AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೊಂಟಕ್ಕೆ ಕಬ್ಬಿಣದ ಸರಪಳಿ ಕಟ್ಟಿಕೊಂಡು ಪೊಲೀಸ್​ ಪರೀಕ್ಷೆಗೆ ಹಾಜರಾದ ಅಭ್ಯರ್ಥಿ

ಉತ್ತರಪ್ರದೇಶದ ಮಹಾರಾಜಗಂಜ್ ಜಿಲ್ಲೆಯಲ್ಲಿ ಅಚ್ಚರಿಯ ಪ್ರಕರಣವೊಂದು ನಡೆದಿದೆ. ಮಹಿಳಾ ಅಭ್ಯರ್ಥಿಯೊಬ್ಬರು ಸೊಂಟಕ್ಕೆ ಕಬ್ಬಿಣದ ಸರಪಳಿ ಕಟ್ಟಿಕೊಂಡು ಪೊಲೀಸ್​ ಪರೀಕ್ಷೆಗೆ ಹಾಜರಾಗಿರುವ ಘಟನೆ ಉತ್ತರ ಪ್ರದೇಶದ ಮಹಾರಾಜ್​ಗಂಜ್​ನಲ್ಲಿ ನಡೆದಿದೆ.

ಸೊಂಟಕ್ಕೆ ಕಬ್ಬಿಣದ ಸರಪಳಿ ಕಟ್ಟಿಕೊಂಡು ಪೊಲೀಸ್​ ಪರೀಕ್ಷೆಗೆ ಹಾಜರಾದ ಅಭ್ಯರ್ಥಿ
ಸಾಂದರ್ಭಿಕ ಚಿತ್ರ
ನಯನಾ ರಾಜೀವ್
|

Updated on: Sep 03, 2024 | 10:34 AM

Share

ಮಹಿಳಾ ಅಭ್ಯರ್ಥಿಯೊಬ್ಬರು ಸೊಂಟಕ್ಕೆ ಕಬ್ಬಿಣದ ಸರಪಳಿ ಕಟ್ಟಿಕೊಂಡು ಪೊಲೀಸ್​ ಪರೀಕ್ಷೆಗೆ ಹಾಜರಾಗಿರುವ ಘಟನೆ ಉತ್ತರ ಪ್ರದೇಶದ ಮಹಾರಾಜ್​ಗಂಜ್​ನಲ್ಲಿ ನಡೆದಿದೆ. ಕಾನ್‌ಸ್ಟೆಬಲ್ ನೇಮಕಾತಿ ಪರೀಕ್ಷೆಯ ಕೊನೆಯ ದಿನವಾದ ಶನಿವಾರ ಅಭ್ಯರ್ಥಿ ಪರೀಕ್ಷೆಗೆ ಹಾಜರಾಗಿದ್ದರು, ಅವರ ತಪಾಸಣೆ ಮಾಡುವಾಗ ಸೊಂಟದಲ್ಲಿ ಕಬ್ಬಿಣದ ಸರಳಿರುವುದು ಕಂಡುಬಂದಿದೆ.

ಪರೀಕ್ಷೆ ಬೇಕಾದರೂ ಬಿಡುತ್ತೇನೆ ಆದರೆ ಯಾವುದೇ ಕಾರಣಕ್ಕೂ ಈ ಸರಪಳಿ ಮಾತ್ರ ತೆಗೆಯುವುದಿಲ್ಲ ಎಂದು ಆಕೆ ಹಠ ಹಿಡಿದಿದ್ದಳು.

ಉತ್ತರ ಪ್ರದೇಶದಲ್ಲಿ ನಡೆದ ಕಾನ್​ಸ್ಟೆಬಲ್ ನೇಮಕಾತಿ ಸಂದರ್ಭದಲ್ಲಿ ಮೆಟಲ್ ಡಿಟೆಕ್ಟರ್ ಮೂಲಕ ಹಾದು ಹೋದಾಗ ಈ ವಿಚಾರ ಬೆಳಕಿಗೆ ಬಂದಿದೆ. ಪರೀಕ್ಷಾ ಕೇಂದ್ರದ ಗೇಟ್ ಬಳಿ ಅಭ್ಯರ್ಥಿಗಳ ಕುಟುಂಬಸ್ಥರೂ ಹಾಜರಿದ್ದರು, ಆಕೆಯ ಮೈಮೇಲೆ ದೆವ್ವ ಬರುತ್ತಿತ್ತು, ಅನೇಕ ದೆವ್ವಗಳು ಆಕೆಯನ್ನು ಕಾಡುತ್ತಿವೆ. ಹಾಗಾಗಿ ತಾಂತ್ರಿಕರ ಸಹಾಯ ಪಡೆದು ಆ ಸರಪಳಿಯನ್ನು ಹಾಕಿರುವುದಾಗಿ ಹೇಳಿದ್ದಾರೆ.

10 ದೇಹಗಳು ಆಕೆಯನ್ನು ಬಿಟ್ಟು ಹೋಗಿದ್ದು, ಇದೀಗ 11ನೇ ಬೀಗವನ್ನು ತೆರೆಯುವುದು ಬಾಕಿ ಇದೆ ಎಂದು ಪೋಷಕರು ತಿಳಿಸಿದ್ದಾರೆ.

ಮತ್ತಷ್ಟು ಓದಿ: Crime News: ಅಪ್ಪನ ರೋಗ ಗುಣಪಡಿಸುತ್ತೇನೆಂದು ಕರೆಸಿ ಸ್ಮಶಾನದಲ್ಲೇ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಮಂತ್ರವಾದಿ

ಮಹಿಳಾ ಅಭ್ಯರ್ಥಿಯನ್ನು ಭದ್ರತಾ ಸಿಬ್ಬಂದಿ ಕೂಲಂಕಷವಾಗಿ ಪರಿಶೀಲಿಸಿದರು. ಯಾವುದೇ ಸಾಧನ ಪತ್ತೆಯಾಗದಿದ್ದಾಗ, ವಿಶೇಷ ಕಣ್ಗಾವಲು ಕೈಗೊಳ್ಳಲು ಕೊಠಡಿ ಇನ್ಸ್‌ಪೆಕ್ಟರ್‌ಗೆ ಸೂಚಿಸಲಾಯಿತು. ಮಹಿಳಾ ಅಭ್ಯರ್ಥಿ ಕಟ್ಟುನಿಟ್ಟಾದ ಕಣ್ಗಾವಲು ಅಡಿಯಲ್ಲಿ ಪರೀಕ್ಷೆಯನ್ನು ತೆಗೆದುಕೊಂಡರು. ಇದೀಗ ಎಲ್ಲೆಡೆ ಈ ವಿಚಾರವೇ ಹೆಚ್ಚು ಚರ್ಚೆಗೊಳಗಾಗುತ್ತಿದೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ