ಕ್ಯಾನ್ಸರ್ ಪೀಡಿತ ಗಂಡನನ್ನು ಬದುಕುಳಿಸಲು ಜೀವನವನ್ನೇ ಮುಡಿಪಾಗಿಟ್ಟಿದ್ದ ಮಹಿಳೆಯೊಬ್ಬಳ ಸ್ಪೂರ್ತಿದಾಯಕ ಕಥೆ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗಿತ್ತು. ಆದರೆ ಇದೀಗ ಆಕೆಯ ಪತಿ ಹಲವು ವರ್ಷಗಳಿಂದ ಕ್ಯಾನ್ಸರ್ ವಿರುದ್ಧ ಹೋರಾಟ ನಡೆಸಿ ಸಾವನ್ನಪ್ಪಿರುವುದಾಗಿ ವರದಿಯಾಗಿದೆ. ಕ್ಯಾನ್ಸರ್ ಪೀಡಿತ ಗಂಡನನ್ನು ಮಗುವಿನಂತೆ ಆರೈಕೆ ಮಾಡುತ್ತಿದ್ದ ಈ ಮಹಿಳೆಗೆ ನೆಟ್ಟಿಗರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಆಕೆಯ ಗಂಡ ಬೇಗ ಗುಣಮುಖವಾಗಲಿ ಎಂದು ಕೋಟ್ಯಾಂತರ ನೆಟ್ಟಿಗರು ಪ್ರಾರ್ಥನೆ ಮಾಡಿದ್ದರು. ಆದರೆ ಇದೀಗ ಪ್ರಾರ್ಥನೆ ಫಲಿಸದೇ ಇಹಲೋಕ ತ್ಯಜಿಸಿರುವುದು ದು:ಖದ ಸಂಗತಿ.
ಪರಸ್ಪರ ಪ್ರೀತಿಸಿ ,ಮದುವೆಯಾಗಿದ್ದ ಬಿಬೆಕ್ ಪಂಗೇನಿ ಹಾಗೂ ಸೃಜನ ಸುಬೇದಿ ಅವರ ಜೀವನ ಚೆನ್ನಾಗಿಯೇ ಇತ್ತು. ಆದರೆ ಇದ್ದಕ್ಕಿದ್ದಂತೆ ಗಂಡನಿಗೆ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ. ಆದರೂ ಕೂಡ ತನ್ನ ನೋವನ್ನೆಲ್ಲಾ ನುಂಗಿ ಸುಬೇದಿ ತನ್ನ ಗಂಡನಿಗೆ ಧೈರ್ಯ ನೀಡಿದ್ದಾಳೆ. ಇದಲ್ಲದೇ ತನ್ನ ನೋವನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳುತ್ತಿದ್ದ ಈಕೆಗೆ ಸಾಕಷ್ಟು ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗಿತ್ತು. ಇದೀಗ ಆಕೆಯ ಗಂಡ ಸಾವನ್ನಪ್ಪಿರುವುದಾಗಿ ಅನೇಕ ಮಾಧ್ಯಮಗಳು ವರದಿ ಮಾಡಿದೆ. ಈ ಕುರಿತು ಅಧಿಕೃತ ಮಾಹಿತಿ ಹೊರಬಂದಿಲ್ಲ.
ಇತ್ತೀಚಿಗಷ್ಟೇ ಕೊನೆಯದಾಗಿ ಗಂಡನ ಜೊತೆಗಿನ ವಿಡಿಯೋ ಹಂಚಿಕೊಂಡಿದ್ದ ಸೃಜನ ಸುಬೇದಿ. ವಿಡಿಯೋ ಇಲ್ಲಿದೆ ನೋಡಿ:
ಬಿಬೆಕ್ ಪಂಗೇನಿಯ ಸಾವಿನ ಕುರಿತು @viralbhayani ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ಪೋಸ್ಟ್ ಇಲ್ಲಿದೆ ನೋಡಿ:
ಇದನ್ನೂ ಓದಿ: ನ್ಯಾಯ ಕೇಳಲು ಬಂದ ವ್ಯಕ್ತಿಗೆ ವಿಚಾರಣೆಗೆಗೂ ಮೊದಲೇ ಮನಬಂದಂತೆ ಥಳಿಸಿದ ಪೊಲೀಸ್
ನೇಪಾಳದ ನಿವಾಸಿಯಾಗಿರುವ ಈ ಜೋಡಿ, ಅಮೆರಿಕದಲ್ಲಿ ನೆಲೆಸಿದ್ದರು. ಮೃತ ಬಿಬೆಕ್ ಪಂಗೇನಿ ಜಾರ್ಜಿಯಾ ವಿಶ್ವವಿದ್ಯಾನಿಲಯದಲ್ಲಿ ಭೌತಶಾಸ್ತ್ರ ಮತ್ತು ಖಗೋಳಶಾಸ್ತ್ರದಲ್ಲಿ ಪಿಎಚ್‌ಡಿ ವಿದ್ಯಾರ್ಥಿಯಾಗಿದ್ದರು . ನಿರಂತರ ಹೋರಾಟ ಮತ್ತು ಸ್ನೇಹಿತರು, ಕುಟುಂಬ ಮತ್ತು ವೈದ್ಯಕೀಯ ತಂಡದ ಬೆಂಬಲದ ಹೊರತಾಗಿಯೂ, ಬಿಬೇಕ್ ಸಾವನ್ನಪ್ಪಿರುವುದು ಆಘಾತವುಂಟು ಮಾಡಿದೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:12 pm, Fri, 20 December 24