AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಜೀವನದಲ್ಲಿ ಏನ್​​ ಬೇಕಾದರೂ ಮಾಡಿ ಆದ್ರೆ ದಯವಿಟ್ಟು ಮದುವೆಯಾಗ್ಬೇಡಿ, ಹೆಂಡತಿ ಕಾಟಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಗಂಡ

ಗಂಡನ ಕಾಟ ತಾಳಲಾರದೆ ಪತ್ನಿಯಾದವಳು ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿಗಳನ್ನು ಆಗಾಗ್ಗೆ ಕೇಳುತ್ತಿರುತ್ತೇವೆ. ಆದ್ರೆ ಇಲ್ಲೊಂದು ಅದಕ್ಕೆ ತದ್ವಿರುದ್ಧವಾದ ಘಟನೆ ನಡೆದಿದ್ದು, ಹೆಂಡತಿ ಮತ್ತು ಅತ್ತೆಯ ಕಾಟವನ್ನು ತಾಳಲಾರದೆ ಪತಿಯೇ ಸೆಲ್ಫಿ ವಿಡಿಯೋ ಮಾಡಿ ನೇಣಿಗೆ ಶರಣಾಗಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

Viral: ಜೀವನದಲ್ಲಿ ಏನ್​​ ಬೇಕಾದರೂ ಮಾಡಿ ಆದ್ರೆ ದಯವಿಟ್ಟು ಮದುವೆಯಾಗ್ಬೇಡಿ, ಹೆಂಡತಿ ಕಾಟಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಗಂಡ
ವೈರಲ್​​​ ವಿಡಿಯೋ
ಮಾಲಾಶ್ರೀ ಅಂಚನ್​
| Edited By: |

Updated on: Sep 03, 2024 | 3:05 PM

Share

ಹಿಂದೆಲ್ಲಾ ಪುರುಷ ಪ್ರಧಾನ ಸಮಾಜದಲ್ಲಿ ಪತಿ ಹಾಗೂ ಅತ್ತೆ ಮನೆಯವರು ಮದುವೆಯಾಗಿ ಬಂದ ಹೆಣ್ಣಿಗೆ ವಿಪರೀತ ಹಿಂಸೆ ಮತ್ತು ಕಿರುಕುಳವನ್ನು ನೀಡುತ್ತಿದ್ದರು. ಇವರುಗಳ ಕಾಟ ತಾಳಲಾರದೆ ಹೆಣ್ಣು ತವರು ಮನೆಗೆ ಹೋಗುವಂತಹ ಅಥವಾ ಅತ್ಮಹತ್ಯೆ ಮಾಡಿಕೊಳ್ಳುವಂತಹ ಘಟನೆಗಳು ನಡೆಯುತ್ತಿದ್ದವು. ಆದ್ರೆ ಈಗ ಕಾನೂನಿನಲ್ಲಿ ಮಹಿಳೆಯರಿಗೆ ವಿಶೇಷ ನ್ಯಾಯ ಸವಲತ್ತುಗಳನ್ನು ನೀಡಲಾಗಿದ್ದು, ಕೆಲವರು ಇದನ್ನೇ ದುರುಪಯೋಗ ಪಡಿಸಿಕೊಂಡು ತಮ್ಮ ಪತಿಗೆ ಕಿರುಕುಳ ನೀಡುವ ಕೆಲಸವನ್ನು ಮಾಡುತ್ತಿದ್ದಾರೆ. ಹೀಗೆ ಪತ್ನಿಯ ಕಾಟ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ ಕೆಲವು ಘಟನೆಗಳು ಈ ಹಿಂದೆಯೂ ನಡೆದಿದೆ. ಇದೀಗ ಅಂತಹದ್ದೇ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಹೆಂಡತಿ ಮತ್ತು ಅತ್ತೆಯ ಕಾಟವನ್ನು ತಾಳಲಾರದೆ ಪತಿಯೇ ಸೆಲ್ಫಿ ವಿಡಿಯೋ ಮಾಡಿ ನೇಣಿಗೆ ಶರಣಾಗಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ಈ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆದಿದ್ದು, 38 ವರ್ಷದ ಜಗಜಿತ್‌ ಸಿಂಗ್‌ ರಾಣಾ ಎಂಬ ವ್ಯಕ್ತಿ ಪತ್ನಿ ಮತ್ತು ಅತ್ತೆಯ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಜೀವನದಲ್ಲಿ ಎಲ್ಲವನ್ನೂ ಮಾಡಿ ಆದ್ರೆ ದಯವಿಟ್ಟು ಯಾರು ಕೂಡಾ ಮದುವೆಯಾಗುವ ನಿರ್ಧಾರವನ್ನು ಮಾಡಬೇಡಿ ಎಂದು ನೋವಿನಿಂದ ಸೆಲ್ಫಿ ವಿಡಿಯೋ ಮಾಡಿ ಅದನ್ನು ವಾಟ್ಸಾಪ್‌ ಅಲ್ಲಿ ಶೇರ್‌ ಮಾಡಿದ್ದಾರೆ. ನಂತರ ಫ್ಲಾಟ್‌ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಅಕ್ಕಪಕ್ಕದ ಫ್ಲಾಟ್‌ನವರು ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದು, ತಕ್ಷಣ ಸ್ಥಳಕ್ಕಾಗಮಿಸಿ ಮೃತದೇಹವನ್ನು ಹೊರತೆಗೆದಿದ್ದಾರೆ. ಮತ್ತು ತನಿಖೆ ವೇಳೆ ಅವರಿಗೆ ಎರಡು ವಿಡಿಯೋಗಳು ಪತ್ತೆಯಾಗಿವೆ. ಆ ವಿಡಿಯೋದಲ್ಲಿ ನನ್ನ ಆಸ್ತಿಯಲ್ಲಿ ಅವರ್ಯಾರಿಗೂ ಪಾಲನ್ನು ಕೊಡಬೇಡಿ ಮತ್ತು ನನ್ನ ಮೃತದೇಹವನ್ನು ಕೂಡಾ ಅವರಿಗೆ ತೋರಿಸಬೇಡಿ ಎಂದು ಕೋರಿದ್ದಾರೆ. ಇದೀಗ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವ ಮೊದಲುಮೃತ ವ್ಯಕ್ತಿಯ ಕುಟುಂಬದವರು ಲಿಖಿತ ದೂರನ್ನು ನೀಡಲು ಪೊಲೀಸರು ಕಾಯುತ್ತಿದ್ದಾರೆ.

ವೈರಲ್​​​ ವಿಡಿಯೋ ಇಲ್ಲಿದೆ ನೋಡಿ:

ಸಚಿನ್‌ ಗುಪ್ತಾ (Sachin Gupta) ಎಂಬವರು ಸೋಷಿಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ ಎಕ್ಸ್‌ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಜಗಜಿತ್‌ ಸಿಂಗ್‌ ಹೆಂಡತಿ ಮತ್ತು ಅತ್ತೆಯ ಕಾಟದಿಂದ ಬೇಸತ್ತು ಕೊನೆಗೆ ಯಾವುದೇ ದಾರಿ ಕಾಣದೆ ಒತ್ತಡ ಮತ್ತು ಬೇಸರಕ್ಕೆ ಒಳಗಾಗಿ ಜೀವನದಲ್ಲಿ ಏನೂ ಬೇಕಾದ್ರೂ ಮಾಡಿ ಆದ್ರೆ ಮದುವೆಯಾಗ್ಬೇಡಿ ಎಂದು ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆಗೆ ಯತ್ನಿಸಿದ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: 12 ಸಾವಿರ ರೂ. ಸಂಬಳದಲ್ಲಿ 10 ಸಾವಿರ ರೂ. ಮಗುವಿಗೆ ಕೊಟ್ರೆ ಆ ವ್ಯಕ್ತಿಯ ಜೀವನ ಹೇಗೆ? ಪತ್ನಿಗೆ ಕ್ಲಾಸ್‌ ತೆಗೆದುಕೊಂಡ ಕರ್ನಾಟಕ ಹೈಕೋರ್ಟ್‌

ಇಂದು ಮುಂಜಾನೆ ಹಂಚಿಕೊಂಡಿರುವ ಈ ವಿಡಿಯೋ 2 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ‘ಆತ್ಮಹತ್ಯೆ ಮಾಡಿಕೊಳ್ಳುವುದು ತಪ್ಪು ಆದರೆ ಈ ವ್ಯಕ್ತಿಯ ಮಾತು ಸಂಪೂರ್ಣವಾಗಿ ಸರಿ. ಕಾನೂನುಗಳು ಏಕಪಕ್ಷೀಯವಾಗಿರುವುದರಿಂದ ಪುರುಷರ ಜೀವನ ಹಾಳಾಗುತ್ತಿದೆ’ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ‘ಇದು ನಿಜಕ್ಕೂ ಬೇಸರದ ಸಂಗತಿ’ ಎಂದು ಹೇಳಿದ್ದಾರೆ.

ವೈರಲ್​​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ