Viral Video: ಎಸ್ಕಲೇಟರ್​​​ನಲ್ಲಿ ಮಗುವಿನೊಂದಿಗೆ ಮಹಿಳೆಯರಿಬ್ಬರು ರೀಲ್ಸ್​​; ಮುಂದೇನಾಯಿತು ನೋಡಿ

|

Updated on: Aug 04, 2024 | 12:26 PM

ವಿಡಿಯೋದಲ್ಲಿ ಇಬ್ಬರು ಮಹಿಳೆಯರು ಮಗುವನ್ನು ಹಿಡಿದುಕೊಂಡು ಎಸ್ಕಲೇಟರ್ ಹತ್ತುತ್ತಿರುವುದನ್ನು ಕಾಣಬಹುದು. ಈ ಸಮಯದಲ್ಲಿ, ಮಹಿಳೆ ಮೆಟ್ಟಿಲುಗಳ ಮೇಲೆ ಕುಳಿತುಕೊಳ್ಳಲು ಪ್ರಯತ್ನಿಸಿದ್ದು, ನಿಯಂತ್ರಣ ತಪ್ಪಿ ಮಗುವಿನ ಜೊತೆಗೆ ಮಹಿಳೆಯರಿಬ್ಬರು ಕೆಳಗೆ ಬಿದ್ದಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.

Viral Video: ಎಸ್ಕಲೇಟರ್​​​ನಲ್ಲಿ  ಮಗುವಿನೊಂದಿಗೆ ಮಹಿಳೆಯರಿಬ್ಬರು  ರೀಲ್ಸ್​​; ಮುಂದೇನಾಯಿತು ನೋಡಿ
Follow us on

ರೈಲು, ಬಸ್ ನಿಲ್ದಾಣ, ಮಾಲ್‌ಗಳು ಮುಂತಾದ ಸ್ಥಳಗಳಲ್ಲಿ ಎಸ್ಕಲೇಟರ್‌ ಇರುವುದನ್ನು ಕಾಣಬಹುದು. ಪ್ರಯಾಣಿಕರಿಗೆ ಮೆಟ್ಟಿಲುಗಳನ್ನು ಸುಲಭವಾಗಿ ಹತ್ತಲು ಈ ಸೌಕರ್ಯ ಒದಗಿಸಲಾಗುತ್ತದೆ. ಆದರೆ ಸಾಕಷ್ಟು ಜನರು ದುರ್ಬಳಕೆ ಮಾಡುವುದುಂಟು. ಇದೀಗ ಅಂತದ್ದೇ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದೆ. ಮಹಿಳೆಯರಿಬ್ಬರು ಮಗುವಿನೊಂದಿಗೆ ಎಸ್ಕಲೇಟರ್​​​ನಲ್ಲಿ ರೀಲ್ಸ್​​ ಮಾಡಲು ಮುಂದಾಗಿದ್ದಾರೆ. ಚಲಿಸುತ್ತಿರುವ ಎಸ್ಕಲೇಟರ್​​​ನಲ್ಲಿ ಕುಳಿತುಕೊಳ್ಳಲು ಪ್ರಯತ್ನಿಸಿದ್ದಾರೆ.

@divyakumaari ಎಂಬ ಟ್ವಿಟರ್​​ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ವಿಡಿಯೋ ಎಲ್ಲೆಡೆ ವೈರಲ್​​ ಆಗಿದೆ. ವಿಡಿಯೋದಲ್ಲಿ ಇಬ್ಬರು ಮಹಿಳೆಯರು ಮಗುವನ್ನು ಹಿಡಿದುಕೊಂಡು ಎಸ್ಕಲೇಟರ್ ಹತ್ತುತ್ತಿರುವುದನ್ನು ಕಾಣಬಹುದು. ಈ ಸಮಯದಲ್ಲಿ, ಮಹಿಳೆ ಮೆಟ್ಟಿಲುಗಳ ಮೇಲೆ ಕುಳಿತುಕೊಳ್ಳಲು ಪ್ರಯತ್ನಿಸಿದ್ದು, ನಿಯಂತ್ರಣ ತಪ್ಪಿ ಮಗುವಿನ ಜೊತೆಗೆ ಮಹಿಳೆಯರಿಬ್ಬರು ಬೀಳುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಇದನ್ನೂ ಓದಿ: ‘ಇದು ಮದರಸಾ ಅಲ್ಲ, ಕಾಲೇಜು’ ಗಡ್ಡ ಬಿಟ್ಟ ವಿದ್ಯಾರ್ಥಿಯನ್ನು ಹೊರದಬ್ಬಿದ ಪ್ರಾಂಶುಪಾಲ

ಆಗಸ್ಟ್​​​ 02ರಂದು ಹಂಚಿಕೊಂಡಿರುವ ವಿಡಿಯೋ ಕೇವಲ ಎರಡು ದಿನಗಳಲ್ಲಿ 8ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ. ವಿಡಿಯೋ ವೈರಲ್​​ ಆಗುತ್ತಿದ್ದಂತೆ ಸಾಕಷ್ಟು ನೆಟ್ಟಿಗರು ಕಾಮೆಂಟ್​​ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಸಾರ್ವಜನಿಕ ಸ್ಥಳಗಳಲ್ಲಿ ರೀಲ್ಸ್​​ ಹುಚ್ಚಾಟ ಬಿಟ್ಟುಬಿಡಿ” ಎಂದು ಸಾಕಷ್ಟು ನೆಟ್ಟಿಗರು ಕಾಮೆಂಟ್​​​ನಲ್ಲಿ ಬರೆದುಕೊಂಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ