Viral Video : ಸಂಸ್ಕೃತಿ ಎಂದು ನೋಡುವಾಗ ಕೊಲ್ಕತ್ತೆಗೆ ಮೊದಲ ಸ್ಥಾನ. ಸಾಹಿತ್ಯ, ಸಿನೆಮಾ, ಸಂಗೀತ, ಕಲೆ, ನೃತ್ಯ, ಅಡುಗೆ, ತೊಡುಗೆ ಹೀಗೆ ಎಲ್ಲದರಲ್ಲಿಯೂ ಪರಂಪರೆಯ ವೈಶಿಷ್ಟ್ಯವನ್ನು ಕಾಪಿಟ್ಟುಕೊಂಡುಬಂದಿದೆ. ಅಲ್ಲಿಯ ಬೀದಿಬದಿಯ ತಿಂಡಿ ತಿನಿಸುಗಳ ಬಗ್ಗೆ ಎಷ್ಟು ಮಾತನಾಡಿದರೂ ಕಡಿಮೆಯೇ. ಒಮ್ಮೆ ಸವಿದೇ ಅನುಭವಿಸಬೇಕು. ಇದೀಗ ವೈರಲ್ ಆಗಿರುವ ಈ ವಿಡಿಯೋದಲ್ಲಿ ರಸ್ತೆಬದಿಯ ತಿಂಡಿ ವ್ಯಾಪಾರಿಯೊಬ್ಬ ರುಚಿಕಟ್ಟಾದ ಛಂಗಾನಿ ಕಚೋರಿ ಮಾಡುತ್ತಿದ್ದಾನೆ.
ಮುತ್ತಲೆಲೆಯೊಳಗೆ ಕಚೋರಿಯನ್ನು ಅಲಂಕರಿಸಿಕೊಡುವ ಈ ವಿಡಿಯೋ ನೆಟ್ಟಿಗರ ಗಮನ ಸೆಳೆದಿದೆ. ರೆಡ್ಡಿಟ್ ನಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಪ್ರತೀ ಪ್ಲೇಟ್ಗೆ ರೂ. 40. ಈತನಕ 165 ವೋಟ್ಗಳನ್ನು ಇದು ಪಡೆದುಕೊಂಡಿದೆ. ಹುರಿದ ಹಸಿಮೆಣಸು, ಬೇಯಿಸಿದ ಆಲೂಗಡ್ಡೆ, ಮಸಾಲೆ, ಕಡಲೆ, ಜೀರಿಗೆ, ಪುರೀನಾ, ಹುಣಸೆಹಣ್ಣು, ಬೆಲ್ಲ ಹೀಗೆ ಎಲ್ಲ ಮಿಶ್ರಣದೊಂದಿಗೆ ರುಚಿಕಟ್ಟಾಗಿ ಕಚೋರಿ ಸಿದ್ಧವಾಗುತ್ತದೆ.
ಆದರೆ ಕೆಲವರು ಈ ವಿಡಿಯೋ ನೋಡಿದ ಕೆಲವರು, ನೋಡಲು ಬಹಳ ರುಚಿಕಟ್ಟಾಗಿದೆ. ಆದರೆ ಸ್ವಚ್ಛತೆಯ ಬಗ್ಗೆ ಏನೋ ಎಂತೋ. ಆ ಅಂಗಡಿಯವನನ್ನು ನೋಡುತ್ತಿದ್ದರೆ ಸ್ಚಚ್ಛತೆ ಕಾಪಾಡುತ್ತಿದ್ದಂತೆ ಕಾಣುತ್ತಿಲ್ಲ ಎಂದಿದ್ದಾರೆ ಕೆಲವರು. ಇಂಥ ತಿಂಡಿಗಳು ತಿನ್ನಲು ರುಚಿ ಆದರೆ ಆರೋಗ್ಯಕ್ಕೆ ಹಾನಿ ಎಂದಿದ್ದಾರೆ ಇನ್ನೂ ಕೆಲವರು.
ನಾನು ಈ ಕಚೋರಿಯನ್ನು ಸವೆದಿದ್ದೇನೆ ಬಹಳ ರುಚಿ. ಈಗಲೂ ಇಲ್ಲಿ ಲಭ್ಯವಾ? ಎಂದು ಮತ್ತೊಬ್ಬರು ಕೇಳಿದ್ದಾರೆ. ಇದೊಂದು ಬಹಳ ಹಳೆಯ ಅಂಗಡಿ. ಆದರೆ ಇಂದಿಗೂ ಇದೇ ರುಚಿಯನ್ನು ಕಾಪಾಡಿಕೊಂಡು ಬಂದಿದೆ ಎಂದಿದ್ಧಾರೆ ಮಗದೊಬ್ಬರು.
ಕೊಲ್ಕತ್ತಾಗೆ ಹೋದರೆ ನೀವು ಚುರುಮುರಿಯೊಂದಿಗೆ ಸಾಸಿವೆ ಎಣ್ಣೆ ಒಗ್ಗರಣೆ ಹಾಕಿದ ಮೆಣಸಿನಕಾಯಿ, ಕಡಲೆಕಾಳು, ಈರುಳ್ಳಿಯ ಚಾಟ್ ಮಾತ್ರ ತಪ್ಪಿಸಿಕೊಳ್ಳಬಾರದು ಎಂದಿದ್ದಾರೆ ಇನ್ನೂ ಒಬ್ಬರು.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 10:56 am, Sat, 29 October 22