Brain Teaser: ಸಾಮಾಜಿಕ ಮಾಧ್ಯಮದಲ್ಲಿ ಈ ಬ್ರೇನ್ ಟೀಸರ್ ಸಾಕಷ್ಟು ವೈರಲ್ (Viral) ಆಗುತ್ತಿದೆ. ನೆಟ್ಟಿಗರು ತಲೆ ಕೆಡಿಸಿಕೊಂಡು ಇದಕ್ಕೆ ಉತ್ತರ ಕಂಡುಕೊಳ್ಳುವಲ್ಲಿ ಪ್ರಯತ್ನಿಸುತ್ತಿದ್ದಾರೆ. ನೀವು ಖಂಡಿತ ಈ ಸಮಸ್ಯೆಗೆ ಸರಿಯಾದ ಉತ್ತರ ಕಂಡುಕೊಳ್ಳುತ್ತೀರಿ ಎನ್ನುವ ಭರವಸೆ ನಮಗಿದೆ. ಇದೊಂದು ಮೋಜಿನ ಗಣಿತ. ಇದು ಸಂಖ್ಯೆಗಳ ಸರಣಿಯಾದರಿಸಿ ರಚನೆಗೊಂಡಿದೆ. ಕೊನೆಯಲ್ಲಿ ಕಾಣೆಯಾದ ಒಂದು ಸಂಖ್ಯೆಯನ್ನು ಊಹಿಸುವುದೇ ನಿಮಗಿರುವ ಸವಾಲು. ಬುದ್ಧಿವಂತರಾದ ನೀವು ಅತ್ಯಂತ ಶೀಘ್ರವೇ ಇದಕ್ಕೆ ಉತ್ತರವನ್ನು ಕಂಡುಹಿಡಿಯುತ್ತೀರಿ.
ಇದನ್ನೂ ಓದಿ : Viral Video: ಈ ಮೊಸಳೆಗೆ ಈ ಮನುಷ್ಯನನ್ನು ಮುದ್ದಾಡಬೇಕು ಎನ್ನಿಸಿತು, ಮುಂದೆ?
1, 2, 3, 4 ಮತ್ತು 5 ಸಂಖ್ಯೆಗಳನ್ನು ಇದು ತೋರಿಸಿದೆ. ಸಂಖ್ಯೆ 5 ರ ಮುಂದೆ ಬರೆಯಬೇಕಾದ ಸಂಖ್ಯೆಯನ್ನು ನಿರ್ಧರಿಸುವುದು ನಿಮ್ಮ ಕೆಲಸ. ಆ ಸಂಖ್ಯೆ 6 ಎಂದು ನೀವು ಭಾವಿಸಿದರೆ ಖಂಡಿತ ಆ ಉತ್ತರ ತಪ್ಪು. ಈ ಬ್ರೈನ್ ಟೀಸರ್ ಅನ್ನು ಅಕ್ಟೋಬರ್ 30 ರಂದು Xನಲ್ಲಿ ಹಂಚಿಕೊಳ್ಳಲಾಗಿದೆ. ಈತನಕ ಸುಮಾರು 44,000 ಜನರು ನೋಡಿದ್ದಾರೆ. ಅನೇಕರು ಉತ್ತರಿಸಲು ಪ್ರಯತ್ನಿಸಿದ್ದಾರೆ.
Another brain teaser… let’s see who he smart pic.twitter.com/Jnuq8PR8xl
— penthouse🍑 (@doglovers75) October 29, 2023
ಸಾಕಷ್ಟು ಜನರು ಉತ್ತರ 6 ಎಂದೇ ಹೇಳಿದ್ದಾರೆ. ಇದು ಮ್ಯಾನ್ಯುವಲ್ ಕಾರ್ ಗೇರ್ ಸ್ಟಿಕ್ ಎಂದಿದ್ದಾರೆ ಒಬ್ಬರು. ರೇಸ್ ಮೋಡ್ ಎಂದಿದ್ದಾರೆ ಇನ್ನೊಬ್ಬರು. ಮತ್ತೊಬ್ಬರು 2 ಎಂದಿದ್ದಾರೆ. ಕೆಲವೊಬ್ಬರು R ಎಂದಿದ್ದಾರೆ ಇನ್ನೂ ಕೆಲವರು 8 ಎಂದಿದ್ದಾರೆ. ಒಟ್ಟಿನಲ್ಲಿ ಒಬ್ಬೊಬ್ಬರು ಒಂದೊಂದು ಉತ್ತರ ಹೇಳಿದ್ದಾರೆ ಮತ್ತು ಊಹಿಸಿದ್ದಾರೆ.
ಇದನ್ನು ಓದಿ : Viral Video: ಇದು ಪಾಸ್ಪೋರ್ಟ? ಫೋನ್ ನಂಬರ್, ಲೆಕ್ಕಗಿಕ್ಕ ನೋಡಿ ದಿಗ್ಭ್ರಾಂತನಾದ ಅಧಿಕಾರಿ
ಹಾಗಿದ್ದರೆ ಈ ಬ್ರೇನ್ ಟೀಸರ್ ಅನ್ನು ನೀವು ಯಾವ ರೀತಿಯಿಂದ ನೋಡುತ್ತೀರಿ, ನಿಮ್ಮ ಮನಸ್ಸಿನಲ್ಲಿ ಏನು ಉತ್ತರಗಳು ಹೊಳೆಯುತ್ತಿವೆ? ನಿಮಗೆ ಗೊಂದಲವೆನ್ನಿಸಿದರೆ ನಿಮ್ಮ ಆಪ್ತರ ಬಳಿ, ಸ್ನೇಹಿತರ ಬಳಿ, ಮನೆಮಂದಿಯ ಬಳಿ, ಸಹೋದ್ಯೋಗಿಗಳ ಬಗ್ಗೆ ಚರ್ಚಿಸಿ. ನೀವಷ್ಟೇ ಏಕೆ? ಅವರ ಮೆದುಳಿನೊಳಗೂ ಈ ಮೋಜಿನ ಗಣಿತದ ಹುಳ ಬಿಡಿ!
ಏನಂತೀರಿ?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ