ಇಲ್ಲಿ ರುಚಿಗೆ ದೋಷವಿಲ್ಲ; ಪುಣೆಯಲ್ಲಿ ಹೀಗೊಂದು ಸ್ಪೆಷಲ್ ಹೋಟೆಲ್
Pune : ಇಲ್ಲಿಯ ಸಿಬ್ಬಂದಿ ಎಲ್ಲರೂ ವಾಕ್ಶ್ರವಣದೋಷವುಳ್ಳವರೇ. ಅವರೊಂದಿಗೆ ಹೇಗೆ ಸಂಭಾಷಣೆ ನಡೆಸಬೇಕು ಎನ್ನುವುದನ್ನು ಮೆನುವಿನಲ್ಲಿ ಸೂಚಿಸಲಾಗಿದೆ. ನೆಟ್ಟಿಗರು ಖಂಡಿತ ಇಲ್ಲೊಮ್ಮೆ ಭೇಟಿ ನೀಡಬೇಕು ಎಂದು ಕಾತರಿಸುತ್ತಿದ್ದಾರೆ.
Viral Video : ಟೇಬಲ್ ಕ್ಲೀನ್ ಮಾಡು, ಎಷ್ಟೊತ್ತದು ಒಂದು ಸಲ ಹೇಳಿದರೆ ಗೊತ್ತಾಗಲ್ವಾ? ಬೇಗ ಪಾರ್ಸೆಲ್ ಕೊಡು, ಈ ಕಸ್ಟಮರ್ ಅಟೆಂಡ್ ಮಾಡು ಹೀಗೆ.. ಕೆಲಸ ಮಾಡಿಸುವ ನೆಪದಲ್ಲಿ ಒಬ್ಬರಮೇಲೊಬ್ಬರು ದಬ್ಬಾಳಿಕೆಯನ್ನೂ ಮಾಡುವುದಿಲ್ಲ. ಗ್ರಾಹಕರೂ ಇಲ್ಲಿ ಸನ್ನೆಯಲ್ಲಿಯೇ ಸಿಬ್ಬಂದಿಯೊಂದಿಗೆ ವ್ಯವಹರಿಸುವುದು. ಇಲ್ಲಿ ಎಲ್ಲವೂ ವಿನಮ್ರತೆಯಲ್ಲಿ, ಶಾಂತತೆಯಲ್ಲಿ, ಶ್ರದ್ಧೆಯಲ್ಲಿ, ನಗುಮುಖದಲ್ಲಿ ಮತ್ತು ಸಂತೃಪ್ತಿಯ ನಿರೀಕ್ಷೆಯಲ್ಲಿ ಇದೀಗ ವೈರಲ್ ಆಗುತ್ತಿರುವ ಈ ವಿಡಿಯೋ ಗಮನಿಸಿ. ಪುಣೆಯಲ್ಲಿರುವ ಈ ರೆಸ್ಟೋರೆಂಟ್ನಲ್ಲಿ ನಿಮ್ಮನ್ನು ಸ್ವಾಗತಿಸುವವರು, ಸರ್ವ್ ಮಾಡುವವರು, ಅಡುಗೆ ಮಾಡುವವರು ಎಲ್ಲರೂ ವಾಕ್ ಶ್ರವಣದೋಷವುಳ್ಳ ವ್ಯಕ್ತಿಗಳೇ.
View this post on Instagram
ಇನ್ಸ್ಟಾಗ್ರಾಂನ ಪುಣೆ ಫುಡೀಸ್ ಎಂಬ ಫುಡ್ ಬ್ಲಾಗಿಂಗ್ ಪುಟದಲ್ಲಿ ಈ ವಿಡಿಯೋ ಹಂಚಿಕೊಂಡ ನಂತರ ವೈರಲ್ ಆಗಿದೆ. ಇನ್ಸ್ಟಾಗ್ರಾಂನಲ್ಲಿ ಈ ರೆಸ್ಟೋರೆಂಟ್ನ ಪುಟವಿದೆ; @terrasinne. ಇಲ್ಲಿ ಕೆಲಸ ಮಾಡುವವರೆಲ್ಲರೂ ಮೂಕರು, ಕಿವುಡರು. ಇವರೊಂದಿಗೆ ಹೇಗೆ ಸಂಭಾಷಣೆ ನಡೆಸಬೇಕು ಎಂಬುದನ್ನು ಮೆನುವಿನ ಮೂಲಕ ತಿಳಿದುಕೊಳ್ಳಬಹುದು. ಬಂದ ಗ್ರಾಹಕರನ್ನೆಲ್ಲ ಇಲ್ಲಿಯ ಸಿಬ್ಬಂದಿ ಶಾಂತಚಿತ್ತದಿಂದ ಸಮಾಧಾನದಿಂದ ರುಚಿರುಚಿಯಾದ ಭಕ್ಷ್ಯಗಳನ್ನು ಬಡಿಸಿ ಉಪಚರಿಸುತ್ತದೆ.
ವಾಕ್, ಶ್ರವಣ ದೋಷ ಮತ್ತು ಬಹುಅಂಗವೈಕಲ್ಯ ಉಳ್ಳವರನ್ನು ನೇಮಿಸಿಕೊಳ್ಳುವ ಭಾರತದ ಏಕೈಕ ರೆಸ್ಟೋರೆಂಟ್ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ. ಲಂಡನ್ನ ಇಂಟರ್ನ್ಯಾಷನಲ್ ಹಾಸ್ಪಿಟ್ಯಾಲಿಟಿ ಕೌನ್ಸಿಲ್ ‘ಉತ್ತಮ ಆತಿಥ್ಯ’ ಕ್ಕಾಗಿ ಪ್ರಶಸ್ತಿ ನೀಡಿ ಗೌರವಿಸಿದೆ.
ಏಳು ಲಕ್ಷಕ್ಕೂ ಹೆಚ್ಚು ಜನರು ಈ ವಿಡಿಯೋ ನೋಡಿ ಮೆಚ್ಚಿದ್ದಾರೆ. ‘ಈ ರೆಸ್ಟೋರೆಂಟ್ಗೆ ಒಮ್ಮೆ ಹೋಗಬೇಕು. ಬಹಳ ವಿಶಿಷ್ಟವಾಗಿದೆ’ ಎಂದಿದ್ದಾರೆ ನೆಟ್ಟಿಗರು. ನೀವೂ ಪುಣೆಗೆ ಹೋದರೆ ಈ ರೆಸ್ಟೋರೆಂಟ್ಗೆ ಒಮ್ಮೆ ಭೇಟಿನೀಡಿ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 12:37 pm, Sat, 29 October 22