ಫೋನ್ ಕವರ್‌ನಲ್ಲಿ ದುಡ್ಡು ಅಥವಾ ಯಾವುದೇ ಅಗತ್ಯ ವಸ್ತುಗಳನ್ನು ಇಟ್ಟುಕೊಳ್ಳುವ ಅಭ್ಯಾಸ ನಿಮಗಿದ್ದರೆ ಇಂದೇ ಬಿಟ್ಟು ಬಿಡಿ. ಎಲ್ಲೇ ಹೋಗುವುದಾದರೂ ಫೋನ್ ಕೈಯಲ್ಲೇ ಇರುವುದರಿಂದ ಪರ್ಸ್ ಹಿಡಿದುಕೊಳ್ಳುವ ಬದಲಿಗೆ ದುಡ್ಡು ಅಥವಾ ಕಾರ್ಡುಗಳನ್ನು ಫೋನ್ ಕವರ್‌ನಲ್ಲಿ ಇಟ್ಟುಕೊಳ್ಳುವ ಅಭ್ಯಾಸವನ್ನು ಸಾಕಷ್ಟು ಜನರು ಇಟ್ಟುಕೊಂಡಿರುತ್ತಾರೆ. ಆದರೆ ಇತ್ತೀಚೆಗಷ್ಟೇ ಫೋನ್ ಬಿಸಿಯಿಂದಾಗಿ ನೋಟು ಸುಟ್ಟು ಕರಕಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋ ಇದೀಗಾಗಲೇ 20 ಮಿಲಿಯನ್ಗಿಂತಲೂ ಹೆಚ್ಚಿನ ವೀಕ್ಷಣೆಯನ್ನು ಪಡೆದುಕೊಂಡಿದೆ.
ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗುತ್ತಿರುವ ವೀಡಿಯೊದಲ್ಲಿ, ಮಹಿಳೆಯೊಬ್ಬರು ಫೋನ್‌ನ ಹಿಂಭಾಗದಲ್ಲಿ ನೋಟು ಇಡುವುದು ಅಪಾಯಕಾರಿ ಎಂದು ಹೇಳುತ್ತಿರುವುದು ಕಾಣಬಹುದು. ಯಾಕೆಂದರೆ ಫೋನಿನ ಬಿಸಿಗೆ ನೋಟು ಸುಟ್ಟು ಕರಕಲಾಗಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ನೋಟು ಸುಟ್ಟು ಕರಕಲಾದ ಕಾರಣ ಸಂಪೂರ್ಣ ಛಿದ್ರಗೊಂಡ ಮತ್ತು ಸುಟ್ಟು ಹೋಗಿರುವ ಫೋನ್‌ನ ಚಿತ್ರಗಳನ್ನು ಕ್ಲಿಪ್‌ನಲ್ಲಿ ತೋರಿಸಲಾಗಿದೆ. @anamikaversatile ಎಂಬ ಇನ್ಸ್ಟಾಗ್ರಾಮ್ ಬಳಕೆದಾರರು ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಜೊತೆಗೆ ನೀವು ನಿಮ್ಮ ಫೋನ್ ಕವರ್‌ನಲ್ಲಿ ಹಣವನ್ನು ಇಡುತ್ತಿದ್ದರೆ, ನೀವು ಈ ವೀಡಿಯೊವನ್ನು ನೋಡಲೇಬೇಕು” ಎಂದು ವಿಡಿಯೋಗೆ ಕ್ಯಾಪ್ಷನ್ ಕೂಡ ಬರೆಯಲಾಗಿದೆ.
ಇದನ್ನೂ ಓದಿ: ಸಾಬೂನು ತಿನ್ನುತ್ತಿರುವ ಯುವತಿ; ಹೊಟ್ಟೆಯಲ್ಲಿ ನೊರೆಗುಳ್ಳೆಗಳೆದ್ದವೋ? ಎಂದ ನೆಟ್ಟಿಗರು
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಈ ವಿಡಿಯೋ ಒಂದೇ ವಾರದಲ್ಲಿ 20 ಮಿಲಿಯನ್ಗಿಂತಲೂ ಹೆಚ್ಚಿನ ವೀಕ್ಷಣೆಯನ್ನು ಪಡೆದುಕೊಂಡಿದೆ. ಜೊತೆಗೆ ಸಾಕಷ್ಟು ನೆಟ್ಟಿಗರು ಉಪಯುಕ್ತ ಮಾಹಿತಿ ಎಂದು ಕಾಮೆಂಟ್ ಮಾಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: