನಡುವೆ ಪರಿಸ್ಥಿತಿ ನಿಯಂತ್ರಿಸಲಾಗದೇ ಸ್ಥಳೀಯ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಬೇಕಾಯಿತು. ಸ್ವಲ್ಪ ಪರಿಸ್ಥಿತಿ ತಿಳಿಯಾದ ನಂತರ ಪ್ರತಿ ಉದ್ಯೋಗ ಆಕಾಂಕ್ಷಿಯ ಪರಿಶೀಲನಾ ಪ್ರಕ್ರಿಯೆಯು ಪೊಲೀಸ್ ಠಾಣೆಯಲ್ಲಿ ಪ್ರಾರಂಭವಾಯಿತು. ಗುಜರಾತ್ ಹೊರತುಪಡಿಸಿ, ಬಿಹಾರ ಸೇರಿದಂತೆ ಹಲವು ರಾಜ್ಯಗಳಲ್ಲಿ ಗ್ರಾಮ ರಕ್ಷಾ ದಳದ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ.

ಈ ಗ್ರಾಮ ರಕ್ಷಾ ದಳದ ಸಿಬ್ಬಂದಿಗೆ ಪಂಚಾಯತಿ ಕ್ಷೇತ್ರದಲ್ಲಿ ಭದ್ರತೆ ಮತ್ತು ಶಾಂತಿ ಕಾಪಾಡುವಂತಹ ಹಲವು ಜವಾಬ್ದಾರಿಗಳನ್ನು ನೀಡಲಾಗುತ್ತದೆ. ಚುನಾವಣೆಗಳು ಮತ್ತು ಇತರ ಸಂದರ್ಭಗಳಲ್ಲಿ ಸರ್ಕಾರ, ಇತರ ಸೇವೆಗಳಿಗಾಗಿ ರಕ್ಷಾ ದಳದ ಸದಸ್ಯರನ್ನು ತೆಗೆದುಕೊಳ್ಳುತ್ತದೆ. ಗಮನಾರ್ಹವಾಗಿ ಕೊರೊನಾ ವೈರಸ್​ನಿಂದಾಗಿ ಎರಡು ವರ್ಷಗಳಲ್ಲಿ ದೇಶದಲ್ಲಿ ನಿರುದ್ಯೋಗ ಬಿಕ್ಕಟ್ಟು ಹೆಚ್ಚಾಗಿದೆ. ಕೈಗಾರಿಕೆಗಳು ನಿಧಾನಗತಿಯಲ್ಲಿ ಕೆಲಸ ಸಾಗಿಸುತ್ತಿವೆ. ಇದರಿಂದಾಗಿ ನಗರದ ಸಾವಿರಾರು ಯುವಕರು ತಮ್ಮ ಗ್ರಾಮಗಳಿಗೆ ಮರಳುವ ಅನಿವಾರ್ಯತೆ ಎದುರಾಗಿದೆ. ನಿರುದ್ಯೋಗ ಯುವಕರು ಗ್ರಾಮದಲ್ಲಿ ಸಣ್ಣ ಪುಟ್ಟ ಕೆಲಸ ಹುಡುಕಿಗೊಳ್ಳಲೂ  ಹರಸಾಹಸ ಪಡಬೇಕಾದ ಪರಿಸ್ಥಿತಿ ಉಂಟುಮಾಡಿದೆ.

ಇದನ್ನೂ ಓದಿ:

Viral Video: ಸಂಗೀತ ವಾದ್ಯ ನುಡಿಸುತ್ತಾ ಮನಿಕೆ ಮಗೆ ಹಿತೆ ಹಾಡು ಹಾಡಿದ 10 ವರ್ಷದ ಪುಟ್ಟ ಬಾಲಕ; ವಿಡಿಯೊ ನೋಡಿ

Viral Video: ಸ್ಕೂಟರ್ ಕದಿಯುವ ಅವಸರದಲ್ಲಿ ನಿಲ್ಲಿಸಿದ್ದ ಕಾರಿಗೆ ಡಿಕ್ಕಿ ಹೊಡೆದ ಕಳ್ಳರು! ವಿಡಿಯೊ ಫುಲ್ ವೈರಲ್