ಮುಂಬೈನ ಲೋಕಲ್ ಟ್ರೈನ್ನಲ್ಲಿ ವ್ಯಕ್ತಿಯೊಬ್ಬ ಚಲಿಸುತ್ತಿರುವ ರೈಲನ್ನು ಹತ್ತಲು ಪ್ರಯತ್ನಿಸುತ್ತಿರುವ ವೇಳೆ ಆಯಾ ತಪ್ಪಿ ಕೆಳಗೆ ಬಿದಿದ್ದು, ತಕ್ಷಣ ಅಲ್ಲೇ ನಿಂತಿದ್ದ ಪೊಲೀಸ್ ಅಧಿಕಾರಿಯೊಬ್ಬರು ಆತನನ್ನು ಎಳೆದು ಜೀವ ಉಳಿಸಿದ್ದಾರೆ. ಸದ್ಯ ಘಟನೆಗೆ ಸಂಬಂಧಿಸಿದ ಸಂಪೂರ್ಣ ದೃಶ್ಯ ಟ್ರೈನ್ ಪ್ಲಾಟ್‌ಫಾರ್ಮ್‌ನಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಅಧಿಕಾರಿಯ ಸಮಯ ಪ್ರಜ್ಞೆಯಿಂದ ಭೀಕರ ಅಪಘಾತ ತಪ್ಪಿದೆ. ಗೋರೆಗಾಂವ್ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದೆ.
mumbaipolice ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ಸದ್ಯ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ. ವ್ಯಕ್ತಿಯ ಜೀವ ಉಳಿಸಿದ ಅಧಿಕಾರಿ ಪಿಸಿ ಬಲಾಸೊ ಧಾಗೆ ಎಂದು ಗುರುತಿಸಲಾಗಿದೆ. ಸೆ.01 ರಂದು ಹಂಚಿಕೊಂಡಿರುವ ವಿಡಿಯೋ ಕೇವಲ ಎರಡೇ ದಿನದಲ್ಲಿ 9ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ. ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ಸಾಕಷ್ಟು ನೆಟ್ಟಿಗರು ಕಾಮೆಂಟ್ ಮೂಲಕ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Richest Cat: ಇನ್ಸ್ಟಾಗ್ರಾಮ್ನಲ್ಲಿ ಪ್ರತೀ ಪೋಸ್ಟ್ಗೆ 12ಲಕ್ಷ ರೂ. ಪಡೆಯುವ ವಿಶ್ವದ ಶ್ರೀಮಂತ ಬೆಕ್ಕು
“ನಿಮ್ಮ ಪ್ರಾಣವನ್ನು ಪಣಕ್ಕಿಟ್ಟು ಯುವಕರ ಜೀವ ಉಳಿಸಿದ ನಿಮ್ಮ ಮಹಾನ್ ಕಾರ್ಯಕ್ಕೆ ವಂದನೆಗಳು. ಮಹಾರಾಷ್ಟ್ರ ಸರ್ಕಾರವು ಈ ಕೆಲಸವನ್ನು ಸರಿಯಾಗಿ ಗೌರವಿಸುತ್ತದೆ ಎಂದು ನಾನು ಭಾವಿಸುತ್ತೇನೆ.” ಎಂದು ನೆಟ್ಟಿಗರೊಬ್ಬರು ಬರೆದುಕೊಂಡರೆ, ಮತ್ತೊಬ್ಬರು “ಗ್ರೇಟ್ ಸೇವ್… ನಿಮಗೆ ಸೆಲ್ಯೂಟ್ ಸರ್” ಎಂದಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ