Video Viral: ಆಸ್ಪತ್ರೆಯಲ್ಲಿದ್ದ ತನ್ನ ಅಭಿಮಾನಿಯನ್ನು ಭೇಟಿಯಾಗಿ ಸರ್ಪ್ರೈಸ್ ಕೊಟ್ಟ ಸುನಿಲ್ ಛೆಟ್ರಿ

ಫುಟ್‌ಬಾಲ್‌ ದಿಗ್ಗಜ ಸುನಿಲ್ ಛೆಟ್ರಿ ಆಸ್ಪತ್ರೆಯಲ್ಲಿದ್ದ ತನ್ನ ಅಭಿಮಾನಿಯೊಬ್ಬರನ್ನು ದಿಢೀರ್ ಭೇಟಿಯಾಗಿ ಸರ್ಪ್ರೈಸ್ ಕೊಟ್ಟಿದ್ದಾರೆ. ಬೆಂಗಳೂರು ಫುಟ್ಬಾಲ್ ಕ್ಲಬ್ ನ ಅಧಿಕೃತ ಇನ್ಸ್ಟಾಗ್ರಾಮ್​​ ಖಾತೆ(@bengalurufc) ಈ ವಿಡಿಯೋವನ್ನು ಹಂಚಿಕೊಂಡಿದ್ದು, ಸದ್ಯ ವಿಡಿಯೋ ಎಲ್ಲೆಡೆ ವೈರಲ್​ ಆಗುತ್ತಿದೆ.

Video Viral: ಆಸ್ಪತ್ರೆಯಲ್ಲಿದ್ದ ತನ್ನ ಅಭಿಮಾನಿಯನ್ನು ಭೇಟಿಯಾಗಿ ಸರ್ಪ್ರೈಸ್ ಕೊಟ್ಟ ಸುನಿಲ್ ಛೆಟ್ರಿ
ಆಸ್ಪತ್ರೆಯಲ್ಲಿದ್ದ ತನ್ನ ಅಭಿಮಾನಿಯನ್ನು ಭೇಟಿಯಾದ ಸುನಿಲ್ ಛೆಟ್ರಿ

Updated on: May 29, 2024 | 10:59 AM

ಫುಟ್‌ಬಾಲ್‌ ದಿಗ್ಗಜ ಹಾಗೂ ಭಾರತ ಫುಟ್‌ಬಾಲ್‌ ತಂಡದ ನಾಯಕ ಸುನಿಲ್ ಛೆಟ್ರಿ(Sunil Chhetri) ಇತ್ತೀಚಿಗಷ್ಟೇ ಅಂತಾರಾಷ್ಟ್ರೀಯ ಫುಟ್‌ಬಾಲ್‌ ವೃತ್ತಿ ಜೀವನಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಇದೀಗ ಆಸ್ಪತ್ರೆಯಲ್ಲಿದ್ದ ತನ್ನ ಅಭಿಮಾನಿಯೊಬ್ಬರನ್ನು ಸುನಿಲ್ ಛೆಟ್ರಿ ಭೇಟಿ ನೀಡಿ ಸರ್ಪ್ರೈಸ್ ಕೊಟ್ಟ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​​ ಆಗುತ್ತಿದೆ. ಬೆಂಗಳೂರು ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿದ್ದ ತನ್ನ ಅಭಿಮಾನಿ ತೇಜಸ್‌ ಎಂಬ ಯುವಕನನ್ನು ಭೇಟಿ ಮಾಡಿ ಆತನ ಆಸೆ ಈಡೇರಿಸಿದ್ದಾರೆ.

ಬೆಂಗಳೂರು ಫುಟ್ಬಾಲ್ ಕ್ಲಬ್ ನ ಅಧಿಕೃತ ಇನ್ಸ್ಟಾಗ್ರಾಮ್​​ ಖಾತೆ(@bengalurufc) ಈ ವಿಡಿಯೋವನ್ನು ಹಂಚಿಕೊಂಡಿದ್ದು, ಸದ್ಯ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ಈ ವಿಡಿಯೋ ಹಂಚಿಕೊಂಡ ಒಂದೇ ದಿನದಲ್ಲಿ 41,495 ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದಲ್ಲದೇ ಈ ವಿಡಿಯೋ 5ಲಕ್ಷಕ್ಕೂ ಹೆಚ್ಚಿನ ವೀಕ್ಷಣೆಯನ್ನು ಪಡೆದುಕೊಂಡಿದೆ. ಇದಲ್ಲದೇ ಛೆಟ್ರಿಯ
ಹೃದಯವಂತಿಕೆಗೆ ಸಾಕಷ್ಟು ನೆಟ್ಟಿಗರಿಂದ ಕಾಮೆಂಟ್​​ ಮೂಲಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ವೈರಲ್​ ವಿಡಿಯೋ ಇಲ್ಲಿದೆ ನೋಡಿ:

 

ಇದನ್ನೂ ಓದಿ: ಅನಂತ್ ಅಂಬಾನಿಯ 2ನೇ ಪ್ರೀ ವೆಡ್ಡಿಂಗ್ ಸಂಭ್ರಮದ ಐಷಾರಾಮಿ ಹಡಗು ಹೇಗಿದೆ ನೋಡಿ

ದೇಶದ ಅತ್ಯುತ್ತಮ ಫುಟ್‌ಬಾಲ್ ಆಟಗಾರನಾಗಿ ಹೆಸರು ಗಳಿಸಿರುವ ಸುನಿಲ್ ಛೆಟ್ರಿ ಭಾರತಕ್ಕಾಗಿ ಆಡಿದ 150 ಪಂದ್ಯಗಳಲ್ಲಿ 94 ಗೋಲುಗಳನ್ನು ಗಳಿಸಿದ್ದಾರೆ. 39 ವರ್ಷ ವಯಸ್ಸಿನ ಅವರು, ಭಾರತೀಯ ಫುಟ್‌ಬಾಲ್‌ ತಂಡದ ಪ್ರಮುಖ ಭಾಗವಾಗಿದ್ದಾರೆ. ಇತ್ತೀಚಿಗಷ್ಟೇ ಜೂನ್ 6 ರಂದು ಕೋಲ್ಕತ್ತಾದ ಸಾಲ್ಟ್ ಲೇಕ್ ಸ್ಟೇಡಿಯಂನಲ್ಲಿ ಕುವೈತ್ ವಿರುದ್ಧ ವಿಶ್ವಕಪ್ ಅರ್ಹತಾ ಪಂದ್ಯಗಳ ಎರಡನೇ ಸುತ್ತಿನಲ್ಲಿ ಸುನಿಲ್ ಛೆಟ್ರಿ ದೇಶಕ್ಕಾಗಿ ತಮ್ಮ ಕೊನೆಯ ಪಂದ್ಯವನ್ನು ಆಡಲು ಸಿದ್ಧವಾಗಿರುವುದಾಗಿ ಘೋಷಿಸಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:49 am, Wed, 29 May 24