Video Viral: ಬಾವಲಿಯ ಸೂಪ್​​ ತಯಾರಿಸುತ್ತಿರುವ ಮಹಿಳೆ; ವಿಡಿಯೋ ವೈರಲ್​​

ವೈರಲ್​​ ಆಗಿರುವ ವಿಡಿಯೋದಲ್ಲಿ ಮಹಿಳೆ ಸತ್ತ ಬಾವಲಿಯನ್ನು ಹಿಡಿದು ಸೂಪ್​​ ತಯಾರಿಸುವ ವಿಧಾನವನ್ನು ವಿವರಿಸುತ್ತಿರುವುದನ್ನು ಕಾಣಬಹುದು. ಪ್ರಾರಂಭದಲ್ಲಿ ಬಾವಲಿಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ, ನೀರಿನಲ್ಲಿ ಬೇಯಿಸುತ್ತಿರುವುದನ್ನು ತೋರಿಸಲಾಗಿದೆ.

Video Viral: ಬಾವಲಿಯ ಸೂಪ್​​ ತಯಾರಿಸುತ್ತಿರುವ ಮಹಿಳೆ; ವಿಡಿಯೋ ವೈರಲ್​​
ಬಾವಲಿಯ ಸೂಪ್​​ ತಯಾರಿಸುತ್ತಿರುವ ಮಹಿಳೆ

Updated on: Jun 18, 2024 | 4:40 PM

ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಅದರಲ್ಲಿ ಮಹಿಳೆಯೊಬ್ಬರು ಬಾವಲಿಯ ಸೂಪ್​ ತಿನ್ನುತ್ತಿರುವುದನ್ನು ಕಾಣಬಹುದು. ಇದಷ್ಟೇ ಅಲ್ಲದೆ, ತನ್ನ ಮಕ್ಕಳಿಗೂ ಬಾವಲಿ ಮಾಂಸವನ್ನು ಊಟಕ್ಕೆ ಬಡಿಸುತ್ತಿರುವುದನ್ನು ಕಾಣಬಹುದು. ಸದ್ಯ ವಿಡಿಯೋ ಎಲ್ಲೆಡೆ ವೈರಲ್​​​ ಆಗುತ್ತಿದ್ದಂತೆ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.

ವೈರಲ್​​ ಆಗಿರುವ ವಿಡಿಯೋದಲ್ಲಿ ಮಹಿಳೆ ಸತ್ತ ಬಾವಲಿಯನ್ನು ಹಿಡಿದು ಸೂಪ್​​ ತಯಾರಿಸುವ ವಿಧಾನವನ್ನು ವಿವರಿಸುತ್ತಿರುವುದನ್ನು ಕಾಣಬಹುದು. ಪ್ರಾರಂಭದಲ್ಲಿ ಬಾವಲಿಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ, ನೀರಿನಲ್ಲಿ ಬೇಯಿಸುತ್ತಿರುವುದನ್ನು ತೋರಿಸಲಾಗಿದೆ. ಸ್ವಲ್ಪ ಹೊತ್ತಿನ ಬಳಿಕ ರುಚಿ ನೋಡುತ್ತಿರುವುದನ್ನು ಕಾಣಬಹುದು. ತಾನು ತಿನ್ನುವುದಲ್ಲದೇ ತನ್ನ ಮಕ್ಕಳಿಗೆ ಅನ್ನದ ಜೊತೆಗೆ ಬಾವಲಿಯ ಮಾಂಸ ವನ್ನು ಬಡಿಸಿದ್ದಾಳೆ. ಮಕ್ಕಳು ಬಾರಿ ಚಪ್ಪರಿಸಿಕೊಂಡು ತಿನ್ನುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ವೈರಲ್​​​ ವಿಡಿಯೋ ಇಲ್ಲಿದೆ ನೋಡಿ:

ಇದನ್ನೂ ಓದಿ: ಮದುವೆ ಮನೆಯಿಂದಲೇ ವಧುವನ್ನು ಹೊತ್ಯೊಯ್ದ ನಾಲ್ವರು ಯುವಕರು

@emak_pangeran ಎಂಬ ಹೆಸರಿನ ಇನ್ಸ್ಟಾಗ್ರಾಮ್​​ ಖಾತೆಯಲ್ಲಿ ಜೂನ್​​​ 5ರಂದು ವಿಡಿಯೋ ಹಂಚಿಕೊಳ್ಳಲಾಗಿದೆ. ಇಲ್ಲಿಯವರೆಗೆ ವಿಡಿಯೋ 1.9ಅಂದರೆ ಅಂದರೆ 19ಲಕ್ಷ ವೀಕ್ಷಣೆಯನ್ನು ಪಡೆದುಕೊಂಡಿದೆ. ಇವರ ವಿಚಿತ್ರ ಆಹಾರ ಪದ್ದತಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 4:38 pm, Tue, 18 June 24