ಇಷ್ಟು ವರ್ಷ ಬೆಂಗಳೂರಲ್ಲಿದ್ದು ಕನ್ನಡ ಬರಲ್ವಾ? ದಿಲ್ಲಿಗೆ ಬನ್ನಿ ಎಂದ ಕಾರ್ಸ್24 ಸಿಇಒ; ಆನ್​ಲೈನ್​ನಲ್ಲಿ ಸಖತ್ ಚರ್ಚೆ

Cars24 CEO Vikram Chopra: ಯೂಸ್ಡ್ ಕಾರುಗಳ ಆನ್​ಲೈನ್ ಪ್ಲಾಟ್​ಫಾರ್ಮ್ ಆದ ಕಾರ್ಸ್24 ಕಂಪನಿಯ ಸಿಇಒ ವಿಕ್ರಮ್ ಚೋಪ್ರಾ ಅವರು ಬೆಂಗಳೂರು ವರ್ಸಸ್ ದಿಲ್ಲಿ ಚರ್ಚೆ ಹುಟ್ಟುಹಾಕಿದ್ದಾರೆ. ಬೆಂಗಳೂರಿಗಿಂತ ದಿಲ್ಲಿ ಚಂದ ಅನ್ನೋದು ಸತ್ಯದ ಸಂಗತಿ ಎಂದಿದ್ದಾರೆ. ಅವರ ಈ ಪೋಸ್ಟ್​ಗೆ ಆನ್​ಲೈನ್​ನಲ್ಲಿ ಪರ ವಿರೋಧ ಚರ್ಚೆಗಳು ಸಾಕಷ್ಟಾಗುತ್ತಿವೆ. ಅವರ ಅಭಿಪ್ರಾಯ ವಿರೋಧಿಸಿ ಹಲವು ಕಾಮೆಂಟಿಸಿದ್ದಾರೆ.

ಇಷ್ಟು ವರ್ಷ ಬೆಂಗಳೂರಲ್ಲಿದ್ದು ಕನ್ನಡ ಬರಲ್ವಾ? ದಿಲ್ಲಿಗೆ ಬನ್ನಿ ಎಂದ ಕಾರ್ಸ್24 ಸಿಇಒ; ಆನ್​ಲೈನ್​ನಲ್ಲಿ ಸಖತ್ ಚರ್ಚೆ
ವಿಕ್ರಮ ಚೋಪ್ರಾ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 20, 2024 | 3:56 PM

ನವದೆಹಲಿ, ಡಿಸೆಂಬರ್ 20: ಸೆಕೆಂಡ್ ಹ್ಯಾಂಡ್ ಕಾರುಗಳ ಮಾರಾಟದ ಆನ್​ಲೈನ್ ಪ್ಲಾಟ್​ಫಾರ್ಮ್ ಆದ ಕಾರ್ಸ್24 ಕಂಪನಿಯ ಸಿಇಒ ವಿಕ್ರಮ್ ಚೋಪ್ರಾ ಸೋಷಿಯಲ್ ಮೀಡಿಯಾದಲ್ಲಿ ಬೆಂಗಳೂರು ಹಾಗೂ ಕನ್ನಡದ ಬಗ್ಗೆ ಹಾಕಿದ ಪೋಸ್ಟ್​ವೊಂದು ವೈರಲ್ ಆಗುತ್ತಿದೆ. ಬೆಂಗಳೂರಿಗಿಂತ ದಿಲ್ಲಿ ಚಂದ ಅನ್ನೋದು ಸತ್ಯ ಎಂದು ಹೇಳಿ ದಿಲ್ಲ ವರ್ಸಸ್ ಬೆಂಗಳೂರು; ಹಾಗೂ ಹಿಂದಿ ವರ್ಸಸ್ ಕನ್ನಡದ ಡಿಬೇಟ್​ಗೆ ಮತ್ತೆ ನಾಂದಿ ಹಾಡಿದ್ದಾರೆ.

‘ದೆಹಲಿ ಎನ್​ಸಿಆರ್ ಉತ್ತಮ ಎಂದು ನಾವು ಹೇಳುತ್ತಿಲ್ಲ. ನಿಜವಾಗಿಯೂ ಅದು ಉತ್ತಮವೇ,’ ಎಂದು ವಿಕ್ರಮ್ ಚೋಪ್ರಾ ತಮ್ಮ ಪೋಸ್ಟ್​ನ ಆರಂಭದಲ್ಲೇ ತಿಳಿಸಿ ಕಿಡಿ ಹಚ್ಚಿದ್ದಾರೆ. ನೀವು ದಿಲ್ಲಿಗೆ ಮರಳಲು ಬಯಸುವುದಾದರೆ ‘ದೆಹಲಿ ಮೇರಿ ಜಾನ್’ ಎನ್ನುವ ವಿಷಯದೊಂದಿಗೆ ನನಗೆ ಬರೆಯಿರಿ ಎಂದು ಅವರು ತಮ್ಮ ಇಮೇಲ್ ವಿಳಾಸ ನೀಡಿದ್ಧಾರೆ ಈ ಪೋಸ್ಟ್​ನಲ್ಲಿ ಅವರು ಗ್ರಾಫಿಕ್ಸ್​ವೊಂದನ್ನೂ ಲಗತ್ತಿಸಿದ್ದಾರೆ.

ಇದನ್ನೂ ಓದಿ: ಕ್ಯಾನ್ಸರ್ ಪೀಡಿತ ಗಂಡನನ್ನು ಬದುಕುಳಿಸಲು ಜೀವನವನ್ನೇ ಮುಡಿಪಾಗಿಟ್ಟಿದ್ದ ಪತ್ನಿ; ಫಲಿಸಲಿಲ್ಲ ಪ್ರಾರ್ಥನೆ

ಬೆಂಗಳೂರಲ್ಲಿದ್ದೂ ಕನ್ನಡ ಬರುತ್ತಿಲ್ಲವಾ?

‘ಹಲವು ವರ್ಷಗಳ ಕಾಲ ಬೆಂಗಳೂರಿನಲ್ಲಿದ್ದು ಇನ್ನೂ ಕೂಡ ಕನ್ನಡ ಮಾತನಾಡಲು ಬರುವುದಿಲ್ಲವಾ? ಪರವಾಗಿಲ್ಲ, ದಿಲ್ಲಿಗೆ ಬನ್ನಿರಿ. ಮನೆಯ ಸಮೀಪ ಉಳಿಯಲು ಬಯಸುವ ಎಂಜಿನಿಯರುಗಳು ನಮಗೆ ಬೇಕಾಗಿದ್ದಾರೆ’ ಎಂದು ಕಾರ್ಸ್24 ಕಂಪನಿಯ ಸಿಇಒ ತಮ್ಮ ಪೋಸ್ಟ್​ಗೆ ಲಗತ್ತಿಸಿರುವ ಗ್ರಾಫಿಕ್ ಫೋಟೋದಲ್ಲಿ ಬರೆಯಲಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಈ ಪೋಸ್ಟ್​ನಿಂದ ಸಾಕಷ್ಟು ಪರ ವಿರೋಧ ಚರ್ಚೆಗಳಾಗಿವೆ. ದೆಹಲಿ ಚೆನ್ನಾಗಿದೆ. ಆದರೆ, ಬೆಂಗಳೂರಿಗಿಂತ ಉತ್ತಮ ಎಂದು ಕರೆಯುವುದಾದರೆ ಕ್ರೈಮ್ ಇತ್ಯಾದಿ ವಾಸ್ತವ ಸಂಗತಿಯನ್ನೂ ಪರಿಗಣಿಸಿ ಎಂದು ಕೆಲವರು ಹೇಳೀದ್ದಾರೆ.

ಇದನ್ನೂ ಓದಿ: ಕೈಗೆ ಬಂದ ತುತ್ತು ಬಾಯಿಗೆ ಬರ್ಲಿಲ್ಲ, ಕೇವಲ ಐದು ತಾಸು 87 ಕೋಟಿಯ ಒಡೆಯನಾಗಿದ್ದ 9ನೇ ತರಗತಿ ಬಾಲಕ

ಈ ಪೋಸ್ಟ್ ಸಮಂಜಸ ಎನಿಸುತ್ತಿಲ್ಲ. ಕಂಪನಿಯ ಗುಣಗಳನ್ನು ಇದಕ್ಕಿಂತ ಉತ್ತಮ ರೀತಿಯಲ್ಲಿ ಎತ್ತಿ ಹೇಳಬಹುದಿತ್ತು ಎಂದು ಒಬ್ಬರು ಕಾಮೆಂಟಿಸಿದ್ಧಾರೆ.

ಪ್ರಾದೇಶಿಕ ಮತ್ತು ಭಾಷಾ ಒಡಕು ಸೃಷ್ಟಿಸುವುದು ಸರಿಯಾಗಿ ಕಾಣುತ್ತಿಲ್ಲ. ಒಗ್ಗೂಡಿ ಇರಬೇಕಾದ ಸಂದರ್ಭದಲ್ಲಿ ಇದು ಬೇಕಾಗಿಲ್ಲ ಎಂದಿದ್ದಾರೆ ಮತ್ತೊಬ್ಬರು.

ಇನ್ನಷ್ಟು ಟ್ರೆಂಡ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಮಾಜಿ ಗೃಹ ಸಚಿವನಾದ ತನ್ನನ್ನು ಠಾಣೆಯೊಳಗೆ ಬರಗೊಡಲಿಲ್ಲ: ಅಶೋಕ
ಮಾಜಿ ಗೃಹ ಸಚಿವನಾದ ತನ್ನನ್ನು ಠಾಣೆಯೊಳಗೆ ಬರಗೊಡಲಿಲ್ಲ: ಅಶೋಕ
ನೀರಾಹಾರವಿಲ್ಲದೆ ರವಿ ದೈಹಿಕ ಮತ್ತು ಮಾನಸಿಕವಾಗಿ ವಿಪರೀತ ಬಳಲಿದ್ದಾರೆ: ವಕೀಲ
ನೀರಾಹಾರವಿಲ್ಲದೆ ರವಿ ದೈಹಿಕ ಮತ್ತು ಮಾನಸಿಕವಾಗಿ ವಿಪರೀತ ಬಳಲಿದ್ದಾರೆ: ವಕೀಲ
ನಾವು ಠಾಣೆಗೆ ಹೋಗಿದ್ದನ್ನು ಪ್ರಶ್ನಿಸಲು ಶಿವಕುಮಾರ್ ಯಾರು? ಅಶೋಕ
ನಾವು ಠಾಣೆಗೆ ಹೋಗಿದ್ದನ್ನು ಪ್ರಶ್ನಿಸಲು ಶಿವಕುಮಾರ್ ಯಾರು? ಅಶೋಕ
ರವಿ ತಲೆಗೆ ಗಾಯ ಯಾಕೆ, ಹಲ್ಲೆ ಮಾಡಿದ್ಯಾರು? ಪರಮೇಶ್ವರ್ ಹೇಳಿದ್ದೇನು ನೋಡಿ
ರವಿ ತಲೆಗೆ ಗಾಯ ಯಾಕೆ, ಹಲ್ಲೆ ಮಾಡಿದ್ಯಾರು? ಪರಮೇಶ್ವರ್ ಹೇಳಿದ್ದೇನು ನೋಡಿ
ರವಿಯವರನ್ನು ಇವತ್ತು ಕೋರ್ಟ್ ಮುಂದೆ ಹಾಜರುಪಡಿಸಲಾಗುತ್ತದೆ: ಪರಮೇಶ್ವರ್
ರವಿಯವರನ್ನು ಇವತ್ತು ಕೋರ್ಟ್ ಮುಂದೆ ಹಾಜರುಪಡಿಸಲಾಗುತ್ತದೆ: ಪರಮೇಶ್ವರ್
ಅಶ್ಲೀಲ ಪದ ಬಳಕೆ: ಸದನದಲ್ಲಿ ನಡೆದಿದ್ದೇನು? ಹೆಬ್ಬಾಳ್ಕರ್​ ಹೇಳಿದ್ದಿಷ್ಟು
ಅಶ್ಲೀಲ ಪದ ಬಳಕೆ: ಸದನದಲ್ಲಿ ನಡೆದಿದ್ದೇನು? ಹೆಬ್ಬಾಳ್ಕರ್​ ಹೇಳಿದ್ದಿಷ್ಟು
ಚಿಕ್ಕಮಗಳೂರಲ್ಲಿ ಕೊಳಕು ಬಾಯಿ ರವಿ ಬಿಟ್ಟರೆ ಬೇರೆಲ್ಲ ಸಂಸ್ಕಾರವಂತರು:ಡಿಕೆಶಿ
ಚಿಕ್ಕಮಗಳೂರಲ್ಲಿ ಕೊಳಕು ಬಾಯಿ ರವಿ ಬಿಟ್ಟರೆ ಬೇರೆಲ್ಲ ಸಂಸ್ಕಾರವಂತರು:ಡಿಕೆಶಿ
ಇದೇನು ತಾಲಿಬಾಲಿಗಳ ಸರ್ಕಾರವಾ? ದೌರ್ಜನ್ಯ ನಡೆಯಲ್ಲ: ಆರ್ ಅಶೋಕ
ಇದೇನು ತಾಲಿಬಾಲಿಗಳ ಸರ್ಕಾರವಾ? ದೌರ್ಜನ್ಯ ನಡೆಯಲ್ಲ: ಆರ್ ಅಶೋಕ
"ನನ್ನ ಕೊಲೆ ಮಾಡುವ ಸಂಚು ನಡೆಸಿದ್ದೀರಿ" ಪೊಲೀಸರ ವಿರುದ್ಧ ಸಿಟಿ ರವಿ ಗರಂ
ಎಲ್​ಪಿಜಿ- ಸಿಎನ್​ಜಿ ಟ್ರಕ್ ನಡುವೆ ಅಪಘಾತ, ಬೆಂಕಿ, ನಾಲ್ವರು ಸಜೀವ ದಹನ
ಎಲ್​ಪಿಜಿ- ಸಿಎನ್​ಜಿ ಟ್ರಕ್ ನಡುವೆ ಅಪಘಾತ, ಬೆಂಕಿ, ನಾಲ್ವರು ಸಜೀವ ದಹನ