Viral video: ಹವಾಮಾನ ಕೆಟ್ಟಿದ್ದರೆ ಹೀಗೇ ಆಗುತ್ತದೆ! ವರದಿ ಓದುವಾಗ ಆ್ಯಂಕರ್​ ಹೇಗಾಗಿದ್ದಾರೆ ನೋಡಿ

|

Updated on: May 18, 2021 | 1:46 PM

ಮಹಿಳಾ ಆ್ಯಂಕರ್​ ಓರ್ವರು ನಿರೂಪಣೆ ಮಾಡುತ್ತಿರುವಾಗ ಸ್ಕ್ರೀನ್​ನಲ್ಲಿ ಆ್ಯಂಕರ್​ ತದ್ರೂಪಿ ಚಿತ್ರವೊಂದು ಕಾಣಿಸಿಕೊಳ್ಳಲು ಪ್ರಾರಂಭಿದ ವಿಡಿಯೋ ವೈರಲ್​ ಆಗಿದೆ. ನೀವೂ ನೋಡಿ ವಿಡಿಯೋ ಇಲ್ಲಿದೆ.

Viral video: ಹವಾಮಾನ ಕೆಟ್ಟಿದ್ದರೆ ಹೀಗೇ ಆಗುತ್ತದೆ! ವರದಿ ಓದುವಾಗ ಆ್ಯಂಕರ್​ ಹೇಗಾಗಿದ್ದಾರೆ ನೋಡಿ
ಆ್ಯಂಕರ್​
Follow us on

ಮುಂಬೈ: ಜಗತ್ತಿನ ಮೂಲೆ ಮೂಲೆಯಲ್ಲಿ ನಡೆಯುವ ಸುದ್ದಿ- ಸಮಾಚಾರಗಳನ್ನು ಜನರಿಗೆ ತಿಳಿಸುವ ಕೆಲಸವನ್ನು ಮಾಧ್ಯಮಗಳು ಮಾಡುತ್ತವೆ. ವಿಶ್ರಾಂತಿ ಇಲ್ಲದೇ ನಿಯಂತರವಾಗಿ ಜನಗತ್ತಿನ ಆಗು-ಹೋಗುಗಳ ಕುರಿತಾದ ಮಾಹಿತಿಯನ್ನು ತಿಳಿಸುತ್ತದೆ. ಸಮಾಜದಲ್ಲಿ ನಡೆಯುತ್ತಿರು ಘಟನೆಯನ್ನು ಸರಳವಾಗಿ ಜನರಿಗೆ ತಲುಪಿಸಿವ ಕೆಲಸ ಮಾಧ್ಯಮದವರದ್ದು. ಹಾಗೆಯೇ, ವರದಿ ಓದುವ ಆ್ಯಂಕರ್​ ಕೆಲಸ ಸುಲಭವಲ್ಲ. ತತ್​ಕ್ಷಣದ ಸುದ್ದಿಯನ್ನು ತಪ್ಪಿಲ್ಲದೇ ಜನರಿಗೆ ತಿಳಿಸುವುದು, ಜೊತೆಗೆ ಎದುರಾಗುವ ತಾಂತ್ರಿಕ ದೋಷಗಳನ್ನೂ ಮೀರಿ ಜನರೆದುರು ನಿಲ್ಲಿವುದು ಕಷ್ಟಕರ. ಇದಕ್ಕೆ ಒಳ್ಳೆಯ ಬುದ್ಧಿವಂತಿಕೆ ಮತ್ತು ಚಾಣಾಕ್ಷತನ ಬೇಕು.

ಇದೀಗ ಮಹಿಳಾ ಆ್ಯಂಕರ್​ ಓರ್ವರು ನಿರೂಪಣೆ ಮಾಡುತ್ತಿರುವಾಗ ಸ್ಕ್ರೀನ್​ನಲ್ಲಿ ಆ್ಯಂಕರ್​ ತದ್ರೂಪಿ ಚಿತ್ರವೊಂದು ಕಾಣಿಸಿಕೊಳ್ಳಲು ಪ್ರಾರಂಭಿದ ವಿಡಿಯೋ ವೈರಲ್​ ಆಗಿದೆ. ಆ್ಯಂಕರ್​ಗೂ ಕೂಡಾ ಒಂದು ಕ್ಷಣ ವಿಚಿತ್ರ ಅನಿಸಿಬಿಡ್ತು. ಆದರೂ ಕೂಡಾ ಕಂಗಾಲಾಗದೇ ಬುದ್ಧಿವಂತಿಕೆಯಿಂದ ಸಮಯವನ್ನು ನಿಭಾಯಿಸಿದ್ದಾರೆ. ವಿಡಿಯೋ ಇದೆ ನೀವೂ ನೋಡಿ.

ಫಾಕ್ಸ್​9 ನ್ಯೂಸ್​ ಸುದ್ದಿ ನಿರೂಪಕಿ ಜೆನ್ನಿಫರ್​ ಮೆಕ್​ಡರ್ಮಡ್​ ಕ್ಲೋನ್​ ಅವರು ಸ್ಕ್ರೀನ್​ನಲ್ಲಿ ಕಾಣಿಸಿಕೊಂಡ ತದ್ರೂಪಿ ಚಿತ್ರ ಇದೀಗ ಸೋಷಿಲ್​ ಮಿಡಿಯಾಗಳಲ್ಲಿ ವೈರಲ್​ ಆಗುತ್ತಿದೆ.

ನಿಜವಾಗಿಯೂ ಅಲ್ಲಿ ಏನಾಯ್ತು?
ಫಾಕ್ಸ್​9 ನ್ಯೂಸ್​ ಮಾಧ್ಯಮದ ಸ್ಟುಡಿಯೋದಲ್ಲಿ ಈ ಘಟನೆ ನಡೆದಿದೆ. ಫಾಕ್ಸ್​9 ನ್ಯೂಸ್​ ನಿರೂಪಕಿ ಜೆನ್ನಿಫರ್​ ಮೆಕ್​ಡರ್ಮಡ್​ ನಿರೂಪಣೆ ಮಾಡುತ್ತಿದ್ದರು. ಹವಾಮಾನ ವರದಿಯ ಕುರಿತಾಗಿ ಅಂದು ನಿರೂಪಣೆಯಲ್ಲಿ ತೊಡಗಿದ್ದರು. ಆಗ ತಾಂತ್ರಿಕ ಸಮಸ್ಯೆಯೊಂದು ಎದುರಾಗಿದೆ. ಇದ್ದಕ್ಕಿದ್ದಂತೆಯೇ ಆ್ಯಂಕರ್​ ತದ್ರೂಪಿ ಚಿತ್ರ ಸ್ಕ್ರೀನ್​ನಲ್ಲಿ ಕಾಣಿಸಿಕೊಳ್ಳಲು ಪ್ರಾರಂಭವಾಗಿದೆ. ತತ್​ಕ್ಷಣ ಆ್ಯಂಕರ್​ ಕೂಡಾ ಆಶ್ವರ್ಯಗೊಳ್ಳುತ್ತಾರೆ. ತನ್ನದೇ ತದ್ರೂಪಿ ಚಿತ್ರ ನೋಡಿ ಅವರೂ ಕೂಡಾ ನಗಲು ಪ್ರಾರಂಭಿಸುತ್ತಾರೆ. ಜೊತೆಗೆ ವಿವಿಧ ಆ್ಯಕ್ಷನ್​ ಮಾಡುವ ಮೂಲಕ ನಗುತ್ತಾರೆ.

ಏತನ್ಮಧ್ಯೆ, ತಾಂತ್ರಿಕ ದೋಷ ಸರಿಪಡಿಸಿದ ಬಳಿಕ ಮತ್ತೆ ಆ್ಯಂಕರ್​ ಹವಾಮಾನ ಮಾಹಿತಿಯನ್ನು ಓದಲು ಪ್ರಾರಂಭಿಸುತ್ತಾರೆ. ಈ ವಿಡಿಯೋವನ್ನು ಫಾಕ್ಸ್​ 9 ಯುಟ್ಯೂಬ್​ಗೆ ಪೋಸ್ಟ್​ ಮಾಡಿದೆ. ವಿಡಿಯೋ ನೋಡಿದ ನೆಟ್ಟಿಗರು ಈ ಕುರಿತು ಕಾಮೆಂಟ್​ ಮಾಡಿದ್ದು, ತಾಂತ್ರಿಕ ದೋಷದ ಬಳಿಕವು ಆಂಕರ್​​ ಯಾವುದೇ ಗಡಿಬಿಡಿಯಿಲ್ಲದೇ ಪರಿಸ್ಥಿತಿಯನ್ನು ಚೆನ್ನಾಗಿ ನಿಭಾಯಿಸಿದ್ದಾರೆ ಎಂದು ಶ್ಲಾಘಿಸಿದ್ದಾರೆ. ಜೆನ್ನಿಫರ್​, ತಾಂತ್ರಿಕ ದೋಷವನ್ನು ತಮಾಷೆಯಾಗಿ ನಿರ್ವಹಿಸದಿದ್ದರೆ, ಜನರು ಇದನ್ನು ಸಾಮಾನ್ಯವಾದ ಒಂದು ವಿಡಿಯೋವಾಗಿ ನೋಡಿತ್ತಿದ್ದರಷ್ಟೆ, ಸಮಯವನ್ನು ಚೆನ್ನಾಗಿ ನಿಭಾಯಿಸಿದ್ದಾರೆ ಎಂದು ಮತ್ತೋರ್ವರು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ವಿಡಿಯೋ ಇದುವರೆಗೆ 5 ಲಕ್ಷ 11 ಸಾವಿರ 675 ಬಾರಿ ವೀಕ್ಷಣೆಗಳನ್ನು ಪಡೆದಿದೆ. ಆ್ಯಂಕರ್​, ಸಮಯಕ್ಕೆ ತಕ್ಕಂತೆ ತಾಂತ್ರಿಕ ದೋಷವನ್ನೂ ಅರಿತು ಸಮಯವನ್ನು ನಿಭಾಯಿಸಿರುವುದಕ್ಕೆ ಪ್ರಶಂಸೆ ವ್ಯಕ್ತವಾಗಿದೆ.

ಇದನ್ನೂ ಓದಿ: ಶಾರುಖ್​ ಖಾನ್​ ಮಗ ಆರ್ಯನ್​ಗೆ ಅಮೆರಿಕ ವಿವಿಯಲ್ಲಿ ಪದವಿ ಪ್ರದಾನ; ಫೋಟೋ ವೈರಲ್​