ಟೇಕ್-ಆಫ್ ಆದ ಕೆಲ ಹೊತ್ತಿನಲ್ಲೇ ಕಳಚಿ ಬಿತ್ತು ವಿಮಾನದ ಚಕ್ರ; ವಿಡಿಯೋ ವೈರಲ್​​

|

Updated on: Mar 09, 2024 | 2:37 PM

ಟೇಕ್​​ ಆಫ್​​​ ಆದ ಕೆಲ ಹೊತ್ತಿನಲ್ಲೇ ವಿಮಾನದ ಚಕ್ರ ಕಳಚಿ ಬಿದ್ದಿರುವ ಘಟನೆ ಅಮೆರಿಕಾದ ಸ್ಯಾನ್ ಫ್ರಾನ್ಸಿಸ್ಕೊ ​​​​ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ. ವಿಮಾನದಿಂದ ಕಳಚಿ ಬಿದ್ದ ಚಕ್ರವು ಪಾರ್ಕಿಂಗ್​​​ ಏರಿಯಾದಲ್ಲಿ ನಿಲ್ಲಿಸಿದ್ದ ಕಾರಗಳ ಮೇಲೆ ಬಿದ್ದು, ಹಲವಾರು ಕಾರುಗಳು ಹಾನಿಗೊಳಗಾಗಿವೆ.

ಟೇಕ್-ಆಫ್ ಆದ ಕೆಲ ಹೊತ್ತಿನಲ್ಲೇ ಕಳಚಿ ಬಿತ್ತು ವಿಮಾನದ ಚಕ್ರ; ವಿಡಿಯೋ ವೈರಲ್​​
Follow us on

ಟೇಕ್​​ ಆಫ್​​​ ಆದ ಕೆಲ ಹೊತ್ತಿನಲ್ಲೇ ವಿಮಾನದ ಚಕ್ರ ಕಳಚಿ ಬಿದ್ದಿರುವ ಘಟನೆ ಅಮೆರಿಕಾದ ಸ್ಯಾನ್ ಫ್ರಾನ್ಸಿಸ್ಕೊ ​​​​ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಪರಿಣಾಮ ಒಸಾಕಾದಲ್ಲಿ ಲ್ಯಾಂಡ್​​ ಆಗಬೇಕಿದ್ದ ಯುನೈಟೆಡ್ ಏರ್‌ಲೈನ್ಸ್ ನ ಬೋಯಿಂಗ್ ವಿಮಾನವನ್ನು ಕಾರ್ಯ ಪ್ರವೃತ್ತರಾದ ಪೈಲೆಟ್​​​​ ತುರ್ತು ಭೂ ಸ್ಪರ್ಶ ಮಾಡಿದ್ದಾರೆ.

ವಿಮಾನದಿಂದ ಕಳಚಿ ಬಿದ್ದ ಚಕ್ರವು ಪಾರ್ಕಿಂಗ್​​​ ಏರಿಯಾದಲ್ಲಿ ನಿಲ್ಲಿಸಿದ್ದ ಕಾರುಗಳ ಮೇಲೆ ಬಿದ್ದು, ಹಲವಾರು ಕಾರುಗಳು ಹಾನಿಗೊಳಗಾಗಿವೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಹೇಳಿದ್ದಾರೆ.

ವಿಡಿಯೋ ಇಲ್ಲಿದೆ ನೋಡಿ:

@nicksortor ಎಂಬ ಟ್ವಿಟರ್​​ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದು, ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​​ ಆಗಿದೆ. ವಿಡಿಯೋ ಕಂಡು ನೆಟ್ಟಿಗರು ಕಾಮೆಂಟ್​​ ಮೂಲಕ ಪ್ರತಿಕ್ರಿಯೆ ವ್ಯಕ್ತ ಪಡಿಸಿದ್ದಾರೆ.

ಇದನ್ನೂ ಓದಿ: ಇಲ್ಲಿ ಪುರುಷರು ಕಡ್ಡಾಯವಾಗಿ ಎರಡು ಮದುವೆಯಾಗಲೇಬೇಕು! ʼನೋʼ ಅಂದ್ರೆ ಕಠಿಣ ಶಿಕ್ಷೆ

ಇತ್ತೀಚೆಗಷ್ಟೇ ಜನವರಿಯಲ್ಲಿ ಒರೆಗಾನ್‌ನ ಪೋರ್ಟ್‌ಲ್ಯಾಂಡ್‌ನಲ್ಲಿ ವಿಮಾನವು ಟೇಕ್ ಆಫ್ ಆದ ನಂತರ ಬೋಯಿಂಗ್ 737 ಮ್ಯಾಕ್ಸ್ 9 ನ ಬಾಗಿಲಿನ ಗಾತ್ರದ ಫಲಕವು ಕಳಚಿ ಬಿದ್ದು ಭಾರೀ ಸುದ್ದಿಯಾಗಿತ್ತು.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 2:36 pm, Sat, 9 March 24