Viral: ಲೆಕ್ಕಕ್ಕೆ ಸಿಗದಷ್ಟು ಹಣದಲ್ಲಿ ನಡೆದ ಅದ್ದೂರಿ ಮದುವೆಗಳು; ವೆಡ್ಡಿಂಗ್ ಪ್ಲ್ಯಾನರ್‌ಗಳ ಮೇಲೆ ಐಟಿ ದಾಳಿ
2024 ರ ಈ ವರ್ಷ ಸಾಕಷ್ಟು ಮದುವೆಗಳು ನಡೆದಿರುವುದು ನಿಮಗೂ ಕೂಡಾ ಗೊತ್ತಿದೆ ಅಲ್ವಾ. ವಿಷಯ ಏನಪ್ಪಾ ಅಂದ್ರೆ ಈ ಬಾರಿ ಲೆಕ್ಕಕ್ಕೆ ಸಿಗದ ಕೋಟಿ ಕೋಟಿ ಹಣದಲ್ಲಿ ಹಲವಾರು ಅದ್ದೂರಿ ವಿವಾಹಗಳು ಈ ಬಾರಿ ನಡೆದಿದೆಯಂತೆ. ಐಟಿ ವರದಿಯಿಂದ ಈ ಶಾಕಿಂಗ್ ವಿಷಯ ತಿಳಿದು ಬಂದಿದ್ದು, ಸದ್ಯ ಐಟಿ ಇಲಾಖೆ ಹಣದ ಮೂಲವನ್ನು ಪತ್ತೆ ಹಚ್ಚಲು ಐಷಾರಾಮಿ ಮದುವೆಗಳನ್ನು ನಡೆಸಿಕೊಟ್ಟ ವೆಡ್ಡಿಂಗ್ ಪ್ಲ್ಯಾನರ್‌ಗಳ ಮೇಲೆ ರೈಡ್ ನಡೆಸಿವೆ. ಈ ಸುದ್ದಿ ಇದೀಗ ಸಖತ್ ವೈರಲ್ ಆಗುತ್ತಿದೆ.
2024 ರಲ್ಲಿ ನಮ್ಮ ದೇಶದಲ್ಲಿ ಹಲವಾರು ಮದುವೆ ಸಮಾರಂಭಗಳು ನಡೆದಿವೆ. ಇವುಗಳಲ್ಲಿ ಕೆಲವು ಮದುವೆಗಳು ಸಿಂಪಲ್ ಆಗಿ ಕಡಿಮೆ ಖರ್ಚಿನಲ್ಲಿ ನಡೆದಿದ್ದರೆ, ಇನ್ನೂ ಕೆಲವು ಕೋಟಿ ಕೋಟಿ ವೆಚ್ಚದ ಐಷಾರಾಮಿ ವಿವಾಹಗಳು ಕೂಡಾ ನೆರವೇರಿದೆ. ಈ ವರ್ಷ 7,500 ಕೋಟಿ ರೂ. ಲೆಕ್ಕಕ್ಕೆ ಸಿಗದ ಹಣದಲ್ಲಿ ಸಾಕಷ್ಟು ಅದ್ದೂರಿ ಮದುವೆಗಳು ನಡೆದಿವೆ ಎಂಬ ವಿಚಾರ ಆದಾಯ ಇಲಾಖೆಗೆ ಗೊತ್ತಾಗಿತ್ತು, ಹಣದ ಮೂಲವನ್ನು ಪತ್ತೆ ಹಚ್ಚಲು ಐಟಿ ಇಲಾಖೆ ಐಷಾರಾಮಿ ಮದುವೆಗಳನ್ನು ನಡೆಸಿಕೊಟ್ಟ ವೆಡ್ಡಿಂಗ್ ಪ್ಲ್ಯಾನರ್‌ಗಳ ಮೇಲೆ ರೈಡ್ ನಡೆಸಿವೆ. ಈ ಸುದ್ದಿ ಇದೀಗ ಸಖತ್ ವೈರಲ್ ಆಗುತ್ತಿದೆ.
ಸೂಕ್ತ ತೆರಿಗೆ ಪಾವತಿಸದ ವ್ಯವಹಾರಗಳು ಮತ್ತು ಆದಾಯಗಳನ್ನು ಲೆಕ್ಕಕ್ಕೆ ಸಿಗದ ಹಣ ಎಂದು ಪರಿಗಣಿಸಲಾಗುತ್ತದೆ. ಇಂತಹ ಹಣಗಳು ಆರ್ಥಿಕ ವ್ಯವಹಾರದೊಳಗಿನ ಲೆಕ್ಕಾಚಾರಕ್ಕೂ ಸೇರಿರುವುದಿಲ್ಲ. ಇದನ್ನು ಕಪ್ಪು ಹಣ, ಅಕ್ರಮ ಗಳಿಕೆ ಮತ್ತು ವರದಿಯಾಗದ ಹಣ ಎಂದು ಕರೆಯಬಹುದು. ಇಂತಹ ಲೆಕ್ಕಕ್ಕೆ ಸಿಗದ ಕೋಟಿ ಕೋಟಿ ರೂ. ಮೌಲ್ಯದ ಹಣದಲ್ಲಿ ಈ ವರ್ಷ ಭಾರತದಲ್ಲಿ ಹಲವಾರು ಅದ್ದೂರಿ ಮದುವೆಗಳು ನಡೆದಿದ್ದು, ಈ ಹಣಕ್ಕೆ ಲೆಕ್ಕವೇ ಇಲ್ಲವೆಂದು ಆದಾಯ ಇಲಾಖೆ ಆತಂಕ ವ್ಯಕ್ತಪಡಿಸಿದೆ. ಅಷ್ಟೇ ಅಲ್ಲದೆ ಅದ್ದೂರಿ ಮದುವೆಗಳನ್ನು ನೆರವೇರಿಸಿದಂತಹ ವೆಡ್ಡಿಂಗ್ ಪ್ಲ್ಯಾನರ್‌ಗಳ ಮೇಲೆ ಐಟಿ ದಾಳಿ ನಡೆಸಿದೆ.
ಹೆಚ್ಚಿನವರು ಡೆಕೊರೇಷನ್‌ನಿಂದ ಹಿಡಿದು ಊಟದ ವ್ಯವಸ್ಥೆಯ ವರೆಗೆ ಮದುವೆಯ ಸಂಪೂರ್ಣ ಹೊಣೆಯನ್ನು ವೆಡ್ಡಿಂಗ್ ಪ್ಲ್ಯಾನರ್‌ಗಳಿಗೆ ವಹಿಸುತ್ತಾರೆ. ಇದೇ ಕಾರಣಕ್ಕೆ ಅದ್ದೂರಿ ಮದುವೆಗಳನ್ನು ನೆರವೇರಿಸಿಕೊಟ್ಟ ವೆಡ್ಡಿಂಗ್ ಪ್ಲ್ಯಾನರ್‌ಗಳ ಮೇಲೆ ಐಟಿ ರೈಡ್ ಮಾಡಿದೆ. ಈ ವಾರದ ಆರಂಭದಲ್ಲಿ ಈ ಶೋಧ ಕಾರ್ಯಾಚರಣೆ ಆರಂಭವಾಗಿದ್ದು, ಇದು ಹಲವು ದಿನಗಳವರೆಗೆ ವಿಸ್ತರಿಸುವ ಸಾಧ್ಯತೆ ಇದೆ. ಈ ತನಿಖೆ ಪ್ರಾಥಮಿಕವಾಗಿ ಲೆಕ್ಕವಿಲ್ಲದ ನಗದು ವಹಿವಾಟುಗಳನ್ನು ಪತ್ತೆ ಹಚ್ಚುವ ಗುರಿಯನ್ನು ಹೊಂದಿವೆ. ಜೊತೆಗೆ ವಿದೇಶದಲ್ಲಿ ನಡೆದಂತಹ ಭಾರತೀಯ ಡೆಸ್ಟಿನೇಷನ್ ವೆಡ್ಡಿಂಗ್‌ಗಳ ಹಣದ ಮೂಲವನ್ನು ಸಹ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ಎಕನಾಮಿಕ್ ಟೈಮ್ಸ್ ವರದಿ ಪ್ರಕಾರ, ಆದಾಯ ತೆರಿಗೆ ಇಲಾಖೆ ಜೈಪುರದ 20 ವೆಡ್ಡಿಂಗ್ ಪ್ಲ್ಯಾನರ್‌ಗಳ ಮೇಲೆ ದಾಳಿ ನಡೆಸಿವೆ. ಕಳೆದ ಒಂದು ವರ್ಷದಲ್ಲಿ ಅದ್ಧೂರಿ ವಿವಾಹ ಸಮಾರಂಭಗಳಿಗೆ 7500 ಕೋಟಿ ರೂ. ಲೆಕ್ಕಕ್ಕೆ ಸಿಗದ ಹಣ ಖರ್ಚಾಗಿದ್ದು, ಈ ಹಣಕ್ಕೆ ಲೆಕ್ಕವೇ ಇಲ್ಲ ಎಂದು ಆದಾಯ ತೆರಿಗೆ ಇಲಾಖೆ ಆತಂಕ ವ್ಯಕ್ತಪಡಿಸಿದೆ. ನಕಲಿ ಬಿಲ್‌ಗಳನ್ನು ಮಾಡುವ ಎಂಟ್ರಿ ಆಪರೇಟರ್‌ಗಳು, ಹವಾಲಾ ಏಜೆಂಟ್‌ಗಳು ಹೈದರಾಬಾದ್ ಮತ್ತು ಬೆಂಗಳೂರು ಮೂಲದ ಪಾಲುದಾರ ಸಹಯೋಗದಲ್ಲಿ ಈ ವ್ಯವಹಾರವನ್ನು ಮಾಡುತ್ತಿದ್ದಾರೆ ಎಂದು ವರದಿ ಹೇಳಿದೆ.
ಇದನ್ನೂ ಓದಿ: ಪತಿಯ ಬದಲಿಗೆ ಬೇರೊಬ್ಬ ವ್ಯಕ್ತಿಯ ವೀರ್ಯದಿಂದ ಮಹಿಳೆಗೆ ಗರ್ಭಧಾರಣೆ; ವೈದ್ಯರ ವಿರುದ್ಧ ಕಾನೂನು ಹೋರಾಟಕ್ಕೆ ಇಳಿದ ದಂಪತಿ
ಆದಾಯ ತೆರಿಗೆ ಇಲಾಖೆಯು ಮದುವೆಗೆ ತಗಲುವ ವೆಚ್ಚವನ್ನು ಮದುವೆಗೆ ಬರುವ ಅತಿಥಿಗಳ ಸಂಖ್ಯೆ ಮತ್ತು ಆಮಂತ್ರಣದ ಪ್ರಮಾಣವನ್ನು ಆಧರಿಸಿ ಲೆಕ್ಕಾಚಾರ ಮಾಡುತ್ತಿದೆ ಮತ್ತು ಕೇಟರಿಂಗ್ ಸಂಸ್ಥೆಗಳನ್ನೂ ಪ್ರಶ್ನಿಸಲಾಗುತ್ತಿದೆ. ಐಟಿ ಅಧಿಕಾರಿಯೊಬ್ಬರು, ಇದುವರೆಗಿನ ತನಿಖೆಯಲ್ಲಿ, ಜೈಪುರದ ಕೆಲವು ವೆಡ್ಡಿಂಗ್ ಪ್ಲ್ಯಾನರ್‌ಗಳೇ ಇದರ ಕಿಂಗ್‌ಪಿನ್‌ಗಳು ಎಂದು ಕಂಡುಬಂದಿದೆ ಮತ್ತು ಕಾರ್ಯಕ್ರಮಗಳನ್ನು ಆಯೋಜಿಸಲು ಇತರ ಸಿಟಿಗಳ ಪ್ಲ್ಯಾನರ್‌ಗಳನ್ನು ಕೂಡಾ ಸಂಪರ್ಕಿಸಿದ್ದಾರೆ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ